ನವದೆಹಲಿ:ಸತತ ನಾಲ್ಕು ದಿನಗಳ ಹಿನ್ನಡೆಯ ನಂತರ ಶುಕ್ರವಾರದಂದು ಬಿಎಸ್‌ಇ ಸೂಚ್ಯಂಕ 599 ಅಂಕಗಳ ಏರಿಕೆಯೊಂದಿಗೆ 73088 ಅಂಕಗಳನ್ನು ತಲುಪಿತು. ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕವು 151 ಅಂಕಗಳ ಏರಿಕೆಯೊಂದಿಗೆ 22,147 ಅಂಕಗಳನ್ನು ತಲುಪಿತು. ಇಸ್ರೇಲ್ ಮತ್ತು ಇರಾನ್ ಯುದ್ಧ ಭೀತಿಯಿಂದಾಗಿ, ಷೇರು ಮಾರುಕಟ್ಟೆಯ ಆರಂಭಿಕ ಕಾರ್ಯನಿರ್ವಹಣೆಯ ಮೇಲೆ ಒತ್ತಡವಿತ್ತು. ನಂತರ ಷೇರುಪೇಟೆ ಇದರಿಂದ ಚೇತರಿಸಿಕೊಂಡು ಏರುಹಾದಿಯಲ್ಲಿ ಮುಕ್ತಾಯಗೊಳ್ಳುವಲ್ಲಿ ಯಶಸ್ವಿಯಾಗಿತ್ತು.
ನೀವು ಸೋಮವಾರದಂದು ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣವನ್ನು ಗಳಿಸಲು ಬಯಸಿದರೆ, ಶುಕ್ರವಾರದಂದು ಸಾಕಷ್ಟು ಏರಿಕೆಯನ್ನು ದಾಖಲಿಸಿದ 10 ಪೆನ್ನಿ ಸ್ಟಾಕ್‌ಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಶುಕ್ರವಾರ ಷೇರು ಮಾರುಕಟ್ಟೆ ವ್ಯವಹಾರವು ಉತ್ತಮ ರೀತಿಯಲ್ಲಿ ಕೊನೆಗೊಂಡಿತು. ಇದರಲ್ಲಿ ಈ ಷೇರುಗಳಲ್ಲಿ ಉತ್ತಮ ಏರಿಕೆ ಕಂಡುಬಂದಿದೆ.
ಸೋಮವಾರದಂದು ಈ 10 ಪೆನ್ನಿ ಸ್ಟಾಕ್‌ಗಳ ಮೇಲೆ ಕಣ್ಣಿಡಿ
1) ಇನ್ನೊಕಾರ್ಪ್​ ಲಿಮಿಟೆಡ್​ (Innocorp Ltd) ಷೇರಿನ ಬೆಲೆ ಶುಕ್ರವಾರ ರೂ. 5.77 ರ ಮಟ್ಟವನ್ನು ತಲುಪಿತು. ಶೇಕಡಾ 19.96 ಏರಿಕೆಯನ್ನು ದಾಖಲಿಸಿದೆ.2) ರಿಸಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಷೇರಿನ ಬೆಲೆ ಶುಕ್ರವಾರ 0.63 ರ ಮಟ್ಟವನ್ನು ತಲುಪಿತು, ಶೇಕಡಾ 5 ರಷ್ಟು ಏರಿಕೆ ದಾಖಲಿಸಿದೆ.3) ಪ್ಯಾರಾಸ್ ಪೆಟ್ರೋಫಿಲ್ಸ್ ಲಿಮಿಟೆಡ್‌ನ ಷೇರಿನ ಬೆಲೆಯು ಶುಕ್ರವಾರ ರೂ. 3.36 ರ ಮಟ್ಟವನ್ನು ತಲುಪಿತು, ಇದು ಶೇಕಡಾ 5 ರಷ್ಟು ಏರಿಕೆಯನ್ನು ದಾಖಲಿಸಿದೆ.4) ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಷೇರಿನ ಬೆಲೆ ಶುಕ್ರವಾರ ರೂ. 4.41 ರ ಮಟ್ಟವನ್ನು ತಲುಪಿ, ಶೇಕಡಾ 5 ರಷ್ಟು ಏರಿಕೆ ದಾಖಲಿಸಿದೆ.5) ಅರಾವಳಿ ಸೆಕ್ಯುರಿಟೀಸ್ ಮತ್ತು ಫೈನಾನ್ಸ್ ಲಿಮಿಟೆಡ್‌ನ ಷೇರಿನ ಬೆಲೆ ಶುಕ್ರವಾರ ರೂ. 5.46 ರ ಮಟ್ಟವನ್ನು ತಲುಪಿತು, ಇದು ಶೇಕಡಾ 5 ರಷ್ಟು ಏರಿಕೆಯನ್ನು ದಾಖಲಿಸಿದೆ.6) ಚಾರ್ಮ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರು ಬೆಲೆ ಶುಕ್ರವಾರ 5.05 ರೂ.ಗೆ ತಲುಪಿದ್ದು, ಶೇ. 4.99 ರಷ್ಟು ಏರಿಕೆ ದಾಖಲಿಸಿದೆ.7) ಸನ್‌ಸಿಟಿ ಸಿಂಥೆಟಿಕ್ಸ್ ಲಿಮಿಟೆಡ್‌ನ ಷೇರಿನ ಬೆಲೆ ಶುಕ್ರವಾರ 7.58 ರೂ.ಗೆ ತಲುಪಿದ್ದು, ಶೇಕಡಾ 4.99 ರಷ್ಟು ಏರಿಕೆ ದಾಖಲಿಸಿದೆ.8) ಆರ್‌ಎಲ್‌ಎಫ್ ಲಿಮಿಟೆಡ್‌ನ ಷೇರಿನ ಬೆಲೆ ಶುಕ್ರವಾರ ರೂ. 9.68 ರ ಮಟ್ಟವನ್ನು ತಲುಪಿತು, ಇದು ಶೇಕಡಾ 4.99 ರಷ್ಟು ಏರಿಕೆ ದಾಖಲಿಸಿದೆ.9) ಪದ್ಮನಾಭ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರಿನ ಬೆಲೆ ಶುಕ್ರವಾರ ರೂ. 5.07 ರ ಮಟ್ಟವನ್ನು ತಲುಪಿತು, ಶೇಕಡಾ 4.97 ರಷ್ಟು ಏರಿಕೆ ದಾಖಲಿಸಿದೆ.10) ಪದ್ಮಾಲಯ ಟೆಲಿಫಿಲ್ಮ್ಸ್ ಲಿಮಿಟೆಡ್‌ನ ಷೇರು ಬೆಲೆ ಶುಕ್ರವಾರ 2.97 ರೂ.ಗೆ ತಲುಪಿದ್ದು, ಶೇಕಡಾ 4.95 ರಷ್ಟು ಏರಿಕೆ ದಾಖಲಿಸಿದೆ.

ನಿರಂತರವಾಗಿ ಏರುತ್ತಿದೆ ಡಿಫೆನ್ಸ್ ಕಂಪನಿ ಷೇರು ಬೆಲೆ: ಮತ್ತಷ್ಟು ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಿರುವುದೇಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − three =
Remember me
