ಮುಂಬೈ:ಈ ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳ ಷೇರು ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ನೀಡಿವೆ. ಈ ಕಂಪನಿಗಳಲ್ಲಿ ಎರಡು ಅಷ್ಟೇನೂ ಹೆಸರಿಲ್ಲದ ಕಂಪನಿಗಳು ಸೇರಿವೆ. ಕೆಸಿಕೆ ಇಂಡಸ್ಟ್ರೀಸ್ ಮತ್ತು ಟ್ರೈಡೆಂಟ್ ಟೆಕ್ಲ್ಯಾಬ್ಸ್ ಈ ಕಂಪನಿಗಳಾಗಿವೆ. ಈ ವರ್ಷ ಇಲ್ಲಿಯವರೆಗೆ ಈ ಕಂಪನಿಗಳ ಷೇರುಗಳ ಬೆಲೆಗಳು ಶೇಕಡಾ 700 ರಷ್ಟು ಏರಿಕೆ ಕಂಡಿವೆ.
ಕೆಸಿಕೆ ಇಂಡಸ್ಟ್ರೀಸ್ ಒಂದು ಸಣ್ಣ ಕಂಪನಿಯಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಗುರುವಾರ ಶೇಕಡಾ 1.45 ಕುಸಿತದೊಂದಿಗೆ ರೂ 204 ರ ಮಟ್ಟ ತಲುಪಿವೆ.
2024 ರ ಆರಂಭದಿಂದ ಇಲ್ಲಿಯವರೆಗೆ, ಈ ಕಂಪನಿಯ ಷೇರುಗಳ ಬೆಲೆ 680 ಪ್ರತಿಶತದಷ್ಟು ಹೆಚ್ಚಾಗಿದೆ. ಜೂನ್ 3 ರಂದು ಕಂಪನಿಯ ಷೇರುಗಳ ಬೆಲೆ 26.50 ರೂ. ಇತ್ತು. ಇದೀಗ 200 ರೂ.ಗಳ ಗಡಿ ದಾಟಿದೆ.
ಈ ಮಲ್ಟಿಬ್ಯಾಗರ್ ಷೇರುಗಳ ಬೆಲೆಗಳು ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಷೇರು ಬೆಲೆ 184 ರೂ.ನಿಂದ 204 ರೂ.ಗೆ ತಲುಪಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 217.50 ರೂ. ಹಾಗೂ ಕನಿಷ್ಠ ಬೆಲೆ 20.05 ರೂ.
ಟ್ರೈಡೆಂಟ್ ಟೆಕ್ಲ್ಯಾಬ್ಸ್ ಕಂಪನಿಯ ಷೇರುಗಳ ಬೆಲೆ ಗುರುವಾರದಂದು ಶೇಕಡಾ 5ರಷ್ಟು ಕುಸಿತದೊಂದಿಗೆ 853.50 ರೂ. ಮುಟ್ಟಿತು.
ಈ ವರ್ಷದ ಆರಂಭದಲ್ಲಿ ಕಂಪನಿಯ ಷೇರಿನ ಬೆಲೆ 108 ರೂ. ಇತ್ತು. ಅಲ್ಲಿಂದ ಇಲ್ಲಿಯವರೆಗೆ ಷೇರುಗಳ ಬೆಲೆ 689 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ಈ ಷೇರುಗಳ ಬೆಲೆ 408 ರೂ. ಇತ್ತು. ಅಂದಿನಿಂದ ಇಂದಿನವರೆಗೆ ಶೇ. 109ರಷ್ಟು ಹೆಚ್ಚಳ ಕಂಡಿದೆ.
ಕಂಪನಿಯ 52 ವಾರಗಳ ಗರಿಷ್ಠ ಬೆಲೆ 920 ರೂ. ಇದೆ. ಗುರುವಾರ ಕಂಪನಿಯ ಷೇರುಗಳು ಬೆಲೆ ಈ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಸ್ಟಾಕ್‌ನ 52 ವಾರಗಳ ಕನಿಷ್ಠ ಬೆಲೆ ರೂ 93.25 ಆಗಿದೆ.
ಗರಿಷ್ಠ ಬೆಲೆ ಮುಟ್ಟಿದ ರತ್ನವೀರ್​ ಕಂಪನಿ ಷೇರು: ರೂ. 200 ಆಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ

ಷೇರುಪೇಟೆಯಲ್ಲಿ ಐತಿಹಾಸಿಕ ದಾಖಲೆ: 79,000 ಗಡಿ ದಾಟಿದ ಬಿಎಸ್​ಇ ಸೆನ್ಸೆಕ್ಸ್​; 24,000 ಮೀರಿದ ನಿಫ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
