ಗುಜರಾತ್:ವಡೋದರದ ಫತೇಪುರ ಪ್ರದೇಶದ ಮಸೀದಿ ಬಳಿ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಿಂದ ಕೆಲ ವಾಹನಗಳು ಜಖಂಗೊಂಡಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೆರವಣಿಗೆಯ ಸಮಯದಲ್ಲಿ ಜನರು ಪರಸ್ಪರ ಕಲ್ಲು ಎಸೆಯುತ್ತಿರುವುದ ಕಂಡು ಬಂದಿದೆ.
ಮೆರವಣಿಗೆಯು ತನ್ನ ಯೋಜಿತ ಮಾರ್ಗದಲ್ಲಿ ಪೊಲೀಸರ ರಕ್ಷಣೆಯಲ್ಲಿ ಸಾಗಿದೆ. ಹಿಂದಿನ ದಿನವೂ ಇದೇ ಮಾರ್ಗದಲ್ಲಿ ಮೆರವಣಿಗೆ ನಿರತರ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದೀಗ ಬಜರಂಗದಳದ ಸ್ಥಳೀಯ ಮುಖಂಡರೊಬ್ಬರು, ಈ ಹಿಂದೆ ಇಂತಹ ಘಟನೆ ನಡೆದಿದೆ ಎಂದು ತಿಳಿದಿದ್ದರೂ, ಮೆರವಣಿಗೆಯ ವೇಳೆ ಎಲ್ಲಿಯೂ ಪೊಲೀಸರು ಕಾಣಲಿಲ್ಲ ಎಂದು ಆರೋಪಿಸಿರುವುದು ವರದಿಯಾಗಿದೆ.
ಬಜರಂಗ ಮುಖಂಡರ ಆರೋಪವನ್ನು ಉಪ ಪೊಲೀಸ್ ಆಯುಕ್ತ ಯಶಪಾಲ್ ಜಗನಿಯಾ ತಳ್ಳಿಹಾಕಿದ್ದು, ನಗರದಲ್ಲಿ ನಡೆದ ಪ್ರತಿ ಮೆರವಣಿಗೆಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 8 =
Remember me
