ಜೈಪುರ:200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ಇಂದು (ನವೆಂಬರ್ 25) ಮತದಾನ ನಡೆಯುತ್ತಿದ್ದು, ಆಡಳಿತರೂಢ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಮುಗಿಲು ಮುಟ್ಟಿದೆ. ಇದೀಗ ಎರಡು ಅಭ್ಯರ್ಥಿಗಳ ನಡುವಿನ ವಾಕ್ಸಮರದಿಂದಾಗಿ ಕಲ್ಲೆಸೆತ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ರಾಜಸ್ಥಾನದ ಸಿಕಾರ್​ನಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್​ ಅಭ್ಯರ್ಥಿ ಹಕಂ ಅಲಿ ಖಾನ್ ಮತ್ತು ಸ್ವತಂತ್ರ ಅಭ್ಯರ್ಥಿ ಮಧುಸೂದನ್ ಭಿಂಡಾ ನಡುವಿನ ವಾಕ್ಸಮರ ಕಲ್ಲೆಸೆತಕ್ಕೆ ಕಾರಣವಾಗಿದ್ದು, ಘಟನೆಯಲ್ಲಿ ಓರ್ವ ಪೊಲೀಸ್​ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
#WATCH| Rajasthan Assembly elections: On Stone pelting in Sikar, Fathepur DSP Ramprasad says, "There has been stone pelting among some people after a verbal clash. Some people have been disbursed, and some people have been detained. We will take strict action. The polling is…pic.twitter.com/wpdpHPsaxf
ಇದನ್ನೂ ಓದಿ:ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮ್​ಗೆ ಮೋದಿ ಭೇಟಿ; ಪ್ರಧಾನಿ ನಡೆಯನ್ನು ಹಾಡಿಹೊಗಳಿದ ಮಾಜಿ ಕೋಚ್
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಮ್​ಪ್ರಸಾದ್, ವಾರ್ಡ್​ ನಂ 40ರ ಬೋಚಿವಾಲ ಭವನ ಮತಗಟ್ಟೆಯಲ್ಲಿ ಘಟನೆ ಸಂಭವಿಸಿದ್ದು, ಅಡ್ಡಮತದಾನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ವಾಕ್ಸಮರದಿಂದಾಗಿ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ.
ಘಟನೆಯಲ್ಲಿ ಪೊಲೀಸ್​ ಅಧಿಕಾರಿ ರಾಕೇಶ್​ ಗಂಭೀರವಾಗಿ ಗಾಯಗೊಂಢಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಗುಂಪುಗಳನ್ನು ಚದುರಿಸಲಾಗಿದ್ದು, ಈ ರೀತಿಯ ಘಟನೆಗಳು ಮರುಕಳಿದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಎಲ್ಲರಿಗೂ ಭದ್ರತೆ ಒದಗಿಸಲಾಗಿದ್ದು, ಜನರು ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಮ್​ಪ್ರಸಾದ್​ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − 2 =
Remember me
