ಬಿಹಾರದಲ್ಲಿ ಒಂದೆಡೆ ಎರಡನೇ ಹಂತದ ಮತದಾನ ನಡೆಯುತ್ತಿದ್ದರೆ, ಮತ್ತೊಂದೆಡೆ ಮೂರನೇ ಹಂತದ ಮತದಾನಕ್ಕೆ ರಾಜಕೀಯ ದಿಗ್ಗಜರ ಪ್ರಚಾರ ನಡೆಯುತ್ತಿದೆ.
ನವೆಂಬರ್​ 7ರಂದು ನಡೆಯಲಿರುವ ಮೂರನೇ ಹಂತದ ಮತದಾನ ನಿಮಿತ್ತ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅರಾರಿಯಾ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ಬೆಳಗ್ಗೆ ಚುನಾವಣಾ ರ್ಯಾಲಿ ನಡೆಸಿದ್ದಾರೆ. ಹಾಗೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಠಿಹಾರ್​ ಮತ್ತು ಕಿಶನ್​ಗಂಜ್​ಗಳಲ್ಲಿ ಪ್ರಚಾರ ಮಾಡಿದ್ದಾರೆ.
ಹಾಗೇ ಬಿಹಾರ ಹಾಲಿ ಸಿಎಂ ನಿತೀಶ್​ ಕುಮಾರ್ ಅವರು ಕೂಡ ಚುನಾವಣಾ ಪ್ರಚಾರ ನಡೆಸಿದ್ದು, ಈ ವೇಳೆ ಕಲ್ಲು, ಈರುಳ್ಳಿಗಳನ್ನು ಅವರೆಡೆಗೆ ಎಸೆಯಲಾಗಿದೆ. ಮಧುಬಾನಿಯ ಹರ್ಲಾಕಿ ಎಂಬಲ್ಲಿ ನಿತೀಶ್ ಕುಮಾರ್​ ಪ್ರಚಾರಸಭೆಯಲ್ಲಿ ಭಾಷಣ ಮಾಡುತ್ತ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ವ್ಯಕ್ತಿಯೋರ್ವ ಅವರೆಡೆಗೆ ಈರುಳ್ಳಿಯನ್ನು ಎಸೆದಿದ್ದಾನೆ..ನಂತರ..ರಾಜ್ಯದಲ್ಲಿ ಲಿಕ್ಕರ್​ ಸ್ಮಗ್ಲಿಂಗ್​ ದಂಧೆ ಬಹಿರಂಗವಾಗಿಯೇ ನಡೆಯುತ್ತಿದೆ. ಅದನ್ನು ನಿಯಂತ್ರಣ ಮಾಡುವುದರಲ್ಲಿ ನೀವು ವಿಫಲರಾಗಿದ್ದೀರಿ ಎಂದು ಕೂಗಿದ್ದಾನೆ.ಇದನ್ನೂ ಓದಿ:ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ವಿಶೇಷ ಪೂಜೆ, ಅಭಿಷೇಕ…
ಕೂಡಲೇ ಬಾಡಿಗಾರ್ಡ್​ಗಳು ಮುಂದೆ ಬಂದು ನಿತೀಶ್​ ಕುಮಾರ್​ಗೆ ಎದುರಾಗಿ ನಿಂತಿದ್ದಾರೆ. ಆದರೆ ಅವರನ್ನು ತಡೆದ ಸಿಎಂ, ಎಸೆಯಲಿ ಬಿಡಿ..ಆತನ ಮನಸಿಗೆ ಬಂದಷ್ಟು ಎಸೆಯಲಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
#Correction: Onions pelted during Chief Minister Nitish Kumar's election rally in Madhubani's Harlakhi.#BiharPollspic.twitter.com/0NwXZ3WIfm
— ANI (@ANI)November 3, 2020

ಬುರ್ಖಾ ಧರಿಸಿ ಬರುವ ಮಹಿಳೆಯರಿಂದ ಬೋಗಸ್​ ಮತದಾನ; ಆರೋಪ ಮಾಡಿದ ಸಂಗೀತಾ ಚವ್ಹಾಣ್​​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − 6 =
Remember me
