ನವದೆಹಲಿ :ಇಂದು ಬೆಳಿಗ್ಗೆ ಟ್ವಿಟರ್​, ಭಾರತದಲ್ಲಿನ ತನ್ನ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ದೇಶದ ಹೊಸ ಐಟಿ ಕಾನೂನುಗಳಿಂದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಿತ್ತು. ಟ್ವಿಟರ್​ ಇಂಡಿಯಾದ ದೆಹಲಿ ಮತ್ತು ಗುರ್ಗಾವ್​ನ ಕಛೇರಿಗಳಿಗೆ ಸೋಮವಾರ ದೆಹಲಿ ಪೊಲೀಸ್​ ಭೇಟಿ ನೀಡಿ ತನಿಖೆಯಲ್ಲಿ ಪಾಲ್ಗೊಳ್ಳಲು ನೋಟೀಸ್​ ನೀಡಿದ್ದ ಹಿನ್ನೆಲೆಯಲ್ಲಿ ಟ್ವಿಟರ್ ಈ ಹೇಳಿಕೆ ನೀಡಿತ್ತು.
ಈ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ವಾಕ್​ಸ್ವಾತಂತ್ರ್ಯಕ್ಕೆ ಶತಮಾನಗಳಿಂದಲೂ ಮನ್ನಣೆ ಕೊಡುತ್ತಾ ಬಂದಿರುವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತಕ್ಕೆ ಟ್ವಿಟರ್​​ ತನ್ನ ನಿಯಮಗಳನ್ನು ನಿರ್ದೇಶಿಸುವ ಪ್ರಯತ್ನ ಮಾಡುತ್ತಿದೆ. “ವಾಕ್​ಸ್ವಾತಂತ್ರ್ಯ ಒಂದು ವಿದೇಶೀ ಲಾಭಾಕಾಂಕ್ಷಿ ಕಂಪೆನಿಯಾದ ಟ್ವಿಟರ್​ನ ಪೂರ್ವಭಾವಿಯಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಮತ್ತು ಅದರ ಸಂಸ್ಥೆಗಳ ಬದ್ಧತೆಯಾಗಿದೆ” ಎಂದು ಹೇಳಿದೆ. “ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ವಿನಾಕಾರಣ ಭಾರತಕ್ಕೆ ಕೆಟ್ಟ ಹೆಸರು ತರುವಂತಹ ಆಧಾರವಿಲ್ಲದ ಹೇಳಿಕೆಯನ್ನು ಟ್ವಿಟರ್​ ನೀಡಿರುವುದು ಖಂಡನೀಯ” ಎಂದಿದೆ.
Press Release by Ministry of Electronics and IT in response to the statements made by Twitter Inc.pic.twitter.com/hQxCGuoEaG
— Ministry of Electronics & IT (@GoI_MeitY)May 27, 2021

ಎಲೆಕ್ಟ್ರಾನಿಕ್ಸ್​ ಮತ್ತು ಇನ್​ಫರ್ಮೇಷನ್ ಟೆಕ್ನಾಲಜಿ ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಟ್ವಿಟರ್ ತನ್ನ ನಡವಳಿಕೆಯಿಂದ ಮತ್ತು ಉದ್ದೇಶಪೂರಿತವಾಗಿ ನಿಯಮಗಳನ್ನು ಪಾಲಿಸಲು ನಿರಾಕರಿಸುವ ಮೂಲಕ ಭಾರತದ ಕಾನೂನು ವ್ಯವಸ್ಥೆಯನ್ನು ಅಪಮಾನಿಸುತ್ತಿದೆ ಎಂದಿದೆ. ಟ್ವಿಟರ್​ ಯದ್ವಾತದ್ವಾ ಮಾತನಾಡುವುದನ್ನು ಬಿಟ್ಟು, ದೇಶದ ಕಾನೂನುಗಳನ್ನು ಪಾಲಿಸಬೇಕು ಎಂದಿರುವ ಸಚಿವಾಲಯ, “ಕಾನೂನುಗಳನ್ನು ರಚಿಸುವುದು ಸರ್ಕಾರದ ಕೆಲಸ. ಕೇವಲ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್ ಆ ಬಗ್ಗೆ ನಿಯಮಗಳನ್ನು ಹೇಳುವ ಅರ್ಹತೆ ಹೊಂದಿಲ್ಲ” ಎಂದಿದೆ.(ಏಜೆನ್ಸೀಸ್)
ಚುನಾವಣಾ ಫಲಿತಾಂಶದ ನಂತರ ಒಂದೇ ತಿಂಗಳಲ್ಲಿ 14 ಬಾರಿ ತೈಲ ದರ ಏರಿಕೆ

‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

ಒಂದು ಡೋಸ್​ ಕೋವಿಶೀಲ್ಡ್​, ಇನ್ನೊಂದು ಡೋಸ್​ ಕೋವಾಕ್ಸಿನ್ ! ಸರ್ಕಾರ ಹೇಳಿದ್ದೇನು ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
