ನವದೆಹಲಿ :ದೆಹಲಿಯ ಏಮ್ಸ್​​ ನಿರ್ದೇಶಕರಾದ ಡಾ. ರಣದೀಪ್​ ಗುಲೇರಿಯ ಅವರು ಕರೊನಾ ರೋಗಿಗಳ ಚಿಕಿತ್ಸೆ ಮಾಡುವಾಗ ಮೆಡಿಕಲ್​ ಪ್ರೋಟೋಕಾಲ್​ಅನ್ನು ಸರಿಯಾಗಿ ಪಾಲಿಸುವ ಅಗತ್ಯದ ಬಗ್ಗೆ ಒತ್ತು ನೀಡಿದ್ದಾರೆ. ಕರೊನಾ ಸೋಂಕಿತರು ಬ್ಲಾಕ್ ಫಂಗಸ್​ನ ಬಾಧೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸ್ಟೆರಾಯ್ಡ್​​ಗಳನ್ನು ಬೇಜವಾಬ್ದಾರಿಯಾಗಿ ಬಳಸಬಾರದೆಂದು ಎಚ್ಚರಿಸಿದ್ದಾರೆ.
“ಕರೊನಾ ಪ್ರಕರಣಗಳು ಹೆಚ್ಚುತ್ತಿರುವಂತೆ, ಆಸ್ಪತ್ರೆಗಳಲ್ಲಿ ಇನ್​​ಫೆಕ್ಷನ್ ಕಂಟ್ರೋಲ್ ಪ್ರಾಕ್ಟೀಸಸ್​​ನ ಪ್ರೊಟೊಕಾಲ್ ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಫಂಗಸ್ ಮತ್ತು ಬ್ಯಾಕ್ಟೀರಿಯಗಳಿಂದ ಉಂಟಾಗುತ್ತಿರುವ ಸೆಕೆಂಡರಿ ಇನ್​​ಫೆಕ್ಷನ್ಸ್​ನಿಂದ ಹೆಚ್ಚು ಸಾವು ಸಂಭವಿಸುತ್ತಿರುವುದು ಕಂಡುಬಂದಿದೆ” ಎಂದು ಡಾ. ಗುಲೇರಿಯಾ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ:1 ರಿಂದ 9ನೇ ತರಗತಿ ಫಲಿತಾಂಶ : ಸಾಟ್ಸ್​​ ಅಪ್​ಲೋಡ್​ಗೆ ಕಾಲಾವಕಾಶ
ಬ್ಲಾಕ್​ ಫಂಗಸ್​ ಅಥವಾ ಮ್ಯೂಕರ್​​ಮೈಕೋಸಿಸ್​ನ ಸ್ಪೋರ್​ಗಳು ಮಣ್ಣು, ಗಾಳಿ ಮತ್ತು ಊಟದಲ್ಲೂ ಇರುತ್ತವೆ. ಆದರೆ ಅವು ಸಾಮಾನ್ಯವಾಗಿ ಬಾಧಕವಲ್ಲ ಮತ್ತು ಸೋಂಕುಂಟು ಮಾಡುವುದಿಲ್ಲ. ಕೋವಿಡ್​ನ ಮುಂಚೆ ಬಹಳ ಕಡಿಮೆ ಪ್ರಕರಣಗಳಿದ್ದವು. ಈಗ ಕೋವಿಡ್​ನಿಂದಾಗಿ ಹೆಚ್ಚು ಕೇಸುಗಳು ವರದಿಯಾಗುತ್ತಿವೆ. ಮೂಕರ್​ಮೈಕೋಸಿಸ್​ ಸೋಂಕಿನ ಹಿಂದಿನ ಬಹುದೊಡ್ಡ ಕಾರಣವೆಂದರೆ ಸ್ಟೆರಾಯ್ಡ್​​ಗಳ ದುರ್ಬಳಕೆ ಎಂದಿದ್ದಾರೆ.
“ಡಯಾಬೆಟೀಸ್​ ಇರುವ, ಕೋವಿಡ್​ ಪಾಸಿಟೀವ್ ಆಗಿರುವ ಮತ್ತು ಸ್ಟೆರಾಯ್ಡ್​ಗಳನ್ನು ತೆಗೆದುಕೊಳ್ಳುತ್ತಿರುವ ರೋಗಿಗಳಲ್ಲಿ ಫಂಗಲ್ ಇನ್​ಫೆಕ್ಷನ್​ನ ಸಾಧ್ಯತೆಗಳು ಹೆಚ್ಚಿವೆ. ಅದನ್ನು ತಡೆಯಲು ನಾವು ಸ್ಟೆರಾಯ್ಡ್​ಗಳ ದುರ್ಬಳಕೆಯನ್ನು ನಿಲ್ಲಿಸಬೇಕು” ಎಂದು ಗುಲೇರಿಯಾ ಹೇಳಿದ್ದಾರೆ.
ಇದನ್ನೂ ಓದಿ:ಯಾರದ್ದೋ ಹೆಸರು ಇನ್ಯಾರದ್ದೋ ಫೋಟೋ! ಮತ್ತೆ ಟ್ರೋಲ್​ ಆದ ಕಾಂಗ್ರೆಸ್
ಏಮ್ಸ್​ ಆಸ್ಪತ್ರೆಯಲ್ಲಿ 23 ರೋಗಿಗಳಿಗೆ ಫಂಗಲ್​ ಇನ್​ಫೆಕ್ಷನ್​ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ 20 ಜನ ಕೋವಿಡ್ ಪಾಸಿಟಿವ್, 3 ಜನ ಕೋವಿಡ್​ ನೆಗೆಟೀವ್ ಆಗಿದ್ದಾರೆ. ಹಲವು ರಾಜ್ಯಗಳು 500 ಕ್ಕೂ ಹೆಚ್ಚು ಮ್ಯೂಕರ್​ಮೈಕೋಸಿಸ್​​ನ ಪ್ರಕರಣಗಳನ್ನು ವರದಿ ಮಾಡಿವೆ. ಈ ಶಿಲೀಂಧ್ರದ ಸೋಂಕು ಮುಖದ ಮೇಲೆ ಪರಿಣಾಮ ಬೀರಬಹುದು. ಮೂಗಿಗೆ, ಕಣ್ಣಿನ ಕಕ್ಷೆ ಅಥವಾ ಮೆದುಳಿಗೆ ಸೋಂಕು ತಗುಲಿಸುತ್ತದೆ. ಇದರಿಂದ ದೃಷ್ಟಿ ನಷ್ಟ ಸಹ ಉಂಟಾಗಬಹುದು ಮತ್ತು ಇದು ಶ್ವಾಸಕೋಶಕ್ಕೂ ಹರಡಬಹುದು ಎಂದು ಡಾ.ಗುಲೇರಿಯ ಎಚ್ಚರಿಸಿದ್ದಾರೆ.(ಏಜೆನ್ಸೀಸ್)
ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

ಕೇಂದ್ರ ನೀಡಿರುವ ವೆಂಟಿಲೇಟರ್​ಗಳ ಆಡಿಟ್​ : ಪ್ರಧಾನಿ ಮೋದಿ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
