ಹೈದರಾಬಾದ್​:ಬಯಕೆ ಈಡೇರಿತು ಎಂದು ತಿರುಪತಿ ತಿಮ್ಮಪ್ಪನಿಗೆ ನೀಡಿದ್ದ ಮುಡಿ ಕೊಡುವ ಪ್ರತಿಜ್ಞೆಯನ್ನು ನೆರವೇರಿಸಿ ಖುಷಿಯಿಂದಲೇ ಮನೆಗೆ ಮರಳಿದ ಉಬರ್​ ಚಾಲಕ ಶ್ರೀಕಾಂತನಿಗೆ ಭಾರಿ ಆಘಾತವೊಂದು ಕಾದಿತ್ತು. ಆತನ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.
ಹೈದರಾಬಾದ್​ನಲ್ಲಿ ವಾಸವಿರುವ ಶ್ರೀಕಾಂತ್​ ತಿರುಪತಿ ತಿಮ್ಮಪ್ಪ ದರ್ಶನ ಮುಗಿಸಿ ಮನೆಗೆ ಬಂದು ಕೆಲಸಕ್ಕೆ ಹಾಜರಾಗಲು ಮುಂದಾದಾಗ ಆತನಿಗೆ ಶಾಕ್​ ಎದುರಾಯಿತು. ಅಂದಹಾಗೆ ಈ ಘಟನೆ ಫೆಬ್ರವರಿ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿರಿ:ಮಕ್ಕಳ ಎದುರೇ ಗಂಡ ಸೆಕ್ಸ್​ಫಿಲ್ಮ್ ನೋಡ್ತಿರ್ತಾರೆ: ಹಳಿತಪ್ಪುತ್ತಿರುವ ಸಂಸಾರವನ್ನು ಹೇಗೆ ಸರಿಮಾಡಲಿ?
ಉಬರ್​ ಪಾಲುದಾರ ಖಾತೆಗೆ ಲಾಗ್​ ಇನ್​ ಆಗಲು ಶ್ರೀಕಾಂತ್​ ಮುಂದಾದಾಗಿದ್ದಾರೆ. ಆದರೆ, ಮುಡಿ ಕೊಟ್ಟಿದ್ದರಿಂದ ಶ್ರೀಕಾಂತ್​ ಮುಖವನ್ನು ಗುರುತಿಸಲು ಆ್ಯಪ್​ಗೆ ಸಾಧ್ಯವಾಗಿಲ್ಲ. ಹೀಗಾಗಿ ಸೆಲ್ಫಿ ತೆಗೆದುಕೊಂಡು ಅನೇಕ ಬಾರಿ ಲಾಗಿನ್​ ಆಗಲು ಯತ್ನಿಸಿದ್ದಾರೆ. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಆತನ ಖಾತೆಯೇ ರದ್ದಾಗಿದೆ.
ಈ ಬಗ್ಗೆ ಮಾತನಾಡಿರುವ ಶ್ರೀಕಾಂತ್​, ನನ್ನ ಪ್ರತಿಜ್ಞೆಯನ್ನು ನೆರವೇರಿಸಲು ತಿರುಪತಿಗೆ ಹೋಗಿದ್ದೆ. ನಾನು ಮುಡಿಯನ್ನು ಸಹ ನೀಡಿದೆ. ದರ್ಶನ ಮುಗಿಸಿ ಮರಳಿ ಬಂದಾಗ ಉಬರ್​ ಖಾತೆಗೆ ಲಾಗಿನ್​ ಆಗಲು ಪ್ರಯತ್ನಿಸಿದೆ. ಆದರೆ, ನನ್ನ ಮುಖವನ್ನು ಗುರುತಿಸಲಿಲ್ಲ. ಹೀಗಾಗಿ ನನ್ನನ್ನು ಬ್ಲಾಕ್​ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಾರನೇ ದಿನ ಉಬರ್​ ಕಚೇರಿಗೆ ಮರು ನೋಂದಣಿಗೆ ತೆರಳಿದೆ. ಆದರೆ, ಮತ್ತೊಬ್ಬನನ್ನು ಚಾಲಕನಾಗಿ ನನ್ನ ಕಾರಿಗೆ ನೇಮಿಸಿಕೊಂಡರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಉಬರ್​ ಅಧಿಕಾರಿಗಳು ಹೇಳಿದರು. ಆದರೆ, ಇನ್ನೊಬ್ಬ ಚಾಲಕನನ್ನು ಪಡೆಯಲು ನನ್ನಿಂದ ಸಾಧ್ಯವಾಗದು. ಸುಮಾರು 1 ತಿಂಗಳವರೆಗೆ ನಾನು ಉಬರ್​ ಕಚೇರಿಗೆ ಅಲೆದಾಡಿದೆ. ಉನ್ನತ ಅಧಿಕಾರಿಗಳ ಜತೆ ಮಾತನಾಡುತ್ತೇನೆಂದರು. ಈ ಮೇಲ್ ವಿಳಾಸ ನೀಡಿದರು. ಆದರೆ, ಸಮಸ್ಯೆ ಬಗೆಹರಿದಿಲ್ಲ. ಮತ್ತೊಬ್ಬ ಚಾಲಕನನ್ನು ಆಯ್ಕೆ ಮಾಡಿಕೊಳ್ಳಲು ಹೇಳುತ್ತಿದ್ದಾರೆ ಎಂದು ಶ್ರೀಕಾಂತ್​ ತಿಳಿಸಿದರು.
ಇದನ್ನೂ ಓದಿರಿ:ಇಂಥವರೂ ಇರ್ತಾರಾ? ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರಿಂದ ತಲೆತಗ್ಗಿಸೋ ಕೃತ್ಯ!
ಶ್ರೀಕಾಂತ್​ ಸುಮಾರು ಒಂದೂವರೆ ವರ್ಷದಿಂದ ಉಬರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. 1428 ಪ್ರವಾಸಗಳಿಗೆ 4.67 ಸ್ಟಾರ್​ ರೇಟಿಂಗ್​ ಪಡೆದುಕೊಂಡಿದ್ದಾರೆ. ಆದರೆ, ಇದೀಗ ಉಬರ್​ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.(ಏಜೆನ್ಸೀಸ್​)
ಆನ್​ಲೈನ್​ ಮೀಟಿಂಗ್​ ನಡುವೆಯೇ ಬೆತ್ತಲೆ ಕಾಣಿಸಿಕೊಂಡ ರಾಜಕಾರಣಿಯ ಪತ್ನಿ: ವೈರಲ್​ ಆಯ್ತು ವಿಡಿಯೋ!

ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ

“ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
