ಭಾರತದ ರಾಷ್ಟ್ರೀಯ ಆತ್ಮಹತ್ಯೆ ತಡೆ ಕಾರ್ಯತಂತ್ರವು ಮುಂಬರುವ ದಶಕದಲ್ಲಿ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಮತ್ತು ಆತ್ಮಹತ್ಯೆಗಳನ್ನು ತಡೆಗಟ್ಟಲು ವೇದಿಕೆಯನ್ನು ಒದಗಿಸುತ್ತದೆ ಎಂಬುದು ಸಚಿವಾಲಯದ ನಿರೀಕ್ಷೆಯಾಗಿದೆ. 2023ರ ವೇಳೆಗೆ ದೇಶದಲ್ಲಿ ಆತ್ಮಹತ್ಯೆ ಪ್ರಮಾಣವನ್ನು ಶೇಕಡಾ 10ರಷ್ಟು ಕಡಿಮೆ ಮಾಡುವುದು ಈ ಕಾರ್ಯತಂತ್ರದ ಗುರಿಯಾಗಿದೆ. ಈ ಕಾರ್ಯತಂತ್ರವು ದೇಶದಲ್ಲಿ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲು ರೂಪುರೇಷೆಗಳ ಚೌಕಟ್ಟನ್ನು ಒದಗಿಸುತ್ತದೆ. ನಾಲ್ಕು ಉದ್ದೇಶ: ಆತ್ಮಹತ್ಯೆ ತಡೆ ಕಾರ್ಯತಂತ್ರದಲ್ಲಿ ಪ್ರಮುಖವಾಗಿ ನಾಲ್ಕು ಉದ್ದೇಶಗಳಿವೆ. ಮೊದಲನೆಯದಾಗಿ, ಮುಂದಿನ ಮೂರು ವರ್ಷಗಳಲ್ಲಿ ಆತ್ಮಹತ್ಯೆಗೆ ಪರಿಣಾಮಕಾರಿ ಕಣ್ಗಾವಲು ಕಾರ್ಯವಿಧಾನಗಳನ್ನು ರಚಿಸಲು ಪ್ರಯತ್ನಿಸುವುದು. ಎರಡನೆಯದಾಗಿ, ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಆತ್ಮಹತ್ಯೆ ತಡೆಗಟ್ಟುವ ಸೇವೆಗಳನ್ನು ಒದಗಿಸುವ ಮನೋವೈದ್ಯಕೀಯ ಹೊರರೋಗಿ ವಿಭಾಗಗಳನ್ನು ಸ್ಥಾಪಿಸಲು ಪ್ರಯತ್ನಿಸುವುದು. ಮೂರನೆಯದಾಗಿ, ಮುಂದಿನ ಎಂಟು ವರ್ಷಗಳಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಯೋಗಕ್ಷೇಮ ಪಠ್ಯಕ್ರಮವನ್ನು ಸಂಯೋಜಿಸುವ ಗುರಿ. ನಾಲ್ಕನೆಯದು, ಆತ್ಮಹತ್ಯೆಯ ಕಣ್ಗಾವಲನ್ನು ಬಲಪಡಿಸುವುದು ಮತ್ತು ಮೌಲ್ಯಮಾಪನದ ಮೂಲಕ ಮತ್ತಷ್ಟು ಪುರಾವೆಗಳನ್ನು ಸಂಗ್ರಹಿಸಿ ಕಾರ್ಯಕ್ರಮದ ಗುಣಮಟ್ಟದಲ್ಲಿ ಸುಧಾರಣೆ ತರುವುದು.
ಅನುಷ್ಠಾನದಲ್ಲಿ ಪಾಲುದಾರರು:ಆತ್ಮಹತ್ಯೆ ತಡೆಗಟ್ಟುವಿಕೆ ಕಾರ್ಯತಂತ್ರದ ಅನುಷ್ಠಾನ ಚೌಕಟ್ಟು ಉದ್ದೇಶಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಇರುವ ಐದು ರೀತಿಯ ಪ್ರಮುಖ ಪಾಲುದಾರರು ಈ ಯೋಜನೆಯಲ್ಲಿ ಇದ್ದಾರೆ. ರಾಷ್ಟ್ರೀಯ ಮಟ್ಟದ ಸಚಿವಾಲಯದ ಪಾಲುದಾರರು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಪಾಲುದಾರರು, ಬೆಂಗಳೂರಿನ ನಿಮ್ದಾನ್ಸ್ ಮತ್ತು ಇತರ ಉನ್ನತ ಮಾನಸಿಕ ಆರೋಗ್ಯ ಸಂಸ್ಥೆಗಳು ಮತ್ತು ಕಾರ್ಯತಂತ್ರದ ಸಹಯೋಗಿಗಳು ಇದರಲ್ಲಿ ಸೇರಿದ್ದಾರೆ. ಭಾರತದಲ್ಲಿ ಈಗಾಗಲೇ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಉಪಶಮನ ಆರೈಕೆ ಕಾರ್ಯಕ್ರಮ, ಆಯುಷ್ಮಾನ್ ಭಾರತ್ ಮತ್ತು ನಶೆಮುಕ್ತಿ ಅಭಿಯಾನ ಕಾರ್ಯಪಡೆಯಂತಹ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳು ಸಹ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿವೆ.
ಮಹತ್ವದ ಮಾರ್ಪಾಡು:2014ರ ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿಯು ಮಾನಸಿಕ ಅಸ್ವಸ್ಥತೆಗಳ ತಡೆಗಟ್ಟುವಿಕೆ, ಆತ್ಮಹತ್ಯೆ ಇಳಿಕೆ ಮತ್ತು ಆತ್ಮಹತ್ಯೆಯ ಪ್ರಯತ್ನಗಳು… ಇವುಗಳನ್ನು ಪ್ರಮುಖ ಆದ್ಯತೆಯ ಕ್ಷೇತ್ರಗಳಾಗಿ ಪರಿಗಣಿಸುತ್ತದೆ. 2017ರ ಮಾನಸಿಕ ಆರೋಗ್ಯ ಕಾಯ್ದೆ ಕೆಲವು ಅಗತ್ಯ ಬದಲಾವಣೆಗಳನ್ನು ಉಂಟು ಮಾಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309 ರ ಅಡಿಯಲ್ಲಿ ಆತ್ಮಹತ್ಯೆ ಯತ್ನವು ಶಿಕ್ಷಾರ್ಹ ಅಪರಾಧವಾಗಿತ್ತು. ಆದರೆ, 2018ರ ಮೇ ತಿಂಗಳಲ್ಲಿ ಜಾರಿಗೆ ಬಂದ ನೂತನ ಕಾಯ್ದೆಯು ಆತ್ಮಹತ್ಯೆಯ ಪ್ರಯತ್ನ ಅಪರಾಧ ಎಂಬುದನ್ನು ತೆಗೆದುಹಾಕಿತು. ನೂತನ ಕಾಯ್ದೆಯು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗಳಿಗೆ ಸರ್ಕಾರದಿಂದ ಪುನರ್ವಸತಿಗೆ ಅವಕಾಶಗಳನ್ನು ನೀಡುವುದನ್ನು ಖಾತ್ರಿಪಡಿಸಿತು. ಇದಲ್ಲದೆ, ಆತ್ಮಹತ್ಯೆಗೆ ಯತ್ನಿಸಿದವರ ವಿಚಾರಣೆ ಹಾಗೂ ಶಿಕ್ಷೆ ವಿಧಿಸುವುದನ್ನು ವಿರೋಧಿಸಿತು.
ಪ್ರಕರಣ ಹೆಚ್ಚಳ:ಆಗಸ್ಟ್​ನಲ್ಲಿ ಬಿಡುಗಡೆಯಾದ ನ್ಯಾಷನಲ್ ಕ್ರೖೆಮ್ ರೆಕಾರ್ಡ್ಸ್ ಬ್ಯೂರೊ (ಎನ್​ಸಿಆರ್​ಬಿ) ವಾರ್ಷಿಕ ವರದಿಯ ಪ್ರಕಾರ, 2021ರಲ್ಲಿ 1.64 ಲಕ್ಷ ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. 2020ಕ್ಕೆ ಹೋಲಿಸಿದರೆ ಇದು ಶೇ. 7.2 ರಷ್ಟು ಹೆಚ್ಚಳವಾಗಿದೆ. ಇದು 2020ರಲ್ಲಿ ಕೋವಿಡ್​ನಿಂದ ಸಂಭವಿಸಿದ ಸಾವುಗಳಿಗಿಂತ (1.48 ಲಕ್ಷ) ಶೇ. 10ರಷ್ಟು ಹೆಚ್ಚಾಗಿದೆ. ಅಲ್ಲದೆ, ಅದೇ ವರ್ಷದಲ್ಲಿ ಭಾರತದಲ್ಲಿ ಸಂಭವಿಸಿದ ತಾಯಂದಿರ ಮರಣದ (23,800) 6.8 ಪಟ್ಟು ಇದೆ.
ಎನ್​ಸಿಆರ್​ಬಿ ವರದಿಯು ದೇಶದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ ಎಂದು ಹೇಳಿದೆ. 2021ರ ಅವಧಿಯಲ್ಲಿ ದೇಶದ 53 ಮಹಾನಗರಗಳಲ್ಲಿ ಒಟ್ಟು 25,891 ಆತ್ಮಹತ್ಯೆಗಳು ವರದಿಯಾಗಿವೆ, ಈ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು ನಡೆದಿವೆ. ಕಳೆದ ಮೂರು ವರ್ಷಗಳಲ್ಲಿ, ದೇಶದಲ್ಲಿ ಆತ್ಮಹತ್ಯೆ ಪ್ರಮಾಣ 1,00,000 ಜನಸಂಖ್ಯೆಗೆ 10.2 ರಿಂದ 11.3 ಕ್ಕೆ ಏರಿದೆ. ಅಂದರೆ 8850 ಜನರ ಪೈಕಿ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರ್ಥ. ಭಾರತದಲ್ಲಿ ಹೆಚ್ಚಿನ ಆತ್ಮಹತ್ಯೆಗಳು ಯುವಕರು ಮತ್ತು ಮಧ್ಯವಯಸ್ಕರಲ್ಲಿ ಸಂಭವಿಸಿವೆ. 2020ರಲ್ಲಿ 65 ಪ್ರತಿಶತದಷ್ಟು ಆತ್ಮಹತ್ಯೆಗಳು 18ರಿಂದ 45 ವರ್ಷ ವಯಸ್ಸಿನವರಲ್ಲಿ ವರದಿಯಾಗಿವೆ.
ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
