ಮುಂಬೈ:ಸಾಕುಪ್ರಾಣಿಗಳ ಎಂದರೆ ಎಲ್ಲರಿಗೂ ತುಂಬಾ ಅಕ್ಕರೆಯೇ. ಅದರಲ್ಲಿಯೂ ನಾಯಿ, ಬೆಕ್ಕುಗಳಂತೂ ಮನೆಯ ಒಬ್ಬ ಸದಸ್ಯನೇ ಆಗಿಬಿಡುತ್ತದೆ. ಒಟ್ಟಿಗೇ ಊಟ ಮಾಡುವುದು, ಒಟ್ಟಿಗೇ ಮಲಗುವುದು… ಹೀಗೆ ಮನೆಯ ಮಕ್ಕಳಂತೆಯೇ ಅವುಗಳನ್ನು ಕಾಣುತ್ತಾರೆ.
ಇದರಲ್ಲೇನೂ ವಿಶೇಷವಿಲ್ಲ. ಆದರೆ ಇಲ್ಲೊಬ್ಬ ಐದು ವರ್ಷದ ಬಾಲಕಿ ನಾಯಿಯೊಂದಕ್ಕೆ ಕೈತುತ್ತು ನೀಡಿ ಇದೀಗ ಭಾರಿ ಸುದ್ದಿ ಮಾಡಿದ್ದಾಳೆ.
ಸ್ಟ್ರೀಟ್ ಡಾಗ್ ಅಫ್ ಮುಂಬೈ ಎಂಬ ಹೆಸರಿನ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಅಪ್ಲೋಡ್ ಆದ ವಿಡಿಯೋವೊಂದು ಬಾಲಕಿಗೆ ನಾಯಿಯ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಬಾಲಕಿ ನೀಡುವ ಕೈತುತ್ತನ್ನು ಅಷ್ಟೇ ಕಾಳಜಿ ಹಾಗೂ ಪ್ರೀತಿಯಿಂದ ಜರ್ಮನ್ ಶಫರ್ಡ್ ನಾಯಿ ತಿನ್ನುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಕಮೆಂಟ್‌ಗಳು ಬರುತ್ತಿವೆ.
ಈ ವಿಡಿಯೋ ನೋಡಿ:
https://www.instagram.com/p/CBzywtDH-ZI/
ವಿದೇಶಿ SHAREit ಬದಲು ಸ್ವದೇಶಿ Z share: ಕನ್ನಡಿಗನಿಂದ ತಯಾರಾಗಿದೆ ಹೊಸ ಆ್ಯಪ್‌

Sign in to your account
Please enter an answer in digits:eighteen + 3 =
Remember me
