ನವದೆಹಲಿ:ಮೊಬೈಲ್ ಸಿಮ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಹೊಸ ನಿರ್ಧಾರ ಕೈಗೊಂಡಿದೆ. ಸಿಮ್ ಕಾರ್ಡ್​ಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಡೀಲರ್​ಗಳ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಸರ್ಕಾರದ ಈ ಕ್ರಮ ನಕಲಿ ಸಿಮ್ ಕಾರ್ಡ್ ಮಾರಾಟ ಮತ್ತು ಒಂದೇ ಹೆಸರು ಅಥವಾ ಐಡಿಯಲ್ಲಿ ಬಹು ಸಿಮ್ ಕಾರ್ಡ್ ಮಾರಾಟ ನಿಯಂತ್ರಿಸಲು ನೆರವಾಗಲಿದೆ. ಇದರಿಂದ ಆನ್​ಲೈನ್ ವಂಚನೆ, ಅಪರಾಧಗಳಿಗೂ ಕಡಿವಾಣ ಬೀಳಲಿದೆ. ಸಿಮ್ ಕಾರ್ಡ್ ಮಾರಾಟ ಕುರಿತು ಸರ್ಕಾರದಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ಹೊಸ ಮಾರ್ಗಸೂಚಿ ಪ್ರಕಾರ, ಪೊಲೀಸ್ ಪರಿಶೀಲನೆಗೆ ಒಳಪಡದೆ ಸಿಮ್ ಕಾರ್ಡ್ ಮಾರಾಟ ಮಾಡಿದರೆ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ದೇಶದಲ್ಲಿ ಸುಮಾರು 10 ಲಕ್ಷ ಸಿಮ್ ಕಾರ್ಡ್ ಡೀಲರ್​ಗಳಿದ್ದು, ಅವರು ಪೊಲೀಸ್ ಪರಿಶೀಲನೆ ಜತೆಗೆ ಕೆವೈಸಿ ಕೂಡ ಮಾಡಬೇಕಾಗುತ್ತದೆ.
ದೇಶದಲ್ಲಿ ಪ್ರತಿದಿನ ಸಿಮ್ ಕಾರ್ಡ್ ವಂಚನೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಆಧಾರ್ ಕಾರ್ಡ್ ದುರ್ಬಳಕೆ ಮಾಡುತ್ತಿದ್ದ ವಂಚನೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಒಂದೇ ಆಧಾರ್ ಕಾರ್ಡ್ ನಲ್ಲಿ 658 ಸಿಮ್ ಕಾರ್ಡ್​ಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ಸೈಬರ್ ಕ್ರೖೆಮ್ ವಿಂಗ್ ಈ ವಾರ ವ್ಯಕ್ತಿಯೊಬ್ಬನಿಂದ ಒಂದೇ ಆಧಾರ್ ಸಂಖ್ಯೆಯಲ್ಲಿರುವ 100ರಿಂದ 150 ಸಿಮ್ ಕಾರ್ಡ್​ಗಳನ್ನು ವಶಪಡಿಸಿಕೊಂಡಿದೆ. ಈ ವರೆಗೆ ವಿವಿಧ ಪ್ರಕರಣಗಳಲ್ಲಿ 52 ಲಕ್ಷ ಮೊಬೈಲ್ ಸಂಪರ್ಕಗಳನ್ನು ಮುಚ್ಚಲಾಗಿದ್ದು, 67,000 ಡೀಲರ್​ಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮೇ 2023ರಿಂದ ಸಿಮ್ ಕಾರ್ಡ್ ವಿತರಕರ ವಿರುದ್ಧ 300 ಎಫ್​ಐಆರ್​ಗಳನ್ನು ದಾಖಲಿಸಲಾಗಿದೆ. ನಕಲಿ ಸಿಮ್ ಕಾರ್ಡ್ ದಂಧೆಯಲ್ಲಿ ಭಾಗಿಯಾಗಿದ್ದ ಸುಮಾರು 66,000 ವಾಟ್ಸ್​ಆಪ್ ಖಾತೆಗಳನ್ನೂ ಬ್ಲಾಕ್ ಮಾಡಲಾಗಿದೆ.
ಭಾರತದಲ್ಲಿ ಗುರುವಾರ ತುರ್ತು ಎಚ್ಚರಿಕೆ ಸಂದೇಶ ವ್ಯವಸ್ಥೆಯನ್ನು ಪರೀಕ್ಷಿಸಲಾಗಿದೆ. ಹಲವಾರು ಸ್ಮಾರ್ಟ್​ಫೋನ್​ಗಳಿಗೆ ಈ ಸಂದೇಶ ರವಾನೆ ಆಗಿದೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್​ಕಾಸ್ಟಿಂಗ್ ಸಿಸ್ಟಮ್ ಮೂಲಕ ಈ ಪರೀಕ್ಷಾ ಸಂದೇಶ ಕಳಿಸಲಾಗಿದೆ. ಸ್ಮಾರ್ಟ್ ಫೋನ್​ಗಳಲ್ಲಿ ಜೋರಾಗಿ ಬೀಪ್ ಸದ್ದು ಕೇಳಿಸಿದ್ದು, ನಂತರ ಫೋನ್​ನಲ್ಲಿ ಸಂದೇಶ ಪ್ರಕಟಗೊಂಡಿದೆ. ‘ಈ ಸಂದೇಶವನ್ನು ತುರ್ತು ಎಚ್ಚರಿಕೆ ವ್ಯವಸ್ಥೆಯಿಂದ ಕಳುಹಿಸಲಾಗಿದೆ. ಇದು ಪರೀಕ್ಷಾರ್ಥ ಸಂದೇಶವಾಗಿದ್ದು, ದಯವಿಟ್ಟು ಇದನ್ನು ನಿರ್ಲಕ್ಷಿಸಿ. ನಿಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇದಕ್ಕೆ ಅಗತ್ಯವಿಲ್ಲ’ ಎಂದು ಈ ಪರೀಕ್ಷಾರ್ಥ ಸಂದೇಶದಲ್ಲಿ ಹೇಳಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಸಂದೇಶ ವ್ಯವಸ್ಥೆ ಮಹತ್ವದ್ದಾಗಿದೆ. ಗುರುವಾರ ಮಧ್ಯಾಹ್ನ 1.35ಕ್ಕೆ ಹಲವು ಆಂಡ್ರಾಯ್ಡ್ ಫೋನ್​ಗಳಲ್ಲಿ ಏಕಕಾಲದಲ್ಲಿ ಈ ಸಂದೇಶ ಕಾಣಿಸಿಕೊಂಡಿದೆ. ಮೊಬೈಲ್ ಆಪರೇಟರ್​ಗಳು ಮತ್ತು ಸೆಲ್ ಬ್ರಾಡ್​ಕಾಸ್ಟ್ ಸಿಸ್ಟಮ್ಳ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತನ ನಿರ್ಣಯಿಸಲು ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಇಂತಹ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 5 =
Remember me
