ನವದೆಹಲಿ :ದೇಶದ ಜನರಿಗೆ ಕರೊನಾ ಮೂರನೇ ಅಲೆಗೆ ಸಿದ್ಧರಾಗಿ ಎಂದು ಹೇಳಿದ ಎರಡೇ ದಿನಗಳ ನಂತರ ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯರಾಘವನ್ ಅವರು, ಅಗತ್ಯ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾರಣಾಂತಿಕ ಮೂರನೇ ಅಲೆಯನ್ನು ದೇಶದಲ್ಲಿ ತಪ್ಪಿಸಬಹುದು ಎಂದು ಹೇಳಿದ್ದಾರೆ.
“ವೈರಸ್​ ಪ್ರಸಾರವಾಗುತ್ತಿರುವ ಅಧಿಕ ಮಟ್ಟವನ್ನು ನೋಡಿದರೆ 3ನೇ ಹಂತ ಅನಿವಾರ್ಯ ಎನಿಸುತ್ತದೆ. ಆದರೆ ಯಾವ ಕಾಲಾವಧಿಯಲ್ಲಿ ಈ ಮೂರನೇ ಹಂತ ಸಂಭವಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ. ಕಂತುಕಂತಿನಲ್ಲಿ ಸೋಂಕಿನ ದರ ಏರುತ್ತದೆಂದು ಭಾವಿಸೋಣ. ಆದರೆ ನಾವು ಹೊಸ ಅಲೆಗಳಿಗೆ ತಯಾರಾಗಬೇಕು” ಎಂದು ಮೇ 5 ರಂದು ಡಾ. ವಿಜಯರಾಘವನ್ ಹೇಳಿದ್ದರು.
ಇದನ್ನೂ ಓದಿ:ಆಕ್ಸಿಜನ್ ಕೊರತೆಯ ಮಧ್ಯೆ ಕಾನ್ಸಂಟ್ರೇಟರ್​​ಗಳ ಕಾಳದಂಧೆ ಬಯಲು
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯರಾಘವನ್, “ನಾವು ಬಲವಾದ ಕ್ರಮಗಳನ್ನು ಕೈಗೊಂಡರೆ ಮೂರನೇ ಅಲೆಯು ಎಲ್ಲಾ ಸ್ಥಳಗಳಲ್ಲೂ ಸಂಭವಿಸುವುದಿಲ್ಲ ಅಥವಾ ಎಲ್ಲೂ ಸಂಭವಿಸುವುದಿಲ್ಲ. ನಾವು ಸರ್ಕಾರದ ಮಾರ್ಗದರ್ಶನವನ್ನು ಸ್ಥಳೀಯ ಮಟ್ಟದಲ್ಲಿ, ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಮತ್ತು ಎಲ್ಲಾ ನಗರಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೇವೆ ಅನ್ನುವುದರ ಮೇಲೆ ಅದು ಅವಲಂಬಿಸಿದೆ” ಎಂದಿದ್ದಾರೆ.
ಕರೊನಾ ಎರಡನೇ ಅಲೆಯ ಹೊಡೆತಕ್ಕೇ ಭಾರತದ ವೈದ್ಯಕೀಯ ಸೇವೆ ನಲುಗಿದೆ. ಬೆಡ್​, ಆಕ್ಸಿಜನ್, ಔಷಧಿಗಳ ಕೊರತೆ ಹಲವೆಡೆ ತಲೆಯೆತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,14,188 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದರೆ,  3,915 ಜನ ಸಾವಪ್ಪಿದ್ದಾರೆ. ವೈದ್ಯಕೀಯ ತಜ್ನರ ಪ್ರಕಾರ ಸೋಂಕಿನ ನಿಜವಾದ ಪ್ರಮಾಣವು ಅಧಿಕೃತ ಅಂಕಿಗಿಂತ 5 ರಿಂದ 10 ಪಟ್ಟು ಹೆಚ್ಚಿದೆ ಎನ್ನಲಾಗಿದೆ.(ಏಜೆನ್ಸೀಸ್)
ಬಾಲಿವುಡ್​ ನಟಿ ಶಿಲ್ಪ ಶೆಟ್ಟಿ ಕುಟುಂಬದ ಆರು ಜನಕ್ಕೆ ಕರೊನಾ

ಸ್ಕೂಲ್​ಬ್ಯಾಗ್​ನಿಂದ ಬಂದೂಕು ಹೊರಗೆಳೆದಳು, ಮೂವರ ಮೇಲೆ ಗುಂಡು ಹಾರಿಸಿದಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twenty =
Remember me
