ಭುವನೇಶ್ವರ್​:ಅನಿರೀಕ್ಷಿತವಾಗಿ ಪರಿಚಯವಾದ ಸ್ನೇಹಿತನನ್ನು ಭೇಟಿ ಮಾಡಲು ಆತನ ಮನೆಗೆ ಬಂದ ಯುವತಿ ಲಾಕ್​ಡೌನ್​ ಕಾರಣದಿಂದಾಗಿ ಅನೇಕ ತಿಂಗಳವರೆಗೆ ಅಲ್ಲಿಯೇ ಉಳಿಯುವಂತಾಯಿತು. ಬಹುದಿನಗಳವರೆಗೂ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದ ಸ್ನೇಹಿತರು, ವ್ಯಾಲೆಂಟೈನ್ಸ್​ ದಿನದಂದು ಸತಿ-ಪತಿಗಳಾಗಿದ್ದು, ಅವರಿಬ್ಬರ ರೋಚಕ ಲವ್​ ಸ್ಟೋರಿಯ ರಹಸ್ಯ ಬಯಲಾಗಿದೆ.
ಹೌದು. ಮಹಾಮಾರಿ ಕರೊನಾ ವೈರಸ್​ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಆದರೆ, ಅದಿನ್ನು ಆರಂಭಿಕ ಹಂತದಲ್ಲಿತ್ತು. ಮುಂದೊಂದು ದಿನ ಇಡೀ ದೇಶವೇ ಲಾಕ್​ ಆಗುತ್ತದೆ ಎಂಬ ಕಲ್ಪನೆಯು ಸಹ ಜನರಿಗೆ ಇರಲಿಲ್ಲ. ಹೀಗಿರುವಾಗ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲು ಇನ್ನು ನಾಲ್ಕು ದಿನ ಬಾಕಿ ಇರುತ್ತದೆ. ಈ ವೇಳೆ ಒಡಿಶಾದ ಸುಂದರಗಢ ಜಿಲ್ಲೆಯ ರಾಜ್​ಗಂಗ್ಪುರ್​ ಬ್ಲಾಕ್​ ಅಡಿಯಲ್ಲಿ ಬರುವ ಮಹುಲ್ದಿಹಿ ಗ್ರಾಮದ ನಿವಾಸಿ ನಮಿತಾ ಮಾಜಿ, ಅದೇ ಜಿಲ್ಲೆಯ ಕುತ್ರಾ ಬ್ಲಾಕ್​ ಅಡಿಯಲ್ಲಿರುವ ಪಂಚಾರ ಗ್ರಾಮದ ಸ್ನೇಹಿತ ಬಾಬುಲಾಲ್​​ ಮಾಜಿ ಮನೆಗೆ ತೆರಳುತ್ತಾಳೆ.
ಇದನ್ನೂ ಓದಿರಿ:PHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್​ಕ್ಲೂಸಿವ್​ ಫೋಟೋಗಳು..!
ಮುಂದೇನಾಯ್ತು ಎಂದು ಹೇಳುವುದಕ್ಕೂ ಮುನ್ನ ಒಂದು ಸಣ್ಣ ಫ್ಲ್ಯಾಶ್​ಬ್ಯಾಕ್​ ಹೇಳಿ ಬಿಡುತ್ತೇನೆ. ಏನೆಂದರೆ, ನಮಿತಾ ಎರಡು ವರ್ಷಗಳ ಹಿಂದೆ ಪಂಚಾರದಲ್ಲಿ ನಡೆದ ಮದುವೆಯೊಂದಕ್ಕೆ ಆಗಮಿಸಿರುತ್ತಾಳೆ. ಅದೇ ಮದುವೆಗೆ ಬಾಬುಲಾಲ್​ ಸಹ ಭೇಟಿ ನೀಡಿರುತ್ತಾನೆ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಪರಸ್ಪರ ಮೊಬೈಲ್​ ನಂಬರ್​ ಸಹ ವಿನಿಮಯ ಆಗುತ್ತದೆ. ಅಂದಿನಿಂದ ಒಂದು ವರ್ಷಗಳವರೆಗೆ ಇಬ್ಬರು ನಿರಂತರವಾಗಿ ಫೋನ್​ ಸಂಪರ್ಕದಲ್ಲಿ ಇರುತ್ತಾರೆ.
ಈಗ ಮತ್ತೆ ಹಿಂದಿನ ಕತೆಗೆ ಮರಳೋಣ… ಬಾಬುಲಾಲ್​ ಮನೆಗೆ ನಮಿತಾ ತೆರಳುತ್ತಾಳೆ. ಅದಕ್ಕೂ ಮುನ್ನ ಬಾಬುಲಾಲ್​ ತನ್ನ ಮನೆಗೆ ಆಕೆಯನ್ನು ಆಹ್ವಾನಿಸಿರುತ್ತಾನೆ. ಹೀಗಾಗಿ ಆಕೆ ಹೋಗಿರುತ್ತಾಳೆ. ಬಾಬುಲಾಲ್​ ಆತಿಥ್ಯ ಸ್ವೀಕರಿಸುವ ನಮಿತಾ ಮತ್ತೆ ತನ್ನ ಮನೆಗೆ ಹಿಂದಿರುಗಲು ಸಾಧ್ಯವಾಗುವುದಿಲ್ಲ. ಕಾರಣ ಅದೇ ದಿನ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗುತ್ತದೆ. ಅನಿವಾರ್ಯವಾಗಿ ಇಬ್ಬರು ಒಂದೇ ಮನೆಯಲ್ಲಿ ಇರಬೇಕಾಗುತ್ತದೆ. ಇಬ್ಬರ ಪರಿಚಯ ಈ ಸಮಯದಲ್ಲಿ ಅಗಾಧವಾದ ಪ್ರೀತಿಗೆ ತಿರುಗುತ್ತದೆ. ಒಟ್ಟಿಗೆ ಇದ್ದುದ್ದರಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅಚ್ಚಿಕೊಳ್ಳುತ್ತಾರೆ.
ಇದನ್ನೂ ಓದಿರಿ:ಮದುವೆಗು ಮುನ್ನ ಡಿಕೆಶಿ ಪುತ್ರಿ ಹಠ ಹಿಡಿದಿದ್ದೇಕೆ? ಕೊನೆಗೂ ತನ್ನ ಹಠ ಸಾಧಿಸಿದ ಐಶ್ವರ್ಯಾ!
ಇದಾದ ಬಳಿಕ ಇಬ್ಬರ ಪ್ರೀತಿಗೆ ಎರಡು ಕುಟುಂಬದವರು ಒಪ್ಪಿಗೆ ಸಹ ನೀಡುತ್ತಾರೆ. ಇದೇ ಖುಷಿಯಲ್ಲಿ ಇಬ್ಬರು ಕುಟುಂಬ, ಬಂಧು-ಬಳಗ, ಆಪ್ತರ ನಡುವೆ ವ್ಯಾಲೆಂಟೈನ್ಸ್​ ದಿನದಂದೇ ಸಪ್ತಪದಿ ತುಳಿದಿದ್ದಾರೆ. ಲಾಕ್​ಡೌನ್​ನಿಂದ ಆರಂಭವಾದ ಪ್ರೀತಿಯ ಬೆಸುಗೆ, ಮದುವೆ ಬಂಧನವರೆಗೂ ಕರೆತಂದಿದೆ. ಇಬ್ಬರ ಬಾಳಲ್ಲಿ ಹೊಸ ಕ್ಷಣಗಳ ಆರಂಭವಾಗಿದ್ದು, ಮುಂದಿನ ಅವರಿಬ್ಬರ ಜೀವನ ಆನಂದಮಯವಾಗಿರಲಿ ಎಂದು ಹಿತೈಶಿಗಳು ಶುಭ ಹಾರೈಸಿದ್ದಾರೆ.(ಏಜೆನ್ಸೀಸ್​)
ಗಂಡನ ಕಾಮದಾಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ: 18 ಪುಟಗಳ ಡೆತ್​ನೋಟ್​ನಲ್ಲಿ ಪತಿಯ ಕಾಮದಾಟ ಬಯಲು!

ಪತ್ನಿಗೆ ಕರೆ ಮಾಡಿ ತನ್ನ ಸಾವಿಗೆ ತಾನೇ ಆಹ್ವಾನ ನೀಡಿದ ಸರ್ಕಾರಿ ನೌಕರ: ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ!

ಭಾವಿ ಪತಿಗೆ ತನ್ನ ಮನೆಯಲ್ಲೇ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಅಲ್ಲೋಲ-ಕಲ್ಲೋಲ್ಲ​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
