ಹೈದರಾಬಾದ್​:ಓದಲು ನನ್ನಿಂದಾಗುತ್ತಿಲ್ಲ, ತಂದೆ ತಾಯಿ ಓದು ಎಂದು ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಪರೀಕ್ಷೆಯಲ್ಲಿ ಫೇಲ್​ ಆಗಿ, ತಂದೆ ತಾಯಿಗೆ ಮುಖ ತೋರಿಸಲಾಗದೆ ಸಾಯುವವರ ಸುದ್ದಿಯನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ರ್ಯಾಂಕ್​ ಬಂದು, ಓದಲು ಹಣವಿಲ್ಲವೆನ್ನುವ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯ ಐಶ್ವರ್ಯಾ ರೆಡ್ಡಿ ಬಾಲ್ಯದಿಂದಲೂ ಓದಿನಲ್ಲಿ ಮುಂದೆ. ಪಿಯುಸಿಯಲ್ಲಿ ಸೈನ್ಸ್​ ಆಯ್ಕೆ ಮಾಡಿಕೊಂಡ ಆಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ್​ ಬಂದಿದ್ದಳು. ಹೆಚ್ಚು ಅಂಕ ಗಳಿಸಿದ್ದ ಆಕೆಗೆ ದೆಹಲಿಯ ಶ್ರೀ ರಾಮ್​ ಮಹಿಳಾ ಕಾಲೇಜಿನಲ್ಲಿ ಬಿ.ಎಸ್​ಸಿ ಗಣಿತಕ್ಕೆ ಉಚಿತ ಸೀಟು ಸಿಕ್ಕಿತ್ತು. ಅಷ್ಟೇ ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡುವ ಇನ್​ಸ್ಪೈರ್​ ವಿದ್ಯಾರ್ಥಿ ವೇತನಕ್ಕೂ ಆಕೆ ಆಯ್ಕೆಯಾಗಿದ್ದಳು. ಐಎಎಸ್​ ಅಧಿಕಾರಿಯಾಗಬೇಕೆಂಬ ದೊಡ್ಡ ಕನಸನ್ನು ಕಟ್ಟಿಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಳು.
ಇದನ್ನೂ ಓದಿ:ಡ್ರಗ್ಸ್​ ಕೇಸ್​ನಲ್ಲಿ ಮಾಜಿ ಸಚಿವರ ಪುತ್ರ ಅರೆಸ್ಟ್​
ಲಾಕ್​ಡೌನ್​ ಆರಂಭವಾಗಿ ಕಾಲೇಜುಗಳು ಮುಚ್ಚಿದ ಕಾರಣ ಮಾರ್ಚ್​ ತಿಂಗಳಲ್ಲಿ ಆಕೆ ತನ್ನೂರಿಗೆ ಮರಳಿದ್ದಾಳೆ. ಆಟೋ ಮೆಕಾನಿಕ್​ ಆಗಿರುವ ಅಪ್ಪ ಮತ್ತು ಟೈಲರ್​ ಕೆಲಸ ಮಾಡುವ ಅಮ್ಮ ಇಬ್ಬರೂ ಲಾಕ್​ಡೌನ್​ ಸಮಯದಲ್ಲಿ ದುಡಿಮೆಯಿಲ್ಲದೆ ಸಾಲ ಮಾಡಿಕೊಂಡಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ಸಾಲವಾಗಿದೆ. ಇನ್ನೊಬ್ಬ ಮಗಳ ಶಿಕ್ಷಣವನ್ನು ಸ್ಥಗಿತಗೊಳಿಸಲಾಗಿದೆ.
ಇತ್ತೀಚೆಗೆ ಐಶ್ವರ್ಯಾಗೆ ಆನ್​ಲೈನ್​ ತರಗತಿಗಳನ್ನು ಆರಂಭಿಸುವುದಾಗಿ ಕಾಲೇಜಿನಿಂದ ಕರೆ ಬಂದಿದೆ. ಲ್ಯಾಪ್​ಟಾಪ್​ ಇಲ್ಲದ ಕಾರಣ ಮೊಬೈಲ್​ನಲ್ಲೇ ಆಕೆ ಆನ್​ಲೈನ್​ ತರಗತಿಗೆ ಹಾಜರಾಗಿದ್ದಾಳೆ. ತನಗೆ ಲ್ಯಾಪ್​ಟಾಪ್​ ಕೊಡಿಸಿ ಎಂದು ನಟ ಸೋನು ಸೂದ್​ ಅವರಿಗೂ ಮನವಿ ಮಾಡಿ ಇ ಮೇಲ್​ ಕಳುಹಿಸಿದ್ದಳಂತೆ. ಆದರೆ ಇದೇ ಸಮಯದಲ್ಲಿ ದೆಹಲಿಯ ಹಾಸ್ಟೆಲ್​ ರೂಂ ಖಾಲಿ ಮಾಡಿ ಎಂದು ಹಾಸ್ಟೆಲ್​ನಿಂದ ಕರೆ ಬಂದಿದೆ. ತನ್ನ ಬಳಿ ಲ್ಯಾಪ್​ಟಾಪ್​ಗೆ ಹಣವಿಲ್ಲ, ಹಾಸ್ಟೆಲ್​ ರೂಂ ಖಾಲಿ ಮಾಡಬೇಕು ಎನ್ನುವ ಚಿಂತೆಗೆ ಬಿದ್ದ ಐಶ್ವರ್ಯಾ ನವೆಂಬರ್​ 2ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ‘ನನ್ನ ಸಾವಿಗೆ ಯಾರೂ ಕಾರಣರಲ್ಲ. ನನಗೆ ಓದಬೇಕಿದೆ. ಓದದೆ ನಾನು ಬದುಕಲಾರೆ. ಆದರೆ ಲ್ಯಾಪ್​ಟಾಪ್​ ಇಲ್ಲದಿರುವ ಕಾರಣ ನಾನು ಓದಲಾಗುತ್ತಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಡೆತ್​ ನೋಟ್​ ಬರೆದಿಟ್ಟು, ಪ್ರಾಣ ಬಿಟ್ಟಿದ್ದಾಳೆ.
ಇದನ್ನೂ ಓದಿ:12 ವರ್ಷದಿಂದ ಕಾಯುತ್ತಿದ್ದ ವೃದ್ಧೆಯ ಕಂಡು ಭಾವುಕರಾದ ಪುನೀತ್ ರಾಜ್​ಕುಮಾರ್
ಯುವತಿಯ ಸಾವಿಗೆ ಆಕೆಯ ಕಾಲೇಜೇ ಕಾರಣ ಎಂದು ಅನೇಕರು ದೂರಿದ್ದಾರೆ. ಕಷ್ಟದ ಸಮಯದಲ್ಲಿ ಹಾಸ್ಟೆಲ್​ ಖಾಲಿ ಮಾಡಲು ಹೇಳಿದ್ದು, ಕಾಲೇಜಿನ ತಪ್ಪು ಎಂದು ಆರೋಪಿಸಲಾಗುತ್ತಿದೆ. (ಏಜೆನ್ಸೀಸ್​)
21 ವರ್ಷ ಮೇಲ್ಪಟ್ಟಿದ್ದರೆ ಮಾತ್ರ ಮದ್ಯಪಾನಕ್ಕೆ ಅವಕಾಶ! ಹೆಣ್ಣನ್ನು ಅಗೌರವಿಸಿದರೆ ಸಿಗುತ್ತೆ ಸರಿಯಾದ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
