ಕೊಲಂಬಸ್​:ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಒಹಿಒನಲ್ಲಿ ನಡೆದಿದೆ.
ಸಾಯೇಶ್​ ವೀರ(24) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಯುವಕ ಕೆಲಸ ಮಾಡುತ್ತಿದ್ದ ಗ್ಯಾಸ್​​​ ಬಂಕನಲ್ಲಿ ಈ ಘಟನೆ ನಡೆದಿದೆ.
ಯುವಕ ಸಾಯೇಶ್​ ಉನ್ನತ ವ್ಯಾಸಂಗದ ಜೊತೆಗೆ ಗ್ಯಾಸ್​​​ ಸ್ಟೇಷನ್​ನಲ್ಲಿ​ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿದ್ದರು. ಈ ವೇಳೆ ಬಂಕ್​ಗೆ ಬಂದ ಆರೋಪಿಯೂ ಏಕಾಏಕಿ ಯುವಕನ ಮೇಲೆ ಗುಂಡಿನ ದಾಳಿ ಮಾಡಿದ್ಧಾನೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್​ ಸಿಬ್ಬಂದಿ ಹಾಗೂ ವೈದ್ಯರು ಸಾಯೇಶ್​ನನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ ಯುವಕ ಮೃತಪಟ್ಟಿದಾನೆಂದು ವೈದ್ಯರು ಗೋಷಿಸಿದ್ದಾರೆ.
HELP US FIND THIS SUSPECTHomicide detectives are asking for help to identify this person related to a deadly shooting that occurred on April 20, 2023. Saiesh Veera, 24, was shot and killed at a gas station located in the 1000 block of W. Broad St.Tip? ☎ Call 614-645-4730pic.twitter.com/25mjNtNzY0
ಇದನ್ನೂ ಓದಿ:ಕಾಟನ್​ಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ; 70ಕೆಜಿ ಗಾಂಜಾ-ಪೆಡ್ಲರ್​ ವಶಕ್ಕೆ
ಯುವಕ ಸ್ನಾತಕೋತರ ಪದವಿ ವ್ಯಾಸಂಗ ಮಾಡಲು ಎಚ್​ 1ಬಿ ವೀಸಾ ಅಡಿಯಲ್ಲಿ ಆಯ್ಕೆಯಾಗಿದ್ದನ್ನು. ತುಂಬಾ ಕನಸುಗಳೊಂದಿಗೆ ಇಲ್ಲಿಗೆ ಬಂದಿದ್ದನ್ನು ಮತ್ತು ಈತ ಉತ್ತಮ ಕ್ರಿಕೆಟ್​ ಆಟಗಾರ.
ಎರಡು ವರ್ಷಗಳ ಹಿಂದೆ ಅವರ ತಂದೆ ಮೃತಪಟ್ಟ ನಂತರ ಕುಟುಂಬವನ್ನು ಪೋಷಿಸುವ ಸಲುವಾಗಿ ಆತ ಅಮೆರಿಕಾಗೆ ಬಂದಿದ್ದ. ಆದರೆ, ವಿಧಿ ಆಟವೇ ಬೇರೆಯೇ ಇತ್ತು ಎಂದು ರೋಹಿತ್​ ಯಲಮಂಚಿಲಿ ಎಂಬವವರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಸಾಯೇಶ್​ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ ಫೋಟೋವಮನ್ನು ಪೊಲೀಸರು ಬಿಡಗಡೆ ಮಾಡಿದ್ಧಾರೆ. ಸದ್ಯ ತನಿಖೆ ಕೈಗೊಂಡಿರುವ ಪೊಲೀಸರು ಶೀಘ್ರದಲ್ಲೇ ಆರೋಫಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
