ಕಲ್ಕತ್ತಾ:18 ವರ್ಷದ ಜಾಧವ್‍ಪುರ್ ವಿಶ್ವವಿದ್ಯಾಲಯದ ಮೊದಲ ವರ್ಷದ ವಿದ್ಯಾರ್ಥಿ ಸ್ವಾಪ್ನೋದೀಪ್ ಕುಂಡು, ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಹಾರುವ ಮುನ್ನ “ನಾನು ಸಲಿಂಗಕಾಮಿ ಅಲ್ಲ” ಎಂದು ಪದೇ ಪದೇ ಹೇಳುತ್ತಾ ಹೇಳಿದ್ದು ಪ್ರಾಣ ಕಳೆದುಕೊಂಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಕಟ್ಟಡದಿಂದ ಹಾರುವ ಮೊದಲು, ಸ್ವಾಪ್ಲೋದೀಪ್ ತನ್ನ ಸಹ ವಿದ್ಯಾರ್ಥಿಗಳಿಗೆ “ನಾನು ಸಲಿಂಗಕಾಮಿ ಅಲ್ಲ” ಎಂದು ಹೇಳಿದ್ದುಬಾಲ್ಕನಿಯಿಂದ ಹಾರಿದ್ದ ಯುವಕನ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸಲಿಂಗಕಾಮಿ ಡೇಟಿಂಗ್ ಆ್ಯಪ್ ಜಾಲ…ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ 6 ವಿದ್ಯಾರ್ಥಿಗಳ ಬಂಧನ
ಶುಕ್ರವಾರ ಕಲ್ಕಾತ್ತಾ ಪೊಲೀಸರು ಸ್ವಾಪ್ನೋದೀಪ್‍ ಕುಂಡು ಸಾವಿಗೆ ಸಂಬಂಧಿಸಿದಂತೆ. ಆರೋಪಿ ಸೌರಭ್ ಚೌಧರಿಯನ್ನು ಬಂಧಿಸಿದ್ದಾರೆ. ಆರೋಪಿ ಸೌರಭ್, ಈ ಹಿಂದೆ 2022ರಲ್ಲಿ ಜಾಧವ್‍ಪುರ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಎಂಎಸ್ ಸಿ ಪೂರ್ಣಗೊಳಿಸಿದ್ದು, ವಿಶ್ವವಿದ್ಯಾಲಯ ಹಾಸ್ಟೆಲ್‍ನಲ್ಲೇ ಉಳಿಯುತ್ತಿದ್ದರು.
ಪೊಲೀಸರು ತನಿಖೆ ನಡೆಸುವಾಗ, ಮೃತ ಯುವಕನ ಮೇಲೆ ನಡೆದ ರಾಗಿಂಗ್ ಘಟನೆಯಲ್ಲಿ ತಾನೂ ಪಾಲ್ಗೊಂಡಿರುವುದಾಗಿ ಆರೋಪಿ ಸೌರಭ್ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಹುಬ್ಬೇರಿಸುವಂತಿದೆ ಸಲಿಂಗಕಾಮಿ ಜೋಡಿ ಮದುವೆ ಕುರಿತು ಸಮಂತಾ ಮಾಡಿರುವ ಪೋಸ್ಟ್​..!
ಸೌರಭ್ ಚೌಧರಿ ಈಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302/34 ರ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದು ಶನಿವಾರ ನ್ಯಾಯಾಲಯದ ಮುಂದೆ ಆತನನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.
ಬಂಗಾಲಿಯ ಬ್ಯಾಚುಲರ್ ಆಫ್ ಆರ್ಟ್ಸ್ ವಿದ್ಯಾರ್ಥಿಯಾಗಿದ್ದ ನಾಡಿಯಾ ಜಿಲ್ಲೆಯ ಹ್ಯಾನ್ಸ್ಖಾಲಿ ಮೂಲದ ಸ್ವಾಪ್ನೋದೀಪ್ ಕುಂಡು ಬುಧವಾರ ಮಧ್ಯರಾತ್ರಿಯಲ್ಲಿ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಹಾರಿದ್ದರು.
ಇದನ್ನೂ ಓದಿ:ನನ್ನನ್ನು ಸಲಿಂಗಕಾಮಿ ಎಂದರು- ನನಗೂ ಹಾಗೆನಿಸಲು ಶುರುವಾಯಿತು: ಭಯಾನಕ ದಿನಗಳ ಬಿಚ್ಚಿಟ್ಟ ನಟಿ ನೀಲಂ
ಜೋರಾಗಿ ಶಬ್ದ ಕೇಳಿದ ನಂತರ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದಾಗ, ಸ್ವಾಪ್ನೋದೀಪ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರನ್ನು ಚಿಕಿತ್ಸೆಗಾಗಿ ಕೆಪಿಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೂ ಆಸ್ಪತ್ರೆಯಲ್ಲಿ ಸ್ವಾಪ್ನೋದೀಪ್‍ ಗುರುವಾರ ಬೆಳಿಗ್ಗೆ 4: 30 ಕ್ಕೆ ನಿಧನರಾದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 8 =
Remember me
