ವಿಶಾಖಪಟ್ಟಣಂ:ಇಲ್ಲೊಬ್ಬ ವಿದ್ಯಾರ್ಥಿನಿ ರೈಲಿನಿಂದ ಇಳಿಯುವಾಗ ಪ್ಲಾಟ್​ಫಾರ್ಮ್​ ಮತ್ತು ರೈಲಿನ ನಡುವೆ ಜಾರಿ ಬಿದ್ದಿದ್ದಾರೆ. ಇದರಿಂದಾಗಿ ಅನೇಕ ಸಮಯ ಅಲ್ಲೆ ಸಿಲುಕಿ ಒದ್ದಾಡಬೇಕಾಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.
ವಿಶಾಖಪಟ್ಟಣಂ ಜಿಲ್ಲೆಯ ದುವ್ವಾಡ ರೈಲು ನಿಲ್ದಾಣದಲ್ಲಿ ಈ ಘಟನೆಯ ನಡೆದಿದೆ. ಶಶಿಕಲಾ, ದುವ್ವಾಡದ ಕಾಲೇಜೊಂದರಲ್ಲಿ ಎಂಸಿಎ ಓದುತ್ತಿರುವ ವಿದ್ಯಾರ್ಥಿನಿ. ಈಕೆ ನಿಲ್ದಾಣದಲ್ಲಿ ಓಡುತ್ತಿದ್ದ ರೈಲಿನಿಂದ ಕೆಳಗಿಳಿಯುವ ವೇಳೆ ಆಕಸ್ಮಿಕವಾಗಿ ಪ್ಲಾಟ್​ಫಾರ್ಮ್​ನಿಂದ ಜಾರಿ ರೈಲು ಹಳಿಯ ಕಡೆಗೆ ಬಿದ್ದಿದ್ದಾಳೆ. ಆಗ ಆಕೆ ರೈಲು ಹಾಗೂ ಪ್ರಾಟ್​ಫಾರ್ಮ್​ ನಡುವೆ ಇರುವ ಸಣ್ಣ ಜಾಗದಲ್ಲಿ ಸಿಲುಕಿದ್ದಾಳೆ. ಈ ಅನಿರೀಕ್ಷಿತ ಘಟನೆಯಿಂದ ಪ್ಲಾಟ್​ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದ ಯುವತಿ ನರಕಯಾತನೆ ಅನುಭವಿಸಬೇಕಾಯ್ತು.
ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ವಿದ್ಯಾರ್ಥಿನಿಯನ್ನ ಕಾಪಾಡಲು ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಈ ವಿಷಯ ರೈಲ್ವೇ ನಿಲ್ದಾಣದ ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ರೈಲ್ವೆ ರಕ್ಷಣಾ ತಂಡ, ವಿದ್ಯಾರ್ಥಿನಿ ಸಿಲುಕಿದ್ದ ಪ್ಲಾಟ್​ಫಾರ್ಮ್ ಅನ್ನೇ ಒಡೆದಿದ್ದಾರೆ. ಈಗ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Railway police rescue girl stuck between train, track in#Visakhapatnam#Trending#Viralvideo#Indiapic.twitter.com/TkZgMSnJF9
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 13 =
Remember me
