ತೆಲಂಗಾಣ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರ. ಅಕ್ಷರ ಹೇಳಿ ಕೊಟ್ಟು ಬುದ್ಧಿ ಹೇಳಿದ ಗುರುಗಳಿಗೆ ವಿದ್ಯಾರ್ಥಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಖಮ್ಮಂ ಜಿಲ್ಲೆಯ ಮುದಿಗೊಂಡ ಮಂಡಲದ ಮಿತ್ತ ಗುಡೆಂ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ
10 ವರ್ಷ ಪಾಠ ಮಾಡಿದ ಶಿಕ್ಷಕರನ್ನು ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಭಾವುಕರಾದರು. ದಿನವೂ ಪಾಠ ಹೇಳಿಕೊಡುವ ಶಿಕ್ಷಕರು ನಾಳೆಯಿಂದ ತಮ್ಮ ಶಾಲೆಗೆ ಬರುವುದಿಲ್ಲ ಎಂದು ತಿಳಿದು ಅವರಿಗೆ ಅದ್ಧೂರಿಯಾಗಿ ಬೀಳ್ಕೊಡಲು ನಿರ್ಧರಿಸಿದರು. ಅತ್ಯುತ್ತಮ ಬೋಧನೆ ನೀಡಿದ ಮೂವರು ಶಿಕ್ಷಕರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.
ಸುನಿತಾ, ಉಷಾ ಕುಮಾರಿ ಮತ್ತು ಸುರೇಶ್ ಕಳೆದ ಹತ್ತು ವರ್ಷಗಳಿಂದ ಖಮ್ಮಂ ಜಿಲ್ಲೆಯ ಮುದಿಗೊಂಡ ಮಂಡಲದ ಮಿತ್ತಗುಡೆಂ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ಈ ಮೂವರು ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಲಾಗಿತ್ತು. ತಮ್ಮ ನೆಚ್ಚಿನ ಶಿಕ್ಷಕರು ಶಾಲೆ ತೊರೆದು ವರ್ಗಾವಣೆಯಾಗಿ ಬೇರೆ ಶಾಲೆಗೆ ಹೋಗುತ್ತಿರುವ ವಿಚಾರ ತಿಳಿದ ವಿದ್ಯಾರ್ಥಿಗಳು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದರು.
ಮೊದಲಿಗೆ ಶಿಕ್ಷಕರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಬಳಿಕ ಶಾಲು ಹೊದಿಸಿ ಪುಷ್ಪನಮನ ಸಲ್ಲಿಸಲಾಯಿತು. ವರ್ಗಾವಣೆಗೆ ತೆರಳುತ್ತಿರುವ ಶಿಕ್ಷಕರ ಸೇವೆಯನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ವರ್ಗಾವಣೆಗೆ ತೆರಳುತ್ತಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ಪಡೆಯುವ ಮಟ್ಟಕ್ಕೆ ಏರುವಂತೆ ತಿಳಿಸಿದರು.
ಅನಂತ್ ಅಂಬಾನಿ ಮದುವೆ: ಸ್ಟಾರ್ ಹೀರೋಗಳಿಗೆ ಉಡುಗೊರೆಯಾಗಿ ಕೋಟ್ಯಂತರ ರೂ. ವಾಚ್!
ಅನಂತ್ ಅಂಬಾನಿ ಮದುವೆ: ಸ್ಟಾರ್ ಹೀರೋಗಳಿಗೆ ಉಡುಗೊರೆಯಾಗಿ ಕೋಟ್ಯಂತರ ರೂ. ವಾಚ್!
ಅನಂತ್ ಅಂಬಾನಿ ಮದುವೆ: ಸ್ಟಾರ್ ಹೀರೋಗಳಿಗೆ ಉಡುಗೊರೆಯಾಗಿ ಕೋಟ್ಯಂತರ ರೂ. ವಾಚ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 15 =
Remember me
