ಕಾನ್ಪುರ:ವಾರ್ಷಿಕ ಕ್ರೀಡಾಕೂಟದಲ್ಲಿ ಎರಡು ಕಬ್ಬಡ್ಡಿ ತಂಡಗಳ ಆಟಗಾರರ ನಡುವೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಿಗಳು ಚೇರಿನಲ್ಲಿ ಬಡಿದಾಡಿಕೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರದಲ್ಲಿ ಶನಿವಾರ (ಅ.10) ಸಂಭವಿಸಿದೆ.
ಇದನ್ನೂ ಓದಿ:ಇಸ್ರೇಲ್-ಹಮಾಸ್ ಸಂಘರ್ಷ: ಉಗ್ರರೊಂದಿಗೆ ಮುಂದುವರೆದ ಗುಂಡಿನ ಕಾಳಗ, 1000 ಕ್ಕೂ ಹೆಚ್ಚು ಬಲಿ
ಹಿಂಸಾತ್ಮಕ ಗಲಾಟೆಗೆ ಪ್ರಮುಖ ಕಾರಣವೇನು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿಲ್ಲ. ಘಟನೆಯಲ್ಲಿ ಎರಡು ತಂಡಗಳ ವಿದ್ಯಾರ್ಥಿಗಳ ನಡುವೆ ಜಟಾಪಟಿ ಆರಂಭವಾಗಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಚೇರುಗಳನ್ನು ಬೀಸಿ ಬಡಿದಾಡಿಕೊಂಡಿದ್ದಾರೆ. ಘಟನೆಯ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
#IITKanpurमें सालाना स्पोर्टिंग ईवेंट उद्घोष चल रहा है, शनिवार को#Kabaddiकी दो टीमों के खिलाड़ियों के बीच आपस में भिड़ंत हो गई जिसके बाद जिसे जो हाथ लगा वहीं लेकर एक दूसरे की पिटाई शुरू कर दी, घटना का वीडियो सोशल मीडिया पर वायरल हो रहा है.#ViralVideo(@Simerchawla20)pic.twitter.com/BOXbIAw33C
— AajTak (@aajtak)October 9, 2023

ವರದಿಯ ಪ್ರಕಾರ, ಎರಡೂ ತಂಡಗಳು ಕಾನ್ಪುರದ ಹೊರಗಿನವರು ಎಂದು ಹೇಳಲಾಗಿದ್ದು, ಪ್ರಸ್ತುತ ಎರಡೂ ತಂಡಗಳು ಸ್ಪರ್ಧೆಯಿಂದ ಅನರ್ಹಗೊಂಡಿವೆ. ಈ ಘಟನೆಯ ಬಗ್ಗೆ ಐಐಟಿ ಕಾನ್ಪುರ ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + seven =
Remember me
