ಆಗ್ರಾ: ಆಗ್ರಾದ ಕೋಚಿಂಗ್ ಸೆಂಟರ್​ನ ಶಿಕ್ಷಕರೊಬ್ಬರ ಮೇಲೆ ಇಬ್ಬರು ವಿದ್ಯಾರ್ಥಿಗಳು ಗುಂಡು ಹಾರಿಸಿರುವ ಘಟನೆ ನಡೆದಿದೆ. ಗುಂಡು ಹಾರಿಸಿದ ಸಂದರ್ಭ ಅಲ್ಲೇ ನೆರೆದಿದ್ದ ಜನರು, ಶಿಕ್ಷಕನನ್ನು ಸ್ಥಲೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಆಗ್ರಾದ ಕೋಚಿಂಗ್ ಸೆಂಟರ್‌ನ ಹೊರಗೆ ಹಗಲು ಹೊತ್ತಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಪಿಸ್ತೂಲ್‌ನಿಂದ ಶಿಕ್ಷಕರ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡು ತಗುಲಿ ರಕ್ತಸ್ರಾವವಾಗಿ ಶಿಕ್ಷಕ ನೆಲದ ಮೇಲೆ ಬಿದ್ದಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು. ಗಾಯಗೊಂಡ ಶಿಕ್ಷಕನನ್ನು ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ ಬಳಿಕ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಗುಂಡು ಹಾರಿಸಿದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಖಂಡೌಲಿ ಪಟ್ಟಣದಲ್ಲಿಯೇ ಕೋಚಿಂಗ್ ತರಗತಿಯ ಹೊರಗೆ ಶಿಕ್ಷಕ ಸುಮಿತ್ ಸಿಂಗ್‌ಗೆ ಗುಂಡು ಹಾರಿಸಲಾಗಿದ್ದು, ಇಬ್ಬರು ಮಾಜಿ ಕೋಚಿಂಗ್ ವಿದ್ಯಾರ್ಥಿಗಳ ವಿರುದ್ಧ ಆರೋಪ ಮಾಡಲಾಗಿದೆ. ಅವರಿಬ್ಬರೇ ಈ ರೀತಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದ್ದು, ಅವರಿಬ್ಬರೂ ಮಾಡಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಶಿಕ್ಷಕ ಸುಮಿತ್ ಸಿಂಗ್, ಮಾಲುಪುರ ಗ್ರಾಮದ ನಿವಾಸಿ, ರಾಮಸ್ವರೂಪ ವಿದ್ಯಾಲಯದಲ್ಲಿ ಶಿಕ್ಷಕ. ಇದಲ್ಲದೇ ಶಾಲೆಯಿಂದ ಪ್ರತ್ಯೇಕವಾಗಿ ಮಾಲುಪುರ ರಸ್ತೆಯಲ್ಲಿ ಕೋಚಿಂಗ್ ನಡೆಸುತ್ತಿದ್ದರು. ಕೋಚಿಂಗ್​​ ಸೆಂಟರ್​ಗೆ ಬಂದ ವಿದ್ಯಾರ್ಥಿಗಳೇ ಈ ರೀತಿಯಾಗಿ ಗುಂಡು ಹಾರಿಸಿದ್ದಾರೆಂದು ಹೇಳಲಾಗುತ್ತಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 17 =
Remember me
