ಮುಂಬೈ:ರೊಬೊಟಿಕ್ಸ್ ಮತ್ತು ತಂತ್ರಜ್ಞಾನದ ಬಗ್ಗೆ ಕುತೂಹಲ, ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳು ಜಪಾನಿ ಭಾಷೆ ಕಲಿಯಲು ಮುಂದಾಗಿದ್ದು, ತಜ್ಞರು ಹೆಚ್ಚಿನ ಸಹಾಯ ಮಾಡುತ್ತಿದ್ದಾರೆ.ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೂರದ ಗ್ರಾಮದಲ್ಲಿ ಜಿಲ್ಲಾ ಪರಿಷತ್​ ಆಶ್ರಯದ ಶಾಲಾ ವಿದ್ಯಾರ್ಥಿಗಳಿಗೆ ಜಪಾನ್ ಭಾಷೆ ಕಲಿಯಲು ಸಹಾಯವಾಗುವಂತೆ ಟೊಕಿಯೋದ ಪ್ರಾಧ್ಯಾಪಕರು ಹಲವು ಪುಸ್ತಕಗಳನ್ನು ಕಳುಹಿಸಿದ್ದಾರೆ.ಔರಂಗಾಬಾದ್​​​​ನಿಂದ 25 ಕಿ.ಮೀ.ದೂರದಲ್ಲಿರುವ ಗಡೀವತ್ ಹಳ್ಳಿಯ ಜಿಲ್ಲಾ ಪರಿಷತ್ ಆಶ್ರಯದ ಶಾಲಾ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದ ಮೂಲಕ ಜಪಾನ್ ಭಾಷೆ ಕಲಿತು ಅದೇ ಭಾಷೆಯಲ್ಲಿ ಮಾತನಾಡುವುದನ್ನು ಆರಂಭಿಸಿದ ನಂತರ ಈ ಗ್ರಾಮ ಹಲವರ ಗಮನ ಸೆಳೆದಿದೆ.
ಇದನ್ನೂ ಓದಿ:ಇನ್ನೂ ಆಸ್ಪತ್ರೆಯಲ್ಲೇ ಇರುವ ಗೃಹ ಸಚಿವ ಅಮಿತ್​ ಷಾ ಆರೋಗ್ಯ ಸ್ಥಿತಿ ಏನು?
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಶಾಲೆಯು ವಿದೇಶಿ ಭಾಷಾ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿತು, ಅದರಡಿ ನಾಲ್ಕರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ತಾವು ಕಲಿಯಲು ಬಯಸುವ ಭಾಷೆಯನ್ನು ಆಯ್ಕೆ ಮಾಡಲು ತಿಳಿಸಲಾಯಿತು. ರೊಬೊಟಿಕ್ಸ್ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದರಿಂದ ಅವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಜಪಾನಿ ಭಾಷೆಯನ್ನು ಆರಿಸಿಕೊಂಡರು.ನಂತರ ಸ್ಥಳೀಯ ಜಪಾನಿ ತಜ್ಞರು ಆನ್​ಲೈನ್​​ನಲ್ಲಿ ಜಪಾನ್ ಭಾಷೆಯನ್ನು ಉಚಿತವಾಗಿ ಆನ್‌ಲೈನ್​ ನಲ್ಲಿ ಕಲಿಸಲು ಪ್ರಾರಂಭಿಸಿದರು. ಪ್ರಸ್ತುತ, 70 ವಿದ್ಯಾರ್ಥಿಗಳು ಈ ಭಾಷೆಯನ್ನು ಕಲಿಯುತ್ತಿದ್ದಾರೆ.ಪಿಟಿಐ ಜೊತೆ ಮಾತನಾಡಿದ ಜಿಲ್ಲಾ ಪರಿಷತ್ ಶಿಕ್ಷಣ ವಿಸ್ತರಣಾ ಅಧಿಕಾರಿ ರಮೇಶ್ ಠಾಕೂರ್, “ಕಳೆದ 25 ವರ್ಷಗಳಿಂದ ಜಪಾನ್‌ನಲ್ಲಿ ನೆಲೆಸಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಜಪನೀಸ್ ಲ್ಯಾಂಗ್ವೇಜ್ ಆ್ಯಂಡ್ ಲಿಂಗ್ವಿಸ್ಟಿಕ್ಸ್ ನ ಪ್ರೊಫೆಸರ್ ಪ್ರಶಾಂತ್ ಪರದೇಶಿ ಎಂಬುವವರು ಈ ಉಪಕ್ರಮದ ಬಗ್ಗೆ ತಿಳಿದುಕೊಂಡು, ಮಕ್ಕಳು ವಿದೇಶಿ ಭಾಷೆಯನ್ನು ಉತ್ತಮ ರೀತಿಯಲ್ಲಿ ಕಲಿಯಲು ಸಹಾಯ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ :ಎಂಬಿಬಿಎಸ್​ ನಂತರದ ಡಿಪ್ಲೊಮಾ ಕೋರ್ಸ್ ಆರಂಭಿಸಿದ ಎನ್​ಬಿಇ; ನೀಟ್ ಪಿಜಿ ಮೂಲಕ ಪ್ರವೇಶ
“ಪರದೇಶಿ ಅವರಿಗೆ ಯೋಜನೆಯ ವಿವರಗಳನ್ನು ದೂರವಾಣಿ ಮೂಲಕ ನೀಡಲಾಗಿದ್ದು, ಮರಾಠಿ ಮತ್ತು ಜಪನೀಸ್ ಭಾಷೆಗಳ ಆರು ಸೆಟ್ ಪುಸ್ತಕಗಳನ್ನು ಕಳುಹಿಸಿದ್ದಾರೆ. ಜಪನೀಸ್- ಮರಾಠಿ ನಿಘಂಟು, ಅನುವಾದಿತ ಕಥಾ ಪುಸ್ತಕಗಳು ಮತ್ತು ವ್ಯಾಕರಣ ಹಾಗೂ ಇತರ ಪಠ್ಯಪುಸ್ತಕಗಳನ್ನು ಕಳುಹಿಸಿದ್ದಾರೆ ಎಂದು ಅವರು ತಿಳಿಸಿದರು.ಜಪಾನಿ ಭಾಷೆ ಕಲಿಸುವ ಈ ಯೋಜನೆಯನ್ನು ಜಿಲ್ಲೆಯ ಇನ್ನು ನಾಲ್ಕು ಶಾಲೆಗಳಿಗೆ ವಿಸ್ತರಿಸಲು ಜಿಲ್ಲಾ ಪರಿಷತ್ ನಿರ್ಧರಿಸಿದೆ ಎಂದು ಠಾಕೂರ್ ತಿಳಿಸಿದ್ದಾರೆ.
ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​; ದ್ವಾರದಲ್ಲಿದ್ದ ಪ್ಲಾಸ್ಟಿಕ್​ ಚೀಲದ ಮೇಲೆ ಏನಿದೆ ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 4 =
Remember me
