ನವದೆಹಲಿ:ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ನೋಟುಗಳನ್ನು ಇಟ್ಟು ಪಾಸ್​ ಮಾಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.
ಐಪಿಎಸ್​ ಅಧಿಕಾರಿ ಅರುಣ್​ ಬೋಥ್ರಾ ಅವರು ತಮ್ಮ ಎಕ್ಷ್​(ಟ್ವಿಟರ್​)ನಲ್ಲಿ ನೋಟುಗಳ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ 100 ಹಾಗೂ 200 ರೂ. ಮುಖಬೆಲೆಯ ಅನೇಕ ನೋಟುಗಳು ಮತ್ತು 500 ರೂ. ಮುಖಬೆಲೆಯ ಒಂದು ನೋಟು ಇದೆ. ಈ ನೋಟುಗಳನ್ನು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಿಂದ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಸೆಪ್ಟೆಂಬರ್ 8 ರಿಂದ 10 ರವರೆಗೆ ದೆಹಲಿ ಶಾಲಾ-ಕಾಲೇಜುಗಳಿಗೆ ರಜೆ; ಬ್ಯಾಂಕುಗಳು, ಮಾರುಕಟ್ಟೆಗಳೂ ಕ್ಲೋಸ್…
ಫೋಟೋವನ್ನು ಶೇರ್​ ಮಾಡಿಕೊಂಡಿರುವ ಅರುಣ್​ ಬೋಥ್ರಾ, ಈ ಫೋಟೋವನ್ನು ಶಿಕ್ಷಕರೊಬ್ಬರು ಕಳುಹಿಸಿದರು. ಈ ನೋಟುಗಳನ್ನು ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ಇಟ್ಟು ಪಾಸ್​ ಮಾರ್ಕ್ಸ್​ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಇದು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಡೀ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದಿದ್ದಾರೆ.
ಇದೀಗ ಬೋಥ್ರಾ ಎಂಬುವರು ಶೇರ್​ ಮಾಡಿಕೊಂಡಿರುವ ಫೋಟೋ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುವಂತೆ ಅವರತಿಗೆ ತಿಳಿಸಬೇಕಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
Pic sent by a teacher. These notes were kept inside answer sheets of a board exam by students with request to give them passing marks.
Tells a lot about our students, teachers and the entire educational system.pic.twitter.com/eV76KMAI4a
— Arun Bothra 🇮🇳 (@arunbothra)August 21, 2023

ಇದು ಶಿಕ್ಷಣ ವ್ಯವಸ್ಥೆಗೆ ನೇರವಾಗಿ ಸಂಬಂಧಿಸಿಲ್ಲ. ಅವರಲ್ಲಿ ಹೆಚ್ಚಿನವರು ಹುಡುಗಿಯರು ಅಥವಾ ದೂರದ ಪ್ರದೇಶಗಳ ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಬಯಸುತ್ತಾರೆ. ವಾಸ್ತವವಾಗಿ ಅವರು ಶಿಕ್ಷಣದ ಮೂಲಕ ಭವಿಷ್ಯವನ್ನು ನೋಡುವುದಿಲ್ಲ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಪೇಪರ್ ತಿದ್ದುಪಡಿ ದಿನಗಳಲ್ಲಿ ಇದು ನನಗೆ ಕನಿಷ್ಠ ಮೂರು ಬಾರಿ ಅನುಭವವಾಗಿದೆ. 20 ವರ್ಷಗಳ ಹಿಂದೆ ಸಹೋದ್ಯೋಗಿಗಳಿಗೂ ಇದೇ ಅನುಭವ ಆಗಿದೆ. ಸಾಮಾನ್ಯವಾಗಿ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಗಳ ಬದಲಿಗೆ ದುಃಖದ ಕಥೆಯ ನಿರೂಪಣೆಯೊಂದಿಗೆ ಹಣವನ್ನೂ ಇರಿಸಲಾಗಿರುತ್ತದೆ. ಆದರೆ, ಅಂತಹ ವಿದ್ಯಾರ್ಥಿಗಳು ಸಾಮಾನ್ಯವಾಗಿ ವಿಫಲರಾಗುತ್ತಾರೆ ಎಂದು ಹೇಳಬೇಕಾಗಿಲ್ಲ ಎಂದು ಮತ್ತೊರ್ವ ನೆಟ್ಟಿಗರ ಕಾಮೆಂಟ್​ ಮಾಡಿದ್ದಾರೆ.
ಇದನ್ನೂ ಓದಿ:VIDEO |ಅಬ್ಬಾ..ಇದು ಭಯಂಕರ ಫೋಟೋಶೂಟ್; ವರನ ಸ್ಥಿತಿ ಹೇಗಿದೆ? ಎಂದ ನೆಟ್ಟಿಗರು
ಹೀಗೆ ಸಾಕಷ್ಟು ಮಂದಿ ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಎಲ್ಲವೂ ಅಂಕಗಳೇ ಮೇಲೆ ನಿರ್ಧಾರವಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದ ಬದಲು ಅಂಕ ಗಳಿಕೆಯ ಹಿಂದೆ ಬಿದ್ದಿದ್ದಾರೆ. ಆದರೆ, ಅಂಕ ಗಳಿಕೆಯೇ ಮುಖ್ಯವಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕಾಗಿದೆ.(ಏಜೆನ್ಸೀಸ್​)
ಪ್ರತಿದಿನ ಕೇವಲ 1 ಗಂಟೆ ಕೆಲಸಕ್ಕೆ ಈ ಟೆಕ್ಕಿ ಪಡೆಯುತ್ತಿರುವ ಸಂಬಳ ಕೇಳಿದ್ರೆ ಬೆರಗಾಗೋದು ಖಂಡಿತ!

ಸರ್ವಪಕ್ಷ ಸಭೆಯಲ್ಲಿ ಅನುಭವ ಧಾರೆಎರೆದ ಆರು ಮಾಜಿ ಸಿಎಂಗಳು!

ತೆಲಂಗಾಣ ಚುನಾವಣೆ: ಟಿಕೆಟ್ ನಿರಾಕರಿಸಿದ ನಂತರ ಮಂಡಿಯೂರಿ ಕುಳಿತು ಬಿಕ್ಕಿ ಬಿಕ್ಕಿ ಅತ್ತ ಮಾಜಿ ಉಪಮುಖ್ಯಮಂತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
