ಚೆನ್ನೈ:ನಡುರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡಿ, ಸರ್ಕಾರಿ ಬಸ್​ ಉದ್ಯೋಗಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ನಾಯಕಿ ಹಾಗೂ ನಟಿ ರಂಜನಾ ನಚಿಯರ್​ರನ್ನು ಬಂಧನ ಮಾಡಲಾಗಿದೆ.
ಬಸ್​ನಲ್ಲಿ ಜೋತು ಬಿದ್ದು ಅಪಾಯಕಾರಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ನಡುರಸ್ತೆಯಲ್ಲೇ ಥಳಿಸಿದ್ದಕ್ಕೆ ಮಾಂಗಾಡು ಪೊಲೀಸರು ರಂಜನಾರನ್ನು ಶನಿವಾರ (ನ.04) ಬಂಧಿಸಿದ್ದಾರೆ.
ಶನಿವಾರ ಚೆನ್ನೈನ ಕರುಂಬಕ್ಕಂನಲ್ಲಿ ಈ ಘಟನೆ ನಡೆದಿದೆ. ಕುಂದ್ರತ್ತೂರಿನಿಂದ ಪೋರೂರಿಗೆ ತೆರಳುತ್ತಿದ್ದ ಕಿಕ್ಕಿರಿದು ತುಂಬಿದ್ದ ಸರ್ಕಾರಿ ಬಸ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುವುದನ್ನು ಕಾರಿನಲ್ಲಿ ತೆರಳುತ್ತಿದ್ದ ರಂಜನಾ ಗಮನಿಸಿದ್ದಾರೆ. ನಂತರ ಹಿಂಬಾಲಿಸಿ ಹೋಗಿ, ಬಸ್​ ನಿಲ್ಲಿಸಿದ್ದಾರೆ. ಬಸ್​ನ ಬಾಗಿಲ ಬಳಿ ಬಂದು ರಂಜನಾ, ಕೆಳಗಡೆ ಇಳಿಯುವಂತೆ ವಿದ್ಯಾರ್ಥಿಗಳಿಗೆ ಹೇಳುತ್ತಾರೆ. ಆದರೆ, ಇಳಿಯಲು ನಿರಾಕರಿಸಿದಾಗ ಆಕ್ರೋಶಗೊಂಡ ರಂಜನಾ, ವಿದ್ಯಾರ್ಥಿಗಳನ್ನು ಥಳಿಸುತ್ತಾರೆ. ಇದೇ ಸಂದರ್ಭದಲ್ಲೇ ಬಸ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ ರಂಜನಾ, ಸ್ವಲ್ಪ ಜವಾಬ್ದಾರಿ ತೋರುವಂತೆ ಒತ್ತಾಯಿಸಿದರು. ಇದಿಷ್ಟು ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
BJP functionary Ranjana seen here pulling up the bus conductor for allowing commuters to footboard on a bus in Chennai has been arrested! 🤷🏻‍♀️🤷🏻‍♀️🤷🏻‍♀️pic.twitter.com/5cKC58sQ8j
— Akshita Nandagopal (@Akshita_N)November 4, 2023

ವೈರಲ್​ ಆಗಿರುವ ವಿಡಿಯೋಗೆ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ರಂಜನಾ ಅವರು ಮಾಡಿದ್ದು ಸರಿ. ಬಸ್​ನಲ್ಲಿ ಈ ರೀತಿಯ ಪ್ರಯಾಣ ತುಂಬಾ ಅಪಾಯ. ಸ್ವಲ್ಪ ಯಾಮಾರಿದರೆ ಪ್ರಾಣವೇ ಹೋಗುತ್ತದೆ ಎಂದು ವಾದಿಸಿದ್ದಾರೆ. ಇನ್ನೂ ಕೆಲವರು ಆಕೆಗೆ ಹೊಡೆಯುವ ಹಕ್ಕನ್ನು ಕೊಟ್ಟಿದ್ದು, ಯಾರು? ಬೇಕಿದ್ದರೆ ಬಾಯಿ ಮಾತಲ್ಲಿ ಒಂದೆರೆಡು ಬುದ್ಧಿಮಾತು ಹೇಳಬಹುದಿತ್ತು. ಆದರೆ, ಕೈ ಮಾಡಿದ್ದು ಸರಿಯಲ್ಲ. ಅಲ್ಲದೆ, ಅವರು ಬಳಸಿ ಭಾಷೆಯೂ ಕೂಡ ಸುಸಂಸ್ಕೃತವಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ.
ವಿಡಿಯೋ ವೈರಲ್​ ಆದ ಬಳಿಕ ಅದು ಮಾಂಗಾಡು ಠಾಣಾ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ, ರಂಜನಾರನ್ನು ಬಂಧಿಸಲು ಅವರ ಮನೆಗೆ ತೆರಳಿದಾಗ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಬಳಿ ಅರೆಸ್ಟ್​ ವಾರೆಂಟ್‌ಗೆ ಒತ್ತಾಯಿಸುತ್ತಿರುವ ದೃಶ್ಯಾವಳಿ ಮತ್ತೊಂದು ವಿಡಿಯೋದಲ್ಲಿದ್ದು, ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದಹಾಗೆ ರಂಜನಾ ವಿರುದ್ಧ ಯಾವುದೇ ಅರೆಸ್ಟ್​ ವಾರಂಟ್ ಹೊರಡಿಸಲಾಗಿಲ್ಲ ಮತ್ತು ಎಫ್‌ಐಆರ್ ಮಾತ್ರ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
The spree of arrests continues .@RanjanaNachiyarhas been arrested for an act she had committed out of genuine concern for the school students . Infact it’s the transport dept and the school education dept ministers who have to be held accountable for this plight despite 70…pic.twitter.com/35fVzxuNEg
— karthik gopinath (@karthikgnath)November 4, 2023

ವಿಶ್ವಕಪ್ ಫೈನಲ್​ ದಿನದಂದು ಈ ಸಾಹಸಕ್ಕೆ ಕೈ ಹಾಕ್ಬೇಡಿ! ಖಲಿಸ್ತಾನಿ ಉಗ್ರನಿಂದ ಮತ್ತೊಂದು ಬೆದರಿಕೆ ​

ಸುಖಾಸುಮ್ಮನೆ ಕೊಲೆಯಾದ ಯುವತಿ; ಭಾಗ-2

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 19 =
Remember me
