ನ್ಯೂಯಾರ್ಕ್​​: ‘ನಾನು ಕರೊನ ಪರೀಕ್ಷೆ ಮಾಡಿಸಿಕೊಂಡಿದ್ದು, ಕೋವಿಡ್​ ಪಾಸಿಟಿವ್ ಎಂಬುದು ದೃಢಪಟ್ಟಿದೆ. ಆದರೆ ಯಾವುದೇ ರೋಗಲಕ್ಷಣಗಳಿಲ್ಲ. ಆದಾಗ್ಯೂ ಮುಂಜಾಗ್ರತೆ ದೃಷ್ಟಿಯಿಂದ ಹೋಂ ಕ್ವಾರಂಟೈನ್​ಗೆ ಒಳಗಾಗುತ್ತಿದ್ದೇನೆ..’– ಕರೊನಾ ಸೋಂಕಿತರಾದ ಹಲವರು ಇತ್ತೀಚೆಗೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿರುವುದು ಸಾಮಾನ್ಯ. ಯಾಕೆ ಸೋಂಕಿದ್ದರೂ ಲಕ್ಷಣಗಳಿಲ್ಲ ಎಂಬ ಈ ಅಂಶದ ಬಗ್ಗೆ ಈಗ ಅಧ್ಯಯನವೊಂದು ಬೆಳಕು ಚೆಲ್ಲಿದೆ.
ಕರೊನಾ ವೈರಸ್​ನಲ್ಲಿ ನೋವು ನಿವಾರಕ ಗುಣವಿದೆ. ಆರಂಭಿಕ ಹಂತದಲ್ಲಿ ಸೋಂಕಿತರಲ್ಲಿ ಅನೇಕರು ಆರಾಮವಾಗಿ ಓಡಾಡಿಕೊಂಡಿರುತ್ತಾರೆ. ಏಕೆಂದರೆ ಅವರಲ್ಲಿ ಸೋಂಕಿದ್ದರೂ ಯಾವ ನೋವೂ ಇರುವುದಿಲ್ಲ. ಇದೇ ಕಾರಣಕ್ಕೆ ಕರೊನಾ ಸೋಂಕು ಹೆಚ್ಚಾಗುತ್ತಿರುವುದು ಎಂಬುದಾಗಿ ಅಮೆರಿಕದ ಅರಿಜೋನಾ ಯುನಿವರ್ಸಿಟಿಯ ರಾಜೇಶ್​ ಖನ್ನಾ ತಿಳಿಸಿದ್ದಾರೆ.
ವೈರಸ್​ನಿಂದಾಗಿ ಸೋಂಕು ಉಂಟಾದರೂ ವೈರಸ್​ನ ಸ್ಪೈಕ್​ನಲ್ಲಿರುವ ಪ್ರೊಟೀನ್​ ಆ ನೋವನ್ನು ಅದುಮಿಡುತ್ತದೆ. ಹೀಗಾಗಿ ಸೋಂಕಿತರಿಗೆ ತಾವು ಚೆನ್ನಾಗಿದ್ದೇವೆ ಎನ್ನುವ ಫೀಲ್​ ಇರುತ್ತದೆ. ಹಾಗಂತ ಅವರು ಎಲ್ಲೆಂದರಲ್ಲಿ ಓಡಾಡುವುದರಿಂದ ಸೋಂಕು ಹೆಚ್ಚಾಗುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ಅಂದಹಾಗೆ ಇಂಥದ್ದೊಂದು ಅಧ್ಯಯನ ಪ್ರಕಟವಾಗಿರುವ ಜರ್ನಲ್ ಹೆಸರು ‘ಪೇನ್​’. (ಏಜೆನ್ಸೀಸ್​)
ಇದನ್ನು ಓದಿ:ಜನವರಿಯಲ್ಲಿ ಸಿಗಲಿದೆ ಕರೊನಾ ಲಸಿಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 9 =
Remember me
