ನವದೆಹಲಿ:ಜಗತ್ತಿನೆಲ್ಲೆಡೆ ಆತಂಕ ಉಂಟು ಮಾಡಿರುವ ಒಮಿಕ್ರಾನ್​ ಮತ್ತಷ್ಟು ಭೀತಿ ಹುಟ್ಟಿಸುವಂಥ ವಿಚಾರಗಳು ಬೆಳಕಿಗೆ ಬರಲಾರಂಭಿಸಿವೆ. ಈಗಾಗಲೇ ಲಸಿಕೆ ಪಡೆದಿದ್ದರೂ, ಆ್ಯಂಟಿಬಾಡಿ ಚಿಕಿತ್ಸೆಗೆ ಒಳಗಾಗಿದ್ದರೂ ಒಮಿಕ್ರಾನ್ ಸೋಂಕು ತಗುಲುವ ಸಾಧ್ಯತೆಗಳಿವೆ ಎಂಬುದು ಹೊಸ ಅಧ್ಯಯನವೊಂದರಲ್ಲಿ ಕಂಡುಬಂದಿದೆ.
ಯುಎಸ್​ನ ಕೊಲಂಬಿಯಾ ಯುನಿವರ್ಸಿಟಿ ಮತ್ತು ಯುನಿವರ್ಸಿಟಿ ಆಫ್ ಹಾಂಗ್​ಕಾಂಗ್​ ನಡೆಸಿದ ಜಂಟಿ ಅಧ್ಯಯನದ ವರದಿ ಗುರುವಾರ ನೇಚರ್ ಜರ್ನಲ್​ನಲ್ಲಿ ಪ್ರಕಟಗೊಂಡಿದ್ದು, ಅದರಲ್ಲಿ ಒಂದಷ್ಟು ವಿಶೇಷ ಮಾಹಿತಿಗಳು ಬಹಿರಂಗಗೊಂಡಿವೆ.
ಇದನ್ನೂ ಓದಿ:ಭಾರತದ ಈ ಎಲ್ಲ ಮೊದಲ ಮಹಿಳೆಯರ ನೇಮಕಕ್ಕೆ ಮೋದಿಯೇ ಕಾರಣ: ಜೆ.ಪಿ. ನಡ್ಡಾ
ಸದ್ಯದ ಯಾವುದೇ ಲಸಿಕೆ ಎರಡೂ ಡೋಸ್ ತೆಗೆದುಕೊಂಡಿದ್ದರೂ ಅವುಗಳಿಂದ ಸಿಗುವ ರೋಗನಿರೋಧಕ ಶಕ್ತಿ ಹಳೆಯ ವೈರಸ್​ಗಿಂತ ರೂಪಾಂತರಿ ಒಮಿಕ್ರಾನ್​ ವೈರಸ್​ ವಿಷಯದಲ್ಲಿ ಕಡಿಮೆ ಪರಿಣಾಮಕಾರಿ ಎಂಬ ಅಂಶ ಈ ಅಧ್ಯಯನದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ:ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!
ಮಾತ್ರವಲ್ಲ ವೇಗವಾಗಿ ವ್ಯಾಪಿಸುತ್ತಿರುವ ರೂಪಾಂತರಿ ವೈರಸ್​ ಒಮಿಕ್ರಾನ್​ನ ಪ್ರೊಟೀನ್​ ಸ್ಪೈಕ್​ಗಳು ವಿಶಿಷ್ಟವಾಗಿದ್ದು, ಹೊಸ ಸೋಂಕನ್ನು ತಡೆಯಲು ಹೊಸ ಲಸಿಕೆಗಳ ಸಂಶೋಧನೆಯ ಅಗತ್ಯವಿದೆ ಎಂದೂ ಈ ಅಧ್ಯಯನ ಅಭಿಪ್ರಾಯ ಪಟ್ಟಿದೆ. –ಏಜೆನ್ಸೀಸ್​
ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

ಇಲ್ಲಿ ನಾವು ಅಧಿಕಾರಕ್ಕೆ ಬಂದರೆ ಇವೆಲ್ಲವನ್ನೂ ಮಾಡ್ತೇವೆ: ಅರವಿಂದ ಕೇಜ್ರಿವಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
