ನವದೆಹಲಿ: ದಿನಕ್ಕೊಂದು ಹೊಸ ಲಕ್ಷಣದ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದು ಕೋವಿಡ್ 19ನಿಂದ ಕಿವಿಗೂ ಸೋಂಕು ತಗುಲಬಹುದಂತೆ! – ಸೈಂಟಿಫಿಕ್ ಜರ್ನಲ್ ಜೆಎಎಂಎ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಕೋವಿಡ್ 19 ಕಿವಿ ಸೋಂಕಿನ ಉಲ್ಲೇಖ ಇರುವುದಾಗಿ ವರದಿಯಾಗಿದೆ.
ಕೋವಿಡ್​ 19 ಸೋಂಕಿನಿಂದಾಗಿ ಮೃತಪಟ್ಟ ಮೂವರ ಶವಪರೀಕ್ಷೆಯ ವರದಿ ಆಧರಿಸಿದ ಅಧ್ಯಯನ ವರದಿ ಇದಾಗಿದ್ದು, ವೈರಸ್​ ಕಿವಿಯೊಳಗೆ ಮಧ್ಯಭಾಗದಲ್ಲಿ ಇರುವುದು ಪತ್ತೆಯಾಗಿತ್ತು. ಅಲ್ಲದೆ, ಕಿವಿಯ ಹಿಂಭಾಗದ ತಲೆಯ ಭಾಗದಲ್ಲೂ ವೈರಸ್ ಇರುವಿಕೆ ಪತ್ತೆಯಾಗಿದೆ.
ಇದನ್ನೂ ಓದಿ:ಕೋವಿಡ್​ ಟೆಸ್ಟ್ ದರದ ಹೊರೆ ಇಳಿದೀತೇ?: ಭರವಸೆ ಮೂಡಿಸಿದೆ ಐಐಟಿ ಖರಗ್​ಪುರದ ಉಪಕರಣ
ಇದಕ್ಕೆ ಸಂಬಂಧಿಸಿ ಸಂಶೋಧನೆ ನಡೆಸುವ ಸಲುವಾಗಿ ಮೃತ ವ್ಯಕ್ತಿಯ ಕಿವಿಯ ಹಿಂಭಾಗದ ತಲೆಯ ಭಾಗವನ್ನು ಪ್ರತ್ಯೇಕಿಸಿ ಪರಿಶೀಲಿಸಿದಾಗ ಕಿವಿಯ ಮಧ್ಯಭಾಗದಲ್ಲಿರುವುದೂ ಪತ್ತೆಯಾಗಿತ್ತು. ಈ ವೈರಸ್​ಗಳು SARS-CoV-2 ಆಗಿದ್ದವು. ಹೀಗಾಗಿ ಮಾಸ್ಕ್ ಧರಿಸಿಕೊಂಡು ಓಡಾಡುವುದು ಅವಶ್ಯ ಎಂಬುದನ್ನು ಮತ್ತೆ ಅಧ್ಯಯನ ದೃಢೀಕರಿಸಿದೆ. (ಏಜೆನ್ಸೀಸ್)
VIDEO: ಮಾಸ್ಕ್ ಮಹತ್ವ ಗೊತ್ತಾಗಿಲ್ವಾ, ಇದನ್ನೊಮ್ಮೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + thirteen =
Remember me
