ಲಂಡನ್​: ಕರೊನಾ ಕೋವಿಡ್ 19 ವೈರಸ್ ಸೋಂಕಿನ ಪರಿಣಾಮ ಎಷ್ಟು ಭೀಕರವಾಗಿ ಇರಲಿದೆ ಎಂದರೆ ಶೀಘ್ರವೇ 100 ಕೋಟಿಗೂ ಹೆಚ್ಚಿನವರು ಬಡತನ ಅನುಭವಿಸಲಿದ್ದಾರೆ. ಇವರಲ್ಲಿ ಅನೇಕರು ಕಡುಬಡತನವನ್ನು ಎದುರಿಸಬೇಕಾಗುತ್ತದೆ. ಜಾಗತಿಕವಾಗಿ ದಿನದ ಆದಾಯ500 ದಶಲಕ್ಷ ಡಾಲರ್​ಗೆ ಕುಸಿಯಲಿದೆ ಎಂದು ಲಂಡನ್​ನ ಕಿಂಗ್ಸ್ ಕಾಲೇಜ್ ಮತ್ತು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ ನಡೆಸಿದ ಸಂಶೋಧನಾ ವರದಿ ಹೇಳಿದೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಡತನ ರೇಖೆಗಿಂತ ಮೇಲೆ ಬಂದು ಮಧ್ಯಮ ಆದಾಯ ಹೊಂದಿದ ಕೋಟ್ಯಂತರ ಜನ ಮತ್ತೆ ಬಡತನ ರೇಖೆಗಿಂತ ಕೆಳಕ್ಕೆ ತಳ್ಳಲಿದೆ.ಭಾರತ, ಬಾಂಗ್ಲಾದೇಶ, ಇಂಡೋನೇಷ್ಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್​ ಮುಂತಾದ ದೇಶಗಳಲ್ಲಿ ಗರಿಷ್ಠ ಮಟ್ಟದ ಬಡತನ ಕಾಡಲಿದೆ.
ಕೋವಿಡ್ 19 ಸೋಂಕು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೀಘ್ರವೇ ಅತ್ಯಂತ ಕಷ್ಟಕರವಾದ ಆರ್ಥಿಕ ಸಂಕಷ್ಟವನ್ನು ಉಂಟುಮಾಡಲಿದೆ. ಈ ಸಂಕಷ್ಟ ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳದೇ ಹೋದರೆ ಜಾಗತಿಕ ಬಡತನ 20-30 ವರ್ಷದಷ್ಟು ಹಿಂದಕ್ಕೆ ಹೋಗಲಿದೆ.
\ ಪ್ರೊಫೆಸರ್ ಆ್ಯಂಡಿ ಸಮನರ್​         ಕಿಂಗ್ಸ್ ಕಾಲೇಜ್ ಲಂಡನ್
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕೋಟ್ಯಂತರ ಜನ ಬಡತನ ರೇಖೆಗಿಂತ ಸ್ವಲ್ಪವೇ ಮೇಲಿನ ಆದಾಯ ಹೊಂದಿದ್ದಾರೆ. ಅವರಿಗೆ ಕೋವಿಡ್ 19 ಸೋಂಕು ಕೊಟ್ಟಿರುವ ಆರ್ಥಿಕ ಆಘಾತವನ್ನು ತಡೆದುಕೊಳ್ಳಲಾರರು. ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ 110 ಕೋಟಿ ಜನರು ಕಡುಬಡತನಕ್ಕೆ ತಳ್ಳಲ್ಪಡುತ್ತಾರೆ. ಅವರ ಆದಾಯ ದಿನವೊಂದರ 140 ರೂಪಾಯಿಗೆ ಕುಸಿಯಲಿದೆ ಎಂದು ವಿಶ ಸಂಸ್ಥೆ, ಯೂನಿವರ್ಸಿಟಿ ವರ್ಲ್ಡ್​ ಇನ್​ಸ್ಟಿಟ್ಯೂಟ್ ಫಾರ್ ಡೆವಲಪ್​ಮೆಂಟ್​ ಎಕನಾಮಿಕ್ಸ್ ರಿಸರ್ಚ್​ ವರದಿ ಹೇಳಿದೆ.
ಸಮನರ್​ ಹೇಳಿದ ಮೂರು ಅಂಶಗಳು:ಕೋವಿಡ್ 19 ಸಂಕಷ್ಟದಿಂದ ಪಾರಾಗಲು ಮೂರು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆ ಮೂಲಕ ಈ ಬಿಕ್ಕಟ್ಟಿನಿಂದ ಪಾರಾಗಲು ಸುಗಮ ಹಾದಿಯನ್ನು ಕಂಡುಕೊಳ್ಳಬೇಕು ಎಂದು ಪ್ರೊಫೆಸರ್ ಆ್ಯಂಡಿ ಸಮನರ್​ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ಕೆಂಪೇಗೌಡ ಲೇಔಟ್​ ಸೈಟ್​ ತಗೊಂಡಿದ್ದೀರಾ? ಹಾಗಾದ್ರೆ ನಿಮ್ ಕೈಲಿರೋ ಹಕ್ಕುಪತ್ರ ಚೆಕ್​ ಮಾಡ್ಕೊಳ್ಳಿ..
ಮೊದಲನೆಯದಾಗಿ, ಬಡತನ ಮತ್ತು ಕೋವಿಡ್ 19 ವಿರುದ್ಧ ಸಮರ ಸಾರಲು ಕ್ಷಿಪ್ರವಾಗಿ ಗ್ಲೋಬಲ್ ಕಮಿಷನ್​ ರಚನೆ ಮಾಡಬೇಕು. ಈ ನಿಟ್ಟಿನಲ್ಲಿ ಜಾಗತಿಕ ನಾಯಕರು ತುರ್ತಾಗಿ ಗಮನಹರಿಸಬೇಕು.ಎಷ್ಟರ ಮಟ್ಟಿಗೆ ಹಣಕಾಸಿನ ನೆರವು ಬೇಕಾಗಬಹುದು ಎಂಬುದನ್ನು ಅಂದಾಜಿಸಬೇಕು. ಶ್ರೀಮಂತ ರಾಷ್ಟ್ರಗಳು ಯಾವ ರೀತಿ ನೆರವು ನೀಡಬಹುದು ಎಂಬುದರ ಯೋಜನೆಯನ್ನೂ ರೂಪಿಸಬೇಕು.
ಎರಡನೇಯದಾಗಿ, ಹೆಚ್ಚುತ್ತಿರುವ ಆರ್ಥಿಕ ಸಂಕಷ್ಟವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಇರುವ ದೇಶಗಳಿಗೆ ಇಂಟರ್​ನ್ಯಾಷನಲ್​ ಮಾನಿಟರಿ ಫಂಡ್​ (ಐಎಂಎಫ್) ಕ್ಷಿಪ್ರವಾಗಿ ಹಣವನ್ನು ಬಿಡುಗಡೆ ಮಾಡಬೇಕು.ಅದೇ ರೀತಿ ವಿಶ್ವ ಬ್ಯಾಂಕ್ ನೀಡಿರುವ ಸಾಲದ ಮರುಪಾವತಿಯನ್ನು ಕನಿಷ್ಠ 2020ರ ಡಿಸೆಂಬರ್ ಕೊನೆಯವರೆಗೆ ತಡೆ ಹಿಡಿಯಬೇಕು. ಕೆಲವು ರಾಷ್ಟ್ರಗಳ ಸಾಲದ ರೀಸ್ಟ್ರಕ್ಷರಿಂಗ್​ ಅಥವಾ ಸಂಪೂರ್ಣ ಮನ್ನಾಗೊಳಿಸುವುದು ಮಾಡಬೇಕಾಗಬಹುದು.
ಇದನ್ನೂ ಓದಿ:ಕೆಂಪೇಗೌಡ ಲೇಔಟ್​ ಸೈಟ್​ ತಗೊಂಡಿದ್ದೀರಾ? ಹಾಗಾದ್ರೆ ನಿಮ್ ಕೈಲಿರೋ ಹಕ್ಕುಪತ್ರ ಚೆಕ್​ ಮಾಡ್ಕೊಳ್ಳಿ..
ಮೂರನೇಯದಾಗಿ,ಪರಿಸ್ಥಿತಿ ಸ್ಥಿರವಾಗಿ ಇರುವ ಕಾರಣ ರಾಷ್ಟ್ರಗಳು ಹಣವನ್ನು ಸಾಮಾಜಿಕ ಸುರಕ್ಷತೆಯನ್ನು ಹೆಚ್ಚಿಸಲು ವಿನಿಯೋಗಿಸಬಹುದು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. (ಏಜೆನ್ಸೀಸ್)
ಕಾಶ್ಮೀರ ಭಾರತದ್ದು- ನಿಖರ ಭೂಪಟವನ್ನೇ ಪ್ರಸಾರ ಮಾಡಿತು ಪಾಕಿಸ್ತಾನದ ಪಿಟಿವಿ ನ್ಯೂಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
