ನವದೆಹಲಿ:ಇದೊಂಥರ ಬೇಲಿಯೇ ಎದ್ದು ಹೊಲ ಮೇಯ್ದಂತಹ ಪ್ರಕರಣ. ಅಂದರೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸ್​ ಅಧಿಕಾರಿಯೇ ಲೈಂಗಿಕ ಶೋಷಣೆ ನೀಡಿದ ಆರೋಪಕ್ಕೆ ಒಳಗಾಗಿದ್ದಾರೆ. ಹಲವಾರು ಮಹಿಳೆಯರಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಎಸ್​ಐ ಒಬ್ಬರನ್ನು ಬಂಧಿಸಿದ್ದಾರೆ.
ದೆಹಲಿಯ ಸಬ್​ ಇನ್​ಸ್ಪೆಕ್ಟರ್ ಪುನೀತ್ ಗ್ರೆವಾಲ್ ಆರೋಪಿ. ದೆಹಲಿ ಸಂಚಾರ ಪೊಲೀಸ್​ ವಿಭಾಗದ ಸ್ಪೆಷಲ್​ ಸೆಲ್​ಗೆ ನಿಯೋಜಿತರಾಗಿದ್ದ ಈ ಸಬ್​ ಇನ್​​​ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳಿದ್ದು, ಈಗಾಗಲೇ ನಾಲ್ಕು ಪ್ರಕರಣಗಳೂ ದಾಖಲಾಗಿವೆ. ಹೀಗಾಗಿ ಪೋಕ್ಸೊ ಕಾಯ್ದೆಯಡಿ ಸೋಮವಾರ ಬಂಧಿಸಿರುವ ಪೊಲೀಸರು, ಅಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲೈಂಗಿಕ ಶೋಷಣೆ ಬಗ್ಗೆ ಅಕ್ಟೋಬರ್ 17ರಂದು ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದರಿಂದಾಗಿ ಸಬ್​ ಇನ್​ಸ್ಪೆಕ್ಟರ್ ಕೃತ್ಯ ಬೆಳಕಿಗೆ ಬಂದಿದೆ. ನಾನು ಸೈಕ್ಲಿಂಗ್​ ಹೋಗಿದ್ದಾಗ ಒಂದು ಗ್ರೇ ಕಲರ್ ಕಾರು ಪಾಸಾಗಿತ್ತು. ಅದರ ಹಿಂದಿನ ಗ್ಲಾಸ್ ಜಖಂ ಆಗಿತ್ತು. ನನ್ನನ್ನು ನೋಡಿ ಕಾರನ್ನು ನಿಧಾನವಾಗಿಸಿದ ಚಾಲಕ ನಂತರ ನನಗೆ ಸಮಾನಾಂತರವಾಗಿ ಕಾರನ್ನು ಚಲಾಯಿಸುತ್ತ ನನ್ನತ್ತ ಅಸಭ್ಯವಾಗಿ ನೋಡಿದ್ದಲ್ಲದೆ ಅವಾಚ್ಯ ಮಾತುಗಳನ್ನು ಹೇಳಿದ್ದ ಎಂಬುದಾಗಿ ಆಕೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ವಿಷಾದ ಕೋರಿದ ಡಿಸಿಪಿ ಸಂತೋಷ್​ ಕುಮಾರ್ ಮೀನ, ಕೇಸ್ ದಾಖಲಿಸಿಕೊಳ್ಳುವುದಾಗಿ ಹೇಳಿದ್ದರು. ಬಳಿಕ ಸಿಸಿಟಿವಿ ಕ್ಲಿಪ್ಪಿಂಗ್ ಆಧರಿಸಿ ಎಸ್​ಐಯನ್ನು ಬಂಧಿಸಲಾಗಿದೆ. ಅದೇ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸಬ್​ ಇನ್​ಸ್ಪೆಕ್ಟರ್​ ಕೃತ್ಯಗಳು ಬಯಲಾಗಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
