ಹೈದರಾಬಾದ್​​:ತೆಲಂಗಾಣ ಮತ್ತ ಆಂಧ್ರಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹದ ದುರಂತವನ್ನು ಎದುರಿಸುತ್ತಿರುವುದು ಗೊತ್ತೆ ಇದೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಪ್ರವಾಹದಲ್ಲಿ ಸಿಲುಕಿರುವ 9 ಮಂದಿಯನ್ನು ಜೆಸಿಬಿಯಿಂದ ವ್ಯಕ್ತಿಯೊಬ್ಬರು ರಕ್ಷಿಸಿರುವುದನ್ನು ಕಾಣಬಹುದಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಹರ್ಷದಿಂದ ರಕ್ಷಿಸಿದ ವ್ಯಕ್ತಿಯನ್ನು ಹೊಗಳುತ್ತಿದ್ದಾರೆ.
ಇದನ್ನು ಓದಿ:ಭವಿಷ್ಯದಲ್ಲಿ ಈ ರೀತಿ ಆಗದಂತೆ… ಸರ್ಕಾರಕ್ಕೆ ನೆಟ್​ಫ್ಲಿಕ್ಸ್​​ ಕಂಟೆಂಟ್​ ಹೆಡ್​​ ಹೇಳಿದ್ದಿಷ್ಟು
ಅಸಲಿಗೆ ವೆಂಕಟಗಿರಿ ಗ್ರಾಮದ ಒಂಬತ್ತು ಜನರು ಖಮ್ಮಂ ನಗರದ ಬಳಿಯ ಪ್ರಕಾಶ್ ನಗರ ಸೇತುವೆಯ ಮೇಲೆ ಪ್ರವಾಹದಲ್ಲಿ ಸಿಲುಕಿದ್ದಾರೆ. ಆ ಸಮಯದಲ್ಲಿ ಮುನ್ನೇರು ನದಿಯ ನೀರಿನ ಮಟ್ಟ ಏರಿಕೆಯಾಗಿ ವೇಗವಾಗಿ ಹರಿಯುತ್ತಿದ್ದರಿಂದ ಸಂತ್ರಸ್ತರು ಭಯಭೀತರಾಗಿದ್ದಾರೆ. ಬಳಿಕ ತಮ್ಮ ಜೀವ ಉಳಿಸುವಂತೆ ವಿಡಿಯೋ ಮಾಡುವ ಮೂಲಕ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಅವರ ರಕ್ಷಣೆಗಾಗಿ ಹೆಲಿಕಾಪ್ಟರ್ ಅನ್ನು ಕಳುಹಿಸಿದೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್​ ಅವರನ್ನು ರಕ್ಷಿಸಲು ಸಾಧ್ಯವಾಗದೆ ವಾಪಸ್​ ಆಗಿದೆ.
ಯಾರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದ ಸಮಯದಲ್ಲಿ ವಿಡಿಯೋ ನೋಡಿದ ಸುಭಾನ್ ಖಾನ್ ಎಂಬುವವರು ತಮ್ಮ ಜೆಸಿಬಿ ತೆಗೆದುಕೊಂಡು ಜನರ ಪ್ರಾಣವನ್ನು ಉಳಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯರು ಸುಭಾನ್​ ಖಾನ್​ ಅವರಿಗೆ ಪ್ರವಾಹ ಹೆಚ್ಚಾಗಿದೆ, ಅಲ್ಲೆಗೆ ಹೋಗದಂತೆ ಸೂಚಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಸಿದ ಸುಭಾನ್​​ ಹೋದರೆ ನಾನೂ ಒಬ್ಬ. ಬಂದರೆ 10 ಜನ ಬರುತ್ತೇವೆ ಎಂದು ಹೇಳಿ ಧೈರ್ಯದಿಂದ ಹೊರಟಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಒಂಬತ್ತು ಮಂದಿ ಜತೆಗೆ ಸುಭಾನ್​ ಖಾನ್​ ಅವರನ್ನು ಸೇರಿಸಿ 10 ಮಂದಿ ಜೀವಂತವಾಗಿ ಹಿಂತಿರುಗಿದ್ದಾರೆ. ಈ ವಿಷಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸುಭಾನ್​ ಖಾನ್​ ಅವರ ಧೈರ್ಯದ ಕೆಲವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.
If I go, it is one life, if I return, I will save nine lives: this was the courage shown by#Subhankhanwho took a JCB to bring back 9 people marooned on Prakash Nagar Bridge#Khammamfrom early hrs on Sept1; You can hear daughter brimming with pride#MyDaddyBravest#RealLifeHeropic.twitter.com/tbthGfUhRB
ಇತರರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವ ನಿಜ ಜೀವನದ ನಾಯಕನ ಧೈರ್ಯವನ್ನು ಜನ ಕೊಂಡಾಡಿದ್ದಾರೆ. ಈ ಕಾರ್ಯ ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ. ಪ್ರಮುಖ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಕೆಟಿಆರ್ ಎಂದು ಕರೆಯಲ್ಪಡುವ ಕೆಟಿ ರಾಮರಾವ್ ಅವರ ಕರೆ ಸೇರಿದಂತೆ ಪ್ರಶಂಸೆಯ ಸಂದೇಶಗಳಿಂದ ಸದ್ಯ ಸುಭಾನ್​ ಖಾನ್​ ಅವರು ಫೋನ್​ ತುಂಬಿದೆ.(ಎಜೆನ್ಸೀಸ್​​)
ಕಪಿಲ್​ನನ್ನು ಜಗತ್ತು ಶಪಿಸುತ್ತದೆ; ಆಲ್​ರೌಂಡರ್​​​​ ಯುವರಾಜ್​​ ಸಿಂಗ್​​ ತಂದೆ ಹೀಗೆಳಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + four =
Remember me
