ಬೆಂಗಳೂರು:ಚಿನ್ನ ಮತ್ತು ಬೆಳ್ಳಿ ಆಭರಣಗಳ ಪರಿಶುದ್ಧತೆ ಗುಣಮಟ್ಟ ದೃಢೀಕರಿಸಲು ರಾಜ್ಯದಲ್ಲಿ ಜೂ.16ರಿಂದ ಹಾಲ್​ಮಾರ್ಕ್​ ನಿಯಮ ಜಾರಿಗೆ ಬರಲಿದೆ. ಹೀಗಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಆಭರಣ ಮಳಿಗೆಗಳಿದ್ದು, ಶೇ.90 ಚಿನ್ನಾಭರಣ ತಯಾರಕರು ಹಾಗೂ ಮಾಲೀಕರು ಹಾಲ್​ಮಾರ್ಕ್​ ಪರವಾನಗಿ ಪಡೆದಿಲ್ಲ. ಈವರೆಗೆ ಶೇ.10 ಮಾಲೀಕರು ಮಾತ್ರವೇ ಹೊಂದಿದ್ದಾರೆ. ಉಳಿದವರು ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ, ಈಗಾಗಲೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರಾಮಾಚಾರಿ ತಿಳಿಸಿದ್ದಾರೆ. ಈ ಹಿಂದೆ ಕೆಲ ಮಾಲೀಕರು ಆಭರಣ ಖರೀದಿಸುವ ಸಂದರ್ಭದಲ್ಲಿ ಕಡಿಮೆ ಗುಣಮಟ್ಟ ಇರುವ ಚಿನ್ನವನ್ನು ಗ್ರಾಹಕರಿಗೆ ಪರಿಶುದ್ಧ ಚಿನ್ನವೆಂದು ನಂಬಿಸಿ ಮಾರಾಟ ಮಾಡುತ್ತಿದ್ದರು.
14,18 ಮತ್ತು 22 ಕ್ಯಾರಟ್​ ಬಂಗಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಬೇರೆ ಲೋಹದ ಮಿಶ್ರಿಣ ಮಾಡುತ್ತಿರುವ ಆರೋಪವಿತ್ತು. ಆ ಚಿನ್ನವನ್ನು ಖರೀದಿಸಿದ ನಂತರ ಮರು ಮಾರಾಟ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಹಾಲ್​ಮಾರ್ಕ್​ ನಿಯಮ ಜಾರಿಯಾದರೆ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
