ನವದೆಹಲಿ:ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅಧೀನ ಸಾಲ ನೀಡುವುದಕ್ಕೆ ನೂತನ ಯೋಜನೆಯೊಂದನ್ನು ತಯಾರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆಯಲ್ಲಿ ತಿಳಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಲ ಮರುರಚನೆ ಮಾಡಲು ಮಾರ್ಚ್​ 31, 2021ರ ತನಕ ಕಾಲಾವಕಾಶ ಮಾಡಬೇಕು ಎಂದು ಹಣಕಾಸು ಸಚಿವೆ ಆರ್​ಬಿಐಗೆ ನಿರ್ದೇಶನ ನೀಡಿದ್ದಾರೆ. ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಮರುರಚನೆ ಮಾಡಲು ಆರ್​ಬಿಐ ಅವಕಾಶ ಮಾಡಿಕೊಟ್ಟಿದ್ದು 2020ರ ಮಾರ್ಚ್​ 31ರ ತನಕ ಕಾಲಾವಕಾಶ ಕೊಟ್ಟಿತ್ತು. ಇದೀಗ ಅದರ ಕಾಲಾವಧಿಯನ್ನು ಒಂದು ವರ್ಷಗಳ ಕಾಲ ಹೆಚ್ಚಳ ಮಾಡಲಾಗಿದೆ.
ಎಮ್​ಎಸ್​ಎಮ್​ಇಗಳಿಗೆ ಬ್ಯಾಂಕಿಂಗ್​ ರಹಿತ ಹಣಕಾಸು ಕಂಪನಿಗಳು (ಎನ್​ಬಿಎಫ್​ಸಿ) ನೀಡುವ ಇನ್ವಾಯ್ಸ್​ ಹಣಕಾಸನ್ನು ವಿಸ್ತರಿಸುವ ಸಲುವಾಗಿ ಫ್ಯಾಕ್ಟರ್​ ರೆಗ್ಯುಲೇಷನ್​ ಆ್ಯಕ್ಟ್​ 2011ಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು. ಈ ಮೂಲಕ ಆರ್ಥಿಕ ಸುಸ್ಥಿರತೆಯನ್ನು ಹೆಚ್ಚಿಸಲಾಗುವುದು.
ಎಮ್​ಎಸ್​ಎಮ್​ಇಗಳಲ್ಲಿ ಕಾರ್ಯವಾಹಿ ಬಂಡವಾಳ ಅತಿ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಅವುಗಳಿಗೆ ಅಧೀನ ಸಾಲವನ್ನು ಒದಗಿಸುವ ಯೋಜನೆಯನ್ನು ಪರಿಚಯಿಸಲಾಗುವುದು. ಉದ್ಯಮಿಗಳಿಗೆ ನೀಡಲಾಗುವ ಈ ಸಾಲವನ್ನು ಅರೆ ಷೇರು ಎಂದು ಪರಿಗಣಿಸಲಾಗುವುದು ಮತ್ತು ಕ್ರೆಡಿಟ್​ ಗ್ಯಾರಂಟಿ ಟ್ರಸ್ಟ್​ಗಳಿಂದ ಗ್ಯಾರಂಟಿ ನೀಡಲಾಗುವುದು.
ಎಮ್​ಎಸ್​ಎಮ್​ಇ ಉದ್ಯಮಿಗಳಲ್ಲಿ ವಿಳಂಬಿತ ಸಾಲದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅಪ್ಲಿಕೇಶನ್​ ಆಧಾರಿತ ಇನ್ವಾಯ್ಸ್​ ಸಾಲವನ್ನು ನೀಡುವುದಾಗಿ ಹಣಕಾಸು ಸಚಿವೆ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
