ನವದೆಹಲಿ:ಕಾಂಗ್ರೆಸ್​ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​​ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಶುಕ್ರವಾರ(ಆಗಸ್ಟ್​​ 16) ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಓದಿ:ಪ್ರಧಾನಿ ಮೋದಿ ಜತೆ ಮುಹಮ್ಮದ್ ಯೂನಸ್​ ಮಾತುಕತೆ; ಉಭಯ ನಾಯಕರ ಚರ್ಚೆ ಕುರಿತು ಪಿಎಂಒ ಕಚೇರಿ ಹೇಳಿದಿಷ್ಟು
ಸುಬ್ರಮಣಿಯನ್​ ಸ್ವಾಮಿ ಅವರು 2019ರಲ್ಲಿ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಅದರಲ್ಲಿ ಬ್ಯಾಕ್​ಆಪ್ಸ್​​ ಲಿಮಿಟೆಡ್​ ಹೆಸರಿನ ಸಂಸ್ಥೆಯನ್ನು 2003ರಲ್ಲಿ ಬ್ರಿಟನ್​​ನಲ್ಲಿ ನೋಂದಾಯಿಸಲಾಗಿದ್ದು, ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಅವರು ಅದರ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ.
ಸಂಸ್ಥೆಯು 2005 ಅಕ್ಟೋಬರ್​ 10 ಮತ್ತು 2006 ಅಕ್ಟೋಬರ್​ 31ರಂದು ಸಲ್ಲಿಸಿದ ವಾರ್ಷಿಕ ರಿಟರ್ನ್ಸ್​​​ನಲ್ಲಿ ರಾಹುಲ್​ ಗಾಂಧಿ ಅವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. 2009 ಫೆಬ್ರವರಿ 17ರಂದು ಬ್ಯಾಕ್​ಆಪ್ಸ್​​​​ ಲಿಮಿಟೆಡ್​ ಕಂಪನಿಯ ವಿಸರ್ಜನೆಯ ಅರ್ಜಿಯಲ್ಲಿಯೂ ಮತ್ತೆ ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. ಇದು ಭಾರತದ ಸಂವಿಧಾನದ 9ನೇ ವಿಧಿ ಮತ್ತು ಭಾರತೀಯ ಪೌರತ್ವ ಕಾಯಿದೆ, 1955 ಅನ್ನು ಉಲ್ಲಂಘಿಸಿದೆ ಎಂದು ಸುಬ್ರಮಣಿಯನ್​ ಸ್ವಾಮಿ ಆರೋಪಿಸಿರುವುದಾಗಿ ಬಾರ್​ ಆ್ಯಂಡ್​ ಬೆಂಚ್​​ ವರದಿ ಮಾಡಿದೆ.
2019 ಏಪ್ರಿಲ್​​ 29ರಂದು ಗೃಹ ಸಚಿವಾಲಯವು ರಾಹುಲ್​ಗಾಂಧಿಗೆ ಪತ್ರ ಬರೆದು, ಈ ವಿಷಯದ ಕುರಿತು ಹದಿನೈದು ದಿನದೊಳಗೆ ವಾಸ್ತವಿಕ ನಿಲುವನ್ನು ಮುಂದಿಡುವಂತೆ ಕೇಳಿದೆ. ಆದರೆ ಪತ್ರ ಬರೆದು ಐದು ವರ್ಷಗಳು ಕಳೆದರೂ ರಾಹುಲ್​ ಗಾಂಧಿ ಈ ಬಗ್ಗೆ ಗೃಹ ಸಚಿವಾಲಯಕ್ಕೆ ಯಾವುದೆ ಸ್ಪಷ್ಟನೆ ನೀಡಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಮುಂದಿನ ವಾರ ನಡೆಯಲಿದೆ. (ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
