ನವದೆಹಲಿ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್​​ ಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ನಟನ ಸಾವಿನಲ್ಲಿ ದುಬೈನಲ್ಲಿರುವ ಅಕ್ರಮ ಹಣ ಸಾಗಣೆದಾರರು ಹಾಗೂ ವೃತ್ತಿಪರ ಕಿಲ್ಲರ್​ಗಳ ಪಾತ್ರವನ್ನು ತಳ್ಳಿಹಾಕಲಾಗದು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ;ಮಸೀದಿಗಳನ್ನು ಒಡೆದು ಅದೇ ಜಾಗದಲ್ಲಿ ಶೌಚಗೃಹ, ಮದ್ಯದಂಗಡಿ ನಿಮಿರ್ಸಿದ ಚೀನಾ ಸರ್ಕಾರ….!
ಸಾವಿನ ತನಿಖೆಯಲ್ಲಿ ಅನೇಕ ಅಪಹಾಸ್ಯಕರ ಸಂಗತಿಗಳು ನಡೆದಿವೆ. ತನಿಖೆ ಸಮಗ್ರವಾಗಿ ನಡೆಯುತ್ತಿಲ್ಲ ಎಂದು ಸುಬ್ರಹ್ಮಣಿಯನ್​ ಸ್ವಾಮಿ ಟೀಕಿಸಿದ್ದಾರೆ. ಪ್ರಕರಣವನ್ನು ಸಿಬಿಐ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್​ ಆದೇಶ ನೀಡಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಆಗಸ್ಟ್​ 16ರಂದು ಟ್ವಿಟ್​ ಮಾಡಿದದ ಸುಬ್ರಹ್ಮಣಿಯನ್​ ಸ್ವಾಮಿ ಸುಶಾಂತ್​ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದಿದ್ದರು. ಜತೆಗೆ, ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
ಇದನ್ನೂ ಓದಿ;ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಮಗನನ್ನು 105 ಕಿ.ಮೀ. ದೂರದ ಕೇಂದ್ರಕ್ಕೆ ಸೈಕಲ್​ನಲ್ಲಿ ಕರೆತಂದ ತಂದೆ..!
ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಎನ್​.ಕೆ. ಸೂದ್​ ಕೂಡ ಪ್ರಕರಣದಲ್ಲಿ ಭೂಗತ ಲೋಕದ ನಂಟು ಹೊಂದಿರಬಹುದಾದ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಭೂಗತ ಲೋಕದ ಕ್ರಿಮಿನಲ್​ಗಳು ಅತ್ಯಂತ ವ್ಯವಸ್ಥಿತವಾಗಿ ಅಪರಾಧಿಕ ಕೃತ್ಯವನ್ನು ಮುಗಿಸುತ್ತಾರೆ ಹಾಗೂ ತಮ್ಮ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು ಯಶಸ್ವಿಯಾಗುತ್ತಾರೆ ಎಂದು ಹೇಳಿದ್ದಾರೆ.
ಅನುಕಂಪ ಆಧಾರದ ಸರ್ಕಾರಿ ಕೆಲಸ; ಗಳಿಸಿದ್ದು ಕೆಜಿಗಟ್ಟಲೇ ಚಿನ್ನ, ಬೆಳ್ಳಿ; ಕೋಟ್ಯಂತರ ಮೌಲ್ಯದ ಸ್ವತ್ತು ವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
