ನವದೆಹಲಿ:ವಿಶ್ವ ಸಂಸ್ಥೆಯಲ್ಲಿ ವಿಶೇಷ ಸಲಹೆಗಾರರಾಗಿರುವ ಅದಾಮಾ ಡಿಂಗ್​ ವಿರುದ್ಧ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಸಮರಕ್ಕೆ ನಿಂತಿದ್ದಾರೆ. ನಾನು ನೀಡದ ಹೇಳಿಕೆಯನ್ನು ನನಗೆ ಆರೋಪಿಸಿರುವ ಅದಾಮಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನು ಸಮರ ನಡೆಸುವುದಾಗಿ ಸ್ವಾಮಿ ಘೋಷಿಸಿದ್ದಾರೆ.
ಸುಬ್ರಮಣಿಯನ್​ ಸ್ವಾಮಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದು, ಈ ಹೋರಾಟದಲ್ಲಿ ಪಕ್ಷವೂ ಅವರಿಗೆ ಬೆಂಬಲ ನೀಡಿದೆ. ಇದಕ್ಕಾಗಿ ಸ್ವಾಮಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜತೆಗೆ ಇದಕ್ಕೆ ಅವಕಾಶ ಕಲ್ಪಿಸಿದ ವಿದೇಶಾಂಗ ಇಲಾಖೆಗೂ ಅವರು ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ;ಅಕ್ರಮ ನುಸುಳುವಿಕೆಯಲ್ಲಿ ಪಾಕಿಸ್ತಾನವನ್ನು ಮೀರಿಸುತ್ತಿರುವ ಚೀನಾ? ಗಡಿಯಲ್ಲಿ ಸೇನೆ ಜಮಾವಣೆ
ಇಷ್ಟಕ್ಕೂ ಆಗಿದ್ದೇನೆಂದರೆ, ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾವ ಹರಡುವ ಹೇಳಿಕೆಗಳು ಹಾಗೂ ತಾರತಮ್ಯ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಂಗೀಕರಿಸಿದ ಬಳಿಕ ಈ ಪ್ರವೃತ್ತಿಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅದಾಮಾ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯರಾಗಿರುವ ಸುಬ್ರಮಣಿಯನ್​ ಸ್ವಾಮಿ ಹೇಳಿದ್ದರೆನ್ನಲಾದ ಹೇಳಿಕೆಯೊಂದನ್ನು ಪ್ರಸ್ತಾಪಿಸಿ ಅದಾಮಾ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.
ಪಾಕಿಸ್ತಾನದ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ಮುಸ್ಲಿಮರು ಹಿಂದುಗಳಿಗೆ ಸಮಾನರಲ್ಲ ಎಂದು ಹೇಳಿದ್ದಾಗಿ ಅದಾಮಾ ಟೀಕಿಸಿದ್ದರು.
ಇದನ್ನೂ ಓದಿ;ಕರೊನಾ ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಗಮನ ಸೆಳೆದ ಥಾಯ್ಲೆಂಡ್​
ಪಾಕ್​ ವಾಹಿನಿಯ ಕೃತ್ರಿಮ ಸಂದರ್ಶನ ಆಧರಿಸಿ ತನ್ನ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ಅದಾಮಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸ್ವಾಮಿ ನಿರ್ಧರಿಸಿದ್ದರು. ಇದನ್ನು ವಿದೇಶಾಂಗ ಇಲಾಖೆ ಗಮನಕ್ಕೂ ತಂದಿದ್ದರು. ಇದೀಗ ಅದಾಮಾಗೆ ನೋಟಿಸ್​ ಕಳುಹಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ ಸುಬ್ರಮಣಿಯನ್​ ಸ್ವಾಮಿ.
My letter to FS MEA stating that I intend to prosecute for defamation the UN Under Secretary General Mr. Adama Dien for relying on a Pakistani owned TV's cut and paste interview, to allege that I said Muslims don't have equal rights with Hindus in India.
— Subramanian Swamy (@Swamy39)May 21, 2020

ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
