ನವದೆಹಲಿ:ಹತ್ತು ಸಾವಿರ ರೂಪಾಯಿ ಬಂಡವಾಳ ಹೂಡಿ, 4ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿ, ಪದ್ಮಶ್ರೀ ಗೆದ್ದ ಮಹಿಳೆಯ ಸಾಹಸ ಗಾಥೆಯಿದು. ಅವರು ನಮ್ಮ ಮೈಸೂರಿನಲ್ಲಿ ಮೊದಲು ಸಂಸ್ಥೆ ಸ್ಥಾಪಿಸಿ ಈ ಹಂತಕ್ಕೆ ಬೆಳೆದಿದ್ದಾರೆ ಎಂಬುದು ಕರ್ನಾಟಕದ ಮಟ್ಟಿಗೆ ಹೆಮ್ಮೆ ಪಡುವ ಸಂಗತಿಯಾಗಿದೆ.
ಇದನ್ನೂ ಓದಿ:‘ಕೆಲವರು ಟೀಕಿಸುತ್ತಲೇ ಇರ್ತಾರೆ, ತಲೆ ಕೆಡಿಸಿಕೊಳ್ಳಬೇಡಿ’: ಪುತ್ರಿ, ಅಳಿಯಗೆ ಸುಧಾ ಮೂರ್ತಿ ಸಲಹೆ
ದಶಕದ ಪರಿಶ್ರಮದ ನಂತರ ಶಶಿ ಸೋನಿ ಯಶಸ್ಸಿನ ಸಿಹಿ ಸವಿದಿದ್ದಾರೆ. 1971 ರಲ್ಲಿ ತನ್ನ ಮೊದಲ ವ್ಯವಹಾರವನ್ನು ಪ್ರಾರಂಭಿಸಿದರು, 10ಸಾವಿರ ರೂ.ಗಳ ಸಾಧಾರಣ ಬಂಡವಾಳದೊಂದಿಗೆ ಮೈಸೂರಿನಲ್ಲಿ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ ಎಂಬ ಗ್ಯಾಸ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು, ಇದು ಅವರ ಅದೃಷ್ಟದಲ್ಲಿ ಮಹತ್ವದ ತಿರುವು ನೀಡಿತು. ಕ್ರಮೇಣ ತನ್ನ ವ್ಯಾಪಾರವನ್ನು ವಿಸ್ತರಿಸುತ್ತಾ ತಾಂತ್ರಿಕ ಕ್ಷೇತ್ರಕ್ಕೂ ಕಾಲಿಟ್ಟರು.
1975 ರ ಹೊತ್ತಿಗೆ ಅವರು ಸಿನೆಮಾ ಜಗತ್ತಿನಲ್ಲಿ ತೊಡಗಿಸಿಕೊಳ್ಳುವವರೆಗೂ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು, 1975 ರಲ್ಲಿ ಮುಂಬೈನ ಮುಲುಂಡ್ ಪ್ರದೇಶದಲ್ಲಿ ಡೀಪ್ ಮಂದಿರ್ ಸಿನೆಮಾ ಟಾಕೀಸ್​ ಪ್ರಾರಂಭಿಸಿದರು. ಇದು 1980 ರವರೆಗೆ ಇತ್ತು. 2005 ರಲ್ಲಿ ಶಶಿ ಇಜ್ಮೋ ಲಿಮಿಟೆಡ್ ಎಂಬ ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಿದದ್ದು, ಇದು ಈಗಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ.
ಮೈಸೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಕಂಪನಿಯು ಜಾಗತಿಕವಾಗಿ ಹೈಟೆಕ್ ಆಟೋಮೋಟಿವ್ ಮತ್ತು ಇ-ರೀಟೇಲಿಂಗ್ ಪರಿಹಾರಗಳನ್ನು ಒದಗಿಸುತ್ತದೆ. ಬಿಎಸ್‌ಇ ಮತ್ತು ಎನ್‌ಎಸ್‌ಇ ಎರಡರಲ್ಲೂ ಪಟ್ಟಿ ಮಾಡಿರುವ ಶಶಿ ಅವರು ಕಂಪನಿಯ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ
ತನ್ನ ಯಶಸ್ವಿ ವ್ಯವಹಾರವನ್ನು ಹೊರತುಪಡಿಸಿ ಶಶಿ ಅವರು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾಳೆ. ಅವರು ಡೀಪ್ ಜನಸೇವಾ ಸಮಿತಿಯ ಸದಸ್ಯರಾಗಿದ್ದು, ಉದ್ಯೋಗ ನಿಯೋಜನೆಗಳು, ಮಹಿಳೆಯರಿಗೆ ಶಿಕ್ಷಣ, ಪಿಂಚಣಿ ಯೋಜನೆಗಳನ್ನು ಪ್ರಾರಂಭಿಸುವುದು ಮತ್ತು ವಿಕಲಾಂಗ ವ್ಯಕ್ತಿಗಳಿಗೆ ನಿಧಿಯನ್ನು ಸಂಗ್ರಹಿಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ.
ಪ್ರತಿಷ್ಠಿತ ಪದ್ಮ ಪ್ರಶಸ್ತಿ ಬರುವುದಕ್ಕೂ ಮೊದಲು ಶಶಿ ಸೋನಿ ವ್ಯಾಪಾರ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಅಪಾರ ಮನ್ನಣೆ ಗಳಿಸಿದ್ದರು. 1990 ರಲ್ಲಿ ಅವರು ಭಾರತೀಯ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ವರ್ಷದ ಮಹಿಳೆ ಪ್ರಶಸ್ತಿಯನ್ನು ಪಡೆದರು. ಇನ್ನು ಅವರು ಆಲ್ ಇಂಡಿಯನ್ ಇಂಡಸ್ಟ್ರಿಯಲ್ ಗ್ಯಾಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್‌ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ತಾಂತ್ರಿಕ ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಸ್ಥಾನವನ್ನು ಸಹ ಹೊಂದಿದ್ದರು.
ಕಠಿಣ ಶ್ರಮ ಮತ್ತು ಶ್ರದ್ಧೆ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಶಶಿ ಉತ್ತಮ ಉದಾಹರಣೆ. ಕೇವಲ 10 ಸಾವಿರ ಆರಂಭಿಕ ಹೂಡಿಕೆಯೊಂದಿಗೆ ವ್ಯಾಪಾರ ಸಾಮ್ರಾಜ್ಯದ ಅಡಿಪಾಯ ಹಾಕಿದ ಈ ದಿಟ್ಟ ಮಹಿಳೆ ಪ್ರಸ್ತುತ 4ಸಾವಿರ ಕೋಟಿಗಿಂತ ಹೆಚ್ಚು ಮೌಲ್ಯದ ಕಂಪನಿಯನ್ನು ಹೊಂದಿದ್ದಾರೆ. ಇದು ಆಶ್ಚರ್ಯಕರ ಸಂಗತಿಯಾರೂ ನಂಬಲೇ ಬೇಕಾದ ಯಶೋಗಾಥೆಯಾಗಿದೆ. ಗಣರಾಜ್ಯೋತ್ಸವದ ಮುನ್ನ ಈ ವರ್ಷ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಉದ್ಯಮ ಜಗತ್ತಿನ ನಾಲ್ವರು ಮಹಿಳೆಯರಲ್ಲಿ ಅವರು ಕೂಡ ಒಬ್ಬರು.
ಶಿಷ್ಯನನ್ನು ಬೂಟ್​ನಿಂದ ಹೊಡೆದ ಸಿಂಗರ್​..ಬಳಿಕ ನಡೆದಿದ್ದೇನು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + nineteen =
Remember me
