ಭಾರತದ ಅತಿದೊಡ್ಡ ವಾಣಿಜ್ಯೋದ್ಯಮ ಸಾಮ್ರಾಜ್ಯ ರಿಲಯನ್ಸ್ ಇಂಡಸ್ಟ್ರೀಸ್. ಇದರ ಉತ್ತರಾಧಿಕಾರ ಯೋಜನೆಯ ಕುರಿತು ಮುಖ್ಯಸ್ಥ ಮುಕೇಶ್ ಅಂಬಾನಿ ಮಹತ್ವಾಕಾಂಕ್ಷೆಯ ಚಿಂತನೆ ಹೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕಳೆದ ಜೂನ್ ತಿಂಗಳಲ್ಲಿ ನಡೆದ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಅವರು ಈ ಕುರಿತು ಸುಳಿವು ನೀಡಿದ್ದರು. ‘ರಿಲಯನ್ಸ್ ಅನ್ನು ಮುನ್ನಡೆಸಲು ಮುಂದಿನ ತಲೆಮಾರಿನ ನಾಯಕರಾದ ಇಶಾ, ಆಕಾಶ್ ಮತ್ತು ಅನಂತ್ ಸಿದ್ಧರಾಗಿದ್ದಾರೆ. ಅವರು ಈ ಅಮೂಲ್ಯ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ’ ಎಂದಿದ್ದರು.
ಉತ್ತರಾಧಿಕಾರದ ಯೋಜನೆ ರೂಪಿಸುವುದ ಕ್ಕಾಗಿ ಮುಕೇಶ್ ಅಂಬಾನಿ, ಜಗತ್ತಿನ ಶತಕೋಟ್ಯ ಧಿಪತಿಗಳ ಉದ್ಯಮ ಸಾಮ್ರಾಜ್ಯಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಈ ಪೈಕಿ ವಾಲ್​ವಾರ್ಟ್ ಸೃಷ್ಟಿಕರ್ತ ಸ್ಯಾಮ್ ವಾಲ್ಟನ್ ಅವರ ಉತ್ತರಾಧಿಕಾರ ಯೋಜನೆ ಕುರಿತು ಮುಕೇಶ್ ಒಲವು ವ್ಯಕ್ತವಾಗಿದೆ. ಇದು ಬಹಳ ಸರಳವಾಗಿದ್ದು, ಕುಟುಂಬವನ್ನು ವ್ಯವಸ್ಥೆಯ ಕೇಂದ್ರಸ್ಥಾನದಲ್ಲಿಟ್ಟು ಎಲ್ಲವೂ ನಿಯಂತ್ರಣ ದಲ್ಲಿರುವಂತೆ ನೋಡಿಕೊಳ್ಳುತ್ತದೆ; ದೈನಂದಿನ ಆಡಳಿತ ನೋಡಿಕೊಳ್ಳಲು ವೃತ್ತಿಪರರರನ್ನು ನೇಮಿಸಲಾಗುತ್ತದೆ ಎಂದು ಅವರ ಆಪ್ತಮೂಲಗಳು ಹೇಳಿಕೊಂಡಿವೆ.
ಕುಟುಂಬದೊಳಗಿನ ವ್ಯಾಜ್ಯ:ಧೀರೂಭಾಯ್ ಅಂಬಾನಿ 2002ರಲ್ಲಿ ನಿಧನರಾದ ಬಳಿಕ ಸಾಮ್ರಾಜ್ಯಕ್ಕಾಗಿ ಉಂಟಾದ ಕುಟುಂಬ ಕಲಹದ ಕಹಿನೆನಪು ಮುಕೇಶ್ ಅವರಲ್ಲಿ ಉಳಿದಿದೆ. ಇಂತಹ ಕಲಹ ಮುಂದುವರಿಯಬಾರದು ಎಂಬುದೇ ಉತ್ತರಾಧಿಕಾರ ಯೋಜನೆಗೆ ಪ್ರೇರಣೆ.
ವಾಲ್ಟನ್ ಕುಟುಂಬದ ಯೋಜನೆ:ಜಗತ್ತಿನ ಅತಿದೊಡ್ಡ ಉದ್ಯಮ ವಾಲ್​ವಾರ್ಟ್ ಸ್ಥಾಪಿಸಿದ ಸ್ಯಾಮ್ ವಾಲ್ಟನ್ ತಮ್ಮ ನಿಧನಕ್ಕೆ ಮುಂಚಿತವಾಗಿ ನಾಲ್ವರು ಮಕ್ಕಳಾದ ಅಲೈಸ್, ರಾಬ್, ಜಿಮ್ ಮತ್ತು ಜಾನ್​ಗೆ ಶೇಕಡ 80ರಷ್ಟು ಹಸ್ತಾಂತರಿಸಿದ್ದರು. ವಾಲ್​ವಾರ್ಟ್​ನ ಶೇಕಡ 47 ಸಂಪತ್ತು ವಾಲ್​ವಾರ್ಟ್ ಟ್ರಸ್ಟ್ ಮತ್ತು ವಾಲ್ಟನ್ ಎಂಟರ್​ಪ್ರೖೆಸಸ್ ಎಲ್​ಎಲ್​ಸಿ ಮೂಲಕ ಕುಟುಂಬದ ಹಿಡಿತದಲ್ಲೇ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
