ಮುಂಬೈ:ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿ ಪಾರ್ಟಿಗೆ ಹೋದಾಗ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ಕಹಿ ಅನುಭವವಾಗಿದೆ. ತನ್ನ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
90ರ ದಶಕದಲ್ಲಿ ಮಿಂಚಿದ ನಟಿ ಇವರು. 1994ರಲ್ಲಿ ಬಿಡುಗಡೆಯಾದ ‘ಕಭಿ ಹಾನ್ ಕಭಿ ನಾ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಸುಚಿತ್ರಾ ಕೃಷ್ಣಮೂರ್ತಿ ನಟಿಸಿದರು. ಈ ಚಿತ್ರ ಅವರಿಗೆ ಜನಪ್ರಿಯತೆ ನೀಡಿತ್ತು. ಬಳಿಕ ನಟನೆ ಜೊತೆ ಗಾಯಕಿಯೂ ಗುರುತಿಸಿಕೊಂಡಿದ್ದಾರೆ.
ಬರ್ಲಿನ್‌ನಲ್ಲಿ ದೇಹದ ಸಕಾರಾತ್ಮಕತೆ, ನೇಕೆಡ್ ಪಾರ್ಟಿಗೆ ಬಂದಿದ್ದೇನೆ. ನಾನು ಯಾವಾಗಲೂ ದೇಸಿ ಹುಡುಗಿ. ಆ ಪಾರ್ಟಿಗೆ ಹೋದ ನಂತರ ಸ್ನಾನ ಮಾಡಿ ಗಾಯತ್ರಿ ಮಂತ್ರವನ್ನು ಪಠಿಸಬೇಕೆಂದು ಅನಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.ಶಾರುಖ್ ಸಹ ನಟಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ದಯವಿಟ್ಟು ಹುಷಾರಾಗಿರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಬಗ್ಗೆ ಬಾಲಿವುಡ್ ಹಂಗಾಮಾ ಜೊತೆ ಮಾತನಾಡಿರುವ ನಟಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕಾಮನ್ ಫ್ರೆಂಡ್ ಮೂಲಕ ಬೆತ್ತಲೆ ಪಾರ್ಟಿ ಹೋಗಿದ್ದೆ. ಇಲ್ಲಿಗೆ ತಲುಪಲು ಕೆಲ ಸರ್ಕಸ್ ಕೂಡ ಮಾಡಿದ್ದೆ. ಅಲ್ಲಿನ ಜನ ದೇಹದ ಧನಾತ್ಮಕತೆಯನ್ನು ಉತ್ತೇಜಿಸಲು ಮತ್ತು ದೇಹದ ಆತಂಕವನ್ನು ತೊಡೆದುಹಾಕಲು ನಗ್ನ ಪಾರ್ಟಿ ಮಾಡ್ತಾರೆ. ತಾನು ದೇಸಿ ಹುಡುಗಿ, ಪಾರ್ಟಿ ಒಳ ಹೊಕ್ಕಾಗ ನನಗೆ ಅಷ್ಟೇ ವೇಗದಲ್ಲಿ ವಾಪಸ್ ಬರುವ ಮನಸ್ಸಾಗಿದೆ. ನನಗೆ ಇತರರ ಖಾಸಗಿ ಅಂಗ ನೋಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × four =
Remember me
