ಬೆಂಗಳೂರು:ಕೇರಳದಲ್ಲಿ ಸಂಭವಿಸಿದ ಗರ್ಭಿಣಿ ಆನೆಯ ಧಾರುಣ ಸಾವು, ಕರುಳು ಹಿಂಡುವ ಸನ್ನಿವೇಶವನ್ನು ಮರಳು ಕಲಾವಿದರೊಬ್ಬರು ಒಡಿಶಾದ ಪುರಿ ಕಡಲತೀರದಲ್ಲಿ ಮರಳು ಕಲೆ ಮೂಲಕ ಕಟ್ಟಿಕೊಟ್ಟಿದ್ದು, ಈ ದೃಶ್ಯ ಮನುಕುಲದ ಮಾನವೀಯತೆಯನ್ನೇ ಪ್ರಶ್ನಿಸಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ಗರ್ಭಿಣಿ ಆನೆ ಮತ್ತು ತಾಯಿಗರ್ಭದಿಂದ ಹೊರಬರುವ ಮುನ್ನವೇ ಮೃತಪಟ್ಟ ಆನೆಮರಿಗೆ ಶೋಕ ವ್ಯಕ್ತಪಡಿಸಿರುವ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್, ಆನೆ ತನ್ನ ಮಗುವಿನೊಂದಿಗೆ ನೆಲದ ಮೇಲೆ ಮಲಗಿರುವಂತೆ ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ತಾಯಿಆನೆ ಮತ್ತು ಮರಿಯಾನೆ ಚಿರನಿದ್ರೆಗೆ ಜಾರಿದಂತಿದೆ.
ಇದನ್ನೂ ಓದಿರಿನಾವು ಮನುಷ್ಯರಾಗೋದು ಯಾವಾಗ? ಗರ್ಭಿಣಿ ಆನೆ ಸಾವಿಗೆ ಸ್ಯಾಂಡಲ್​ವುಡ್​ ಸಂತಾಪ
ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್​ ಮಾಡಿರುವ ಸುದರ್ಶನ್ ಪಟ್ನಾಯಕ್, “ಮಾನವೀಯತೆ ಮತ್ತೆ ವಿಫಲವಾಗಿದೆ. ಆನೆಯನ್ನು ರಕ್ಷಿಸಿ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಚಿತ್ರವನ್ನು ಸಾವಿರಾರು ಮಂದಿ ಶೇರ್​ ಮಾಡಿಕೊಂಡಿದ್ದು, ಗರ್ಭಿಣಿ ಆನೆ ಸಾವಿಗೆ ಲಕ್ಷಾಂತರ ಜನರು ಸಂತಾಪ ಸೂಚಿಸಿದ್ದಾರೆ. ಇದೇ ಚಿತ್ರವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಾಕಿಕೊಂಡಿರುವ ಐಎಫ್ಎಸ್ ಅಧಿಕಾರಿ ಸುಸಂತ ನಂದ ಅವರು ‘ನಾವು ಮಾನವರಾಗಿ ಮತ್ತು ಭೂಮಂಡಲದ ಪಾಲಕರಾಗಿ ಸೋತಿದ್ದೇವೆ” ಎಂದು ಬರೆದು ಕೊಂಡಿದ್ದಾರೆ. ಈ ಚಿತ್ರ ವೈರಲ್​ ಆಗಿದ್ದು, ಆನೆ ಸಾವಿಗೆ ನ್ಯಾಯ ಸಿಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಇದನ್ನೂ ಓದಿರಿಮಾನವೀಯತೆ ಮರೆತು ಗರ್ಭಿಣಿ ಆನೆ ಕೊಂದ ದುಷ್ಟರಿಗೆ ಮುಂದೆ ಕಾದಿದೆ ಮಾರಿಹಬ್ಬ
ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್​ ವ್ಯಾಲಿಯಲ್ಲಿ ಆಹಾರ ಹುಡುಕುತ್ತ ಗ್ರಾಮವೊಂದರ ಸಮೀಪ ಬಂದಿದ್ದ ಹೆಣ್ಣಾನೆಗೆ ಕೆಲ ಕಿಡಿಗೇಡಿಗಳು ಪೈನಾಪಲ್​(ಅನಾನಸ್​) ನಲ್ಲಿ ಪಟಾಕಿ ಇಟ್ಟು ತಿನ್ನಲು ಕೊಟ್ಟಿದ್ದರು. ಇದನ್ನು ತಿನ್ನುತ್ತಿದ್ದಂತೆ ಸ್ಫೋಟಗೊಂಡು ಆನೆಯ ಸೊಂಡಿಲು-ಬಾಯಿಗೆ ತೀವ್ರ ಗಾಯವಾಗಿತ್ತು. ಸುಟ್ಟಗಾಯದ ನೋವು ಸಹಿಸಲಾರದೆ ನದಿ ನೀರೊಳಗೆ ಹೋದ ಗರ್ಭಿಣಿ ಆನೆ ನಿಂತಲ್ಲೇ ಪ್ರಾಣಬಿಟ್ಟಿತ್ತು. ಕೆಲವೇ ತಿಂಗಳಲ್ಲಿ ಭೂಮಿ ಮೇಲೆ ಕಣ್ಣು ಬಿಡಬೇಕಿದ್ದ ಆನೆಭ್ರೂಣವೂ ತಾಯಿ ಗರ್ಭದಲ್ಲೇ ಸತ್ತಿದೆ.
ಈ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ ಕೇಳಿಬಂದಿದೆ. ಈ ನಡುವೆ ಮರಳು ಕಲಾವಿದ ಸುದರ್ಶನ್ ಅವರ ಚಿತ್ರವು ಮನುಕುಲದ ಮನಸ್ಥಿತಿ ಎತ್ತ ಸಾಗಿದೆ, ಮಾನವೀಯತೆ ಎಲ್ಲಿದೆ… ಎಂಬೆಲ್ಲ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.
ಇದನ್ನೂ ಓದಿರಿಗರ್ಭಿಣಿ ಆನೆ ಸಾವು : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೇಂದ್ರ ಭರವಸೆ
Humanity has failed again………..One of my SandArt on save#Elephant.pic.twitter.com/nzcM4PNDvr
— Sudarsan Pattnaik (@sudarsansand)June 3, 2020

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + seven =
Remember me
