ಹೈದರಾಬಾದ್​:ಗಂಡನ ಸಾವಿನ ನೋವಿನಿಂದ ಹೊರಬರಲಾಗದೇ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್​ನ ಅಂಬರಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಸಾಹಿತಿ (29) ಮೃತ ಮಹಿಳೆ. ಈಕೆ ಅಂಬರಪೇಟೆಯ ಡಿಡಿ ಕಾಲನಿ ನಿವಾಸಿ. ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್​ವೇರ್​ ಇಂಜಿನಿಯರ್​ ಮನೋಜ್​ (31) ಎಂಬುವರನ್ನು ಮದುವೆ ಆಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್​ನಲ್ಲಿ ನೆಲೆಸಿದ್ದರು.
ಈ ತಿಂಗಳ 2ರಂದು ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಅಮೆರಿಕದಿಂದ ಮರಳಿದ್ದಳು. ಆದರೆ, ಮನೋಜ್​ ಮಾತ್ರ ಅಮೆರಿಕದಲ್ಲೇ ಉಳಿದಿದ್ದ. ಇದೇ ತಿಂಗಳು 20ರಂದು ಮನೋಜ್​ ಹೃದಯಾಘಾತದಿಂದ ಮೃತಪಟ್ಟರು. ಮೇ 23ರಂದು ಆತನ ಮೃತದೇಹವನ್ನು ಅಮೆರಿಕದಿಂದ ವನಸ್ಥಳಿಪುರಂಗೆ ತರಿಸಿಕೊಳ್ಳಲಾಯಿತು. ಮೇ 24ರಂದು ಗಂಡನ ಅಂತ್ಯಕ್ರಿಯೆ ಮುಗಿಸಿ, ಅದೇ ದಿನ ರಾತ್ರಿ ತನ್ನ ಪಾಲಕರ ಮನೆಗೆ ಸಾಹಿತಿ ಹಿಂತಿರುಗಿದ್ದಳು.
ಇದನ್ನೂ ಓದಿ:ತಪ್ಪನ್ನು ತಿದ್ದಿಕೊಂಡು ಚುನಾವಣೆಗೆ ಸಜ್ಜಾಗೋಣ: ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ
ಸಾಹಿತಿಯು ಸಹೋದರಿ ಸಂಜನಾ ಜತೆ ಕೋಣೆಯಲ್ಲಿ ಮಲಗಿದ್ದಳು. ಸಂಜನಾ ಗುರುವಾರ ಬೆಳಗ್ಗೆ ಎದ್ದು ವಾಶ್​ರೂಮ್​ಗೆ ತೆರಳಿದಳು. ಇದೇ ಸಮಯಕ್ಕೆ ಎದ್ದ ಸಾಹಿತಿ ರೂಮಿನ ಬಾಗಿಲನ್ನು ಒಳಗಡೆಯಿಂದ ಲಾಕ್​ ಮಾಡಿ, ಫ್ಯಾನಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಈ ವಿಚಾರ ಗೊತ್ತಾದ ಬಳಿಕ ರೂಮಿನ ಬಾಗಿಲು ಒಡೆದು ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸಾಹಿತಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಒಂದೇ ರೋಲ್​ ನಂಬರ್, ಒಂದೇ ರ‍್ಯಾಂಕ್, ಮೊದಲ ಹೆಸರೂ ಕೂಡ ಒಂದೇ! ಏನಿದು ಯುಪಿಎಸ್​ಸಿಯ ನಿಗೂಢತೆ?

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 28 ಗಂಟೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಹೊಸ ಸಂಸತ್​ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ: ಏನಿದರ ವಿಶೇಷತೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 19 =
Remember me
