ಪುಣೆ: ಭೀಮಾ ಕೋರೇಗಾಂವ್​ ಕೇಸ್​ನ ಆರೋಪಿ ಸುಧಾ ಭಾರದ್ವಾಜ್​ ಅವರು ಮಧುಮೇಹ ಮತ್ತು ಇಸ್ಚೆಮಿಕ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಜೈಲಿನಲ್ಲೇ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಕೋರ್ಟ್​ಗೆ ತಿಳಿಸಿದ್ದಾರೆ.
ಜಸ್ಟೀಸ್​ ಎಸ್​.ಎಸ್.ಶಿಂಧೆ ಮತ್ತು ಜಸ್ಟೀಸ್ ಎಸ್​.ಪಿ.ತಾವಡೆ ಅವರನ್ನು ಒಳಗೊಂಡ ಡಿವಿಷನ್ ಬೆಂಚ್​ಗೆ ಮುಂಬೈ ಬೈಕುಲಾ ಜಿಲ್ಲಾ ಕಾರಾಗೃಹದ ವೈದ್ಯಕೀಯ ಅಧಿಕಾರಿ ಈ ಕುರಿತ ವರದಿಯನ್ನು ಸಲ್ಲಿಸಿದ್ದಾರೆ. ಭಾರದ್ವಾಜ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಅಪೀಲ್​ನ ವಿಚಾರಣೆ ಕೈಗೆತ್ತಿಕೊಂಡಿರುವ ಕೋರ್ಟ್ ಜೈಲಿನ ಅಧಿಕಾರಿಗಳಿಂದ ಭಾರದ್ವಾಜ್ ಅವರ ಆರೋಗ್ಯ ವರದಿ ಕೇಳಿತ್ತು. ಜೈಲಿನೊಳಗೆ ಸಾಮಾಜಿಕ ಅಂತರ ಸೇರಿ ಒಟ್ಟಾರೆ ಸ್ಥಿತಿಗತಿ ವಿವರ ಸಲ್ಲಿಸುವಂತೆ ಸೂಚಿಸಿತ್ತು.
ಇದನ್ನೂ ಓದಿ:ಎಸ್​ಐಟಿ ರಚನೆಗೆ ಸುಪ್ರೀಂ ಅಸಮ್ಮತಿ
ಸುಧಾ ಭಾರದ್ವಾಜ್ ಅವರನ್ನು ಫರೀದಾಬಾದ್​ನ ಅವರ ಮನೆಯಿಂದ 2018ರ ಆಗಸ್ಟ್​ 28 ರಂದು ಬಂಧಿಸಲಾಗಿತ್ತು. ಆರಂಭದಲ್ಲಿ ಅವರನ್ನು ಯೆರವಾಡಾ ಜೈಲಿನಲ್ಲಿ ಇರಿಸಲಾಗಿತ್ತು. ತರುವಾಯ ಬೈಕುಲಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಸುಧಾ ಭಾರದ್ವಾಜ್​ ಆರೋಗ್ಯ ನೆಲೆಯಲ್ಲಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಮೇ 29ರಂದು ವಿಶೇಷ ಎನ್​ಐಎ ಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ:ನಕ್ಸಲರ ಜತೆ ಚಿಂತಕರ ನಂಟು
ಈ ನಡುವೆ, ಸಕ್ಕರೆ, ಅಧಿಕ ರಕ್ತದೊತ್ತಡ, ಪಲ್ಮನರಿ ಟ್ಯೂಬರ್​ಕುಲೋಸಿಸ್​ ಮುಂತಾದ ಆರೋಗ್ಯ ಸಮಸ್ಯೆಗಳಿವೆ. ಕೋವಿಡ್ ಸೋಂಕು ಬಹುಬೇಗ ತಗುಲಬಹುದಾಗಿದ್ದು, ಆರೋಗ್ಯ ರಕ್ಷಣೆ ಸಂಬಂಧ ಮಧ್ಯಂತರ ಜಾಮೀನು ನೀಡಬೇಕು ಎಂದು ಸುಧಾ ಭಾರದ್ವಾಜ್​ ಕೋರಿದ್ದರು. ಆದರೆ, ಜುಲೈ 1ರಂದು ಮತ್ತೆ ಎನ್​ಐಎ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕೋವಿಡ್ 19 ಸಂಕಷ್ಟದ ಸಮಯವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿತ್ತು. ಮಾವೋವಾದಿ ಸಂಘಟನೆಗಳ ಜತೆಗಿನ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳೂ ಸುಧಾ ವಿರುದ್ಧ ಇರುವ ಕಾರಣ ಅವರಿಗೆ ಜಾಮೀನು ನೀಡಿದರೆ ತೊಂದರೆಯಾಗುತ್ತದೆ ಎಂದೂ ಎನ್​ಐಎ ವಾದಿಸಿದೆ. (ಏಜೆನ್ಸೀಸ್)
ಸಚಿನ್ ಪೈಲಟ್​ ಅನರ್ಹತೆ ಪ್ರಕರಣ: ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
