ಬೆಂಗಳೂರು:ಇನ್ಫೋಸಿಸ್​ ಸಹ-ಸಂಸ್ಥಾಪಕ ಎನ್​.ಆರ್​. ನಾರಾಯಣಮೂರ್ತಿ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುಧಾಮೂರ್ತಿ ಅವರು ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ರಕ್ಷಾಬಂಧನ ಆಚರಣೆಯ ಇತಿಹಾಸವನ್ನು ಹೇಳಿದ್ದರು. ಆದರೆ ಅವರು ಮಾತುಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.
ಇದನ್ನು ಓದಿ:ಯುಪಿಎಸ್​​ಸಿ ಅಧ್ಯಕ್ಷರಿಗೆ ಪತ್ರ ಬರೆದ ಕೇಂದ್ರ ಸಚಿವ; ಉಲ್ಲೇಖಿಸಿರುವ ಅಂಶಗಳು ಹೀಗಿವೆ..
ವಿಡಿಯೋಗೆ ಬಂದ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ನೋಡಿ ಸುಧಾಮೂರ್ತಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ರಕ್ಷಾಬಂಧನಲ್ಲಿ ಹಂಚಿಕೊಂಡಿರುವ ಕಥೆಯು ರಾಖಿ ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ರಕ್ಷಾಬಂಧನದ ಬಗ್ಗೆ ನಾನು ಕೇಳಿದ ಅನೇಕ ಕಥೆಗಳಲ್ಲಿ ಒಂದನ್ನು ಹೈಲೈಟ್​ ಮಾಡುವುದು ನನ್ನ ಉದ್ದೇಶವಾಗಿತ್ತು. ರಾಖಿ ಹಬ್ಬ ಈ ಭೂಮಿಯ ಹಳೆಯ ಸಂಪ್ರದಾಯವಾಗಿದೆ. ನಾನೂ ಇದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
ಸುಧಾಮೂರ್ತಿ ಅವರ ಸ್ಪಷ್ಟನೆಯ ಪೋಸ್ಟ್​​ ಅನ್ನು 4.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಗೂ 3000 ಲೈಕ್​ಗಳನ್ನು ನೀಡಲಾಗಿದೆ. ಈ ಪೋಸ್ಟ್​ ಕೂಡ ನೆಟ್ಟಿಗರಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಮೇಡಂ ಹಾಗಿದ್ದಲ್ಲಿ ನೀವು ಆ ವಿಡಿಯೋ ಮತ್ತು ಟ್ವೀಟ್​ ಅನ್ನು ಡಿಲೀಟ್ ಮಾಡಬೇಕು. ಏಕೆಂದರೆ ಆ ವಿಡಿಯೋದಲ್ಲಿ ರಾಖಿ ಸಂಪ್ರದಾಯವು ಕರ್ಣಾವತಿ ಮತ್ತು ಹುಮಾಯೂನ್​ ಅವರ ನಕಲಿ ಕಥೆಯಿಂದ ಆರಂಭವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.
The story I shared on Raksha Bandhan is just one of many tales associated with the festival and certainly not its origin. As I have said in the video clip, this was already a custom of the land. My intention was to highlight one of the many stories I learnt about when growing up,…
ಆ ವಿಡಿಯೋದಲ್ಲಿ ಸುಧಾಮೂರ್ತಿ ಅವರು, ರಕ್ಷಾಬಂಧನಕ್ಕೆ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ ಅವಳು ಸಹೋದರತ್ವದ ಸಂಕೇತವಾಗಿ ರಾಜ ಹುಮಾಯೂನ್​​ಗೆ ದಾರವನ್ನು ಕಳುಹಿಸಿ ಅವನ ಸಹಾಯವನ್ನು ಕೇಳುತ್ತಾಳೆ. ಅಂದಿನಿಂದ ಈ ದಾರದ ಸಂಪ್ರದಾಯ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರಿದಿದೆ ಎಂದು ಹೇಳಿದ್ದರು. (ಏಜೆನ್ಸೀಸ್​​)
ರಕ್ಷಾಬಂಧನದ ಇತಿಹಾಸ ಹೇಳಿದ ಸುಧಾಮೂರ್ತಿ​​​; ವಿಡಿಯೋ ನೋಡಿ ನೆಟ್ಟಿಗರು ಕಿಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 8 =
Remember me
