ನವದೆಹಲಿ:3 ರಿಂದ 12 ನೇ ತರಗತಿಗಳಿಗೆ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಅಂತಿಮಗೊಳಿಸಲು NCERT ರಚಿಸಿಗಿರುವ ಮಂಡಳಿಯಲ್ಲಿ ಇನ್ಫೋಸಿಸ್‍ನ ಸುಧಾಮೂರ್ತಿ, ಶಂಕರ್ ಮಹಾದೇವನ್, ಸಂಜೀವ್ ಸನ್ಯಾಲ್ ಸೇರಿದಂತೆ ಒಟ್ಟು 19 ಜನರು ಇರಲಿದ್ದಾರೆ.
ಪಠ್ಯಕ್ರಮವನ್ನು ಅಂತಿಮಗೊಳಿಸಲು NCERT, ಲೇಖಕಿಯೂ ಆಗಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ್ಯೆ ಸುಧಾಮೂರ್ತಿ, ಗಾಯಕ ಶಂಕರ್ ಮಹಾದೇವನ್ ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಮುಂತಾದವರ ಸಮಿತಿಯನ್ನು ರಚಿಸಿದೆ.
ಇದನ್ನೂ ಓದಿ:12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಿಂದ ಪ್ರತ್ಯೇಕ ಖಲಿಸ್ತಾನ್​ ಕುರಿತ ವಿಷಯ ತೆಗೆದ NCERT
ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ (NCF-SE) ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಪಠ್ಯಕ್ರಮವನ್ನು ಸೇರಿಸಲು ಸಮಿತಿ ಕೆಲಸ ಮಾಡಲಿದೆ. ಅಂತಿಮ ಎನ್‍ಸಿಎಫ್-ಎಸ್ಇ ಅನ್ನು ಈಗಾಗಲೇ ಶಿಕ್ಷಣ ಸಚಿವಾಲಯದೊಂದಿಗೆ ಸಲ್ಲಿಸಲಾಗಿದ್ದರೂ, ಅದನ್ನು ಇನ್ನೂ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಚೌಕಟ್ಟಿನ ಕರಡನ್ನು ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಲಾಯಿತು.
ಟಿಪ್ಪಣಿಯ ಪ್ರಕಾರ, ಶಾಲಾ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಎನ್ಎಸ್‍ಟಿಸಿ ಗೆ ಅಧಿಕಾರ ನೀಡಲಾಗುವುದು. ಅದಲ್ಲದೇ 3ನೇ ತರಗತಿಯಿಂದ 12 ತರಗತಿಯವರೆಗೆ ಬೋಧನೆ ಮತ್ತು ಕಲಿಕೆಯ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದೂ ಎನ್ಎಸ್‍ಟಿಸಿಯ ಜವಾಬ್ದಾರಿ ಆಗಿರಲಿದೆ.
ಇದನ್ನೂ ಓದಿ:12 ನೇ ತರಗತಿ ಇತಿಹಾಸ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳನ್ನು ತೆಗೆದುಹಾಕಿದ ʻNCERTʼ
ಈ ಸಮಿತಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜಲ್ ಭಗವ್ ಅವರ ಉಪಾಧ್ಯಕ್ಷತೆಯನ್ನು ಹೊಂದಿದೆ. ಇದರ ಇತರ ಸದಸ್ಯರಲ್ಲಿ ಗಣಿತಜ್ಞ ಸುಜಾಥಾ ರಾಮ್‍ದೊರೈ, ಬ್ಯಾಡ್ಮಿಂಟನ್ ಆಟಗಾರ ಯು ವಿಮಲ್ ಕುಮಾರ್, ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್‍ನ ಎಂಡಿ ಶ್ರೀನಿವಾಸ್, ಮತ್ತು ಅಧ್ಯಕ್ಷರಾಘಿ ಭಾರತೀಯ ಭಾಷಾ ಸಮಿತಿಯ ಕೃಷ್ಣ ಶಾಸ್ತ್ರೀ ಕೂಡ ಇರಲಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − ten =
Remember me
