ಬುಲಂದಶಹರ್:ಸುದಿಕ್ಷಾ ಭಾಟಿ ಸಾವಿಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಗೌತಮ್ ಬುದ್ಧನಗರದ ದಾದ್ರಿಯ ಡೆರಿ ಸ್ಕ್ಯಾನರ್ ಗ್ರಾಮದವರಾಗಿದ್ದ ಸುದೀಕ್ಷಾ ಆಗಸ್ಟ್ 10 ರಂದು ಬುಲಂದ್‌ಶಹರ್ ಜಿಲ್ಲೆಯ ರಸ್ತೆ ಅಪಘಾತದಲ್ಲಿ ಸಾವಿಗೀಡಾದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದೀಪಕ್ ಚೌಧರಿ ಮತ್ತು ರಾಜು ಎಂಬ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಸುದಿಕ್ಷಾ, ವಿದ್ಯಾರ್ಥಿ ವೇತನದ ಆಧಾರದ ಮೇಲೆ ಮ್ಯಾಸಚೂಸೆಟ್ಸ್ (ಯುಎಸ್) ನ ಬಾಬ್ಸನ್ ಕಾಲೇಜಿನಲ್ಲಿ ಉದ್ಯಮಶೀಲತೆಯ ಪದವಿ ಕೋರ್ಸ್ ಓದುತ್ತಿದ್ದರು, ಕೋವಿಡ್​​ನಿಂದಾಗಿ ಭಾರತಕ್ಕೆ ಮರಳಿ ಬಂದಿದ್ದ ಅವರು ಆಗಸ್ಟ್ 20 ರಂದು ಹಿಂತಿರುಗಲು ನಿರ್ಧರಿಸಿದ್ದರು.
ಇದನ್ನೂ ಓದಿ :ಪಿಯುಸಿ ಟಾಪರ್‌ ಅಪಘಾತದಲ್ಲಿ ಸಾವು: ಘಟನೆಯ ಹಿಂದಿದೆ ಕಾಣದ ಕೈ?
ದ್ವಿಚಕ್ರ ವಾಹನವೊಂದರಲ್ಲಿ ಬಂದ ಇಬ್ಬರು ಆರೋಪಿಗಳು ಸುದೀಕ್ಷಾ ಇದ್ದ ದ್ವಿಚಕ್ರ ವಾಹನವನ್ನು ಹಿಂಬಾಲಿಸಿ ಮತ್ತು ಕಿರುಕುಳ ನೀಡಿದ್ದರಿಂದ ರಸ್ತೆ ಅಪಘಾತ ಸಂಭವಿಸಿದೆ ಎಂದು ಆಕೆಯ ಕುಟುಂಬ ಆರೋಪಿಸಿದೆ, ಆದರೆ ಕೆಲವರು ಘಟನೆಯನ್ನು ವಿವರಿಸುವಲ್ಲಿ ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.” ಅವರ ಮೃತದೇಹ ಸ್ವಗ್ರಾಮವನ್ನು ತಲುಪಿದ ನಂತರ, ಕೆಲವರು ಘಟನೆಯ ನಿರೂಪಣೆಯನ್ನು ತಿರುಚಲು ಪ್ರಯತ್ನಿಸಿದರು. ಸುದೀಕ್ಷಾಗೆ ಅಮೆರಿಕದಲ್ಲಿ ಓದಲು ದೊಡ್ಡಮೊತ್ತದ ವಿದ್ಯಾರ್ಥಿವೇತನ ಪ್ಯಾಕೇಜ್ ದೊರೆತಿರುವುದರಿಂದ ಜನರಲ್ಲಿ ದುಡ್ಡು ಬೇಡುವ ಆಲೋಚನೆ ಇದ್ದಿರಬಹುದು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಗುರುವಾರ ಹೇಳಿದ್ದಾರೆ.
ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆ- ಮೂಳೆ, ಕಿವಿಯೋಲೆ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 18 =
Remember me
