ಮುಂಬೈ:ದ್ವಾರಿಕೇಶ್ ಶುಗರ್ ತನ್ನ ಷೇರುಗಳನ್ನು ಮರುಖರೀದಿಸಲು (ಬಯ್​ಬ್ಯಾಕ್​) ನಿರ್ಧರಿಸಿದೆ. ಕಂಪನಿಯ ಮಂಡಳಿಯು ಪ್ರತಿ ಷೇರಿಗೆ 105 ರೂ.ಗೆ ಮರುಖರೀದಿಯ ಬೆಲೆಯನ್ನು ನಿಗದಿಪಡಿಸಿದೆ. ಮಾರ್ಚ್ 8 ರಂದು ನಡೆದ ಮಂಡಳಿಯ ಸಭೆಯಲ್ಲಿ ಬಯ್​ಬ್ಯಾಕ್​ಗೆ ದಾಖಲೆಯ ದಿನಾಂಕವನ್ನು ಸಹ ಘೋಷಿಸಲಾಗಿದೆ. ಹೂಡಿಕೆದಾರರ ದೃಷ್ಟಿಕೋನದಿಂದ ಉತ್ತಮ ವಿಷಯವೆಂದರೆ ಕಂಪನಿಯ ನಿಗದಿತ ದಾಖಲೆ ದಿನಾಂಕಕ್ಕೆ ಹೆಚ್ಚು ಸಮಯ ಉಳಿದಿಲ್ಲ. ದ್ವಾರಕೇಶ್ ಶುಗುರ್​ ದಾಖಲೆ ದಿನಾಂಕವನ್ನು ಮಾರ್ಚ್ 20, 2024 ಎಂದು ನಿಗದಿಪಡಿಸಲಾಗಿದೆ.
30 ಲಕ್ಷ ಷೇರುಗಳನ್ನು ಟೆಂಡರ್ ಮೂಲಕ ಖರೀದಿಸಲು ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ 31.50 ಕೋಟಿ ರೂ . ಹಣವನ್ನು ನಿಗದಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.
ಬೈಬ್ಯಾಕ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ತಿಳಿಯೋಣ…1) ಬೆಲೆ ಏನು?: ಕಂಪನಿಯು ಪ್ರತಿ ಷೇರಿಗೆ 105 ರೂ.ಗೆ ಮರುಖರೀದಿಯ ಬೆಲೆಯನ್ನು ನಿಗದಿಪಡಿಸಿದೆ.2) ದಾಖಲೆ ದಿನಾಂಕ ಯಾವುದು?: ಕಂಪನಿಯು ಮಾರ್ಚ್ 20 ಅನ್ನು ದಾಖಲೆ ದಿನಾಂಕ ಎಂದು ನಿಗದಿಪಡಿಸಿದೆ.3) ಬಯ್​ಬ್ಯಾಕ್ ಹೇಗೆ ಸಂಭವಿಸುತ್ತದೆ?: ಟೆಂಡರ್ ಮೂಲಕ ಬಯ್​ಬ್ಯಾಕ್​ ಮಾಡಲಾಗುವುದು ಎಂದು ಕಂಪನಿ ಹೇಳಿದೆ.4) ಬಯ್​ಬ್ಯಾಕ್‌ನ ಗಾತ್ರ ಎಷ್ಟು?: ಕಂಪನಿಯು ಬಯ್​ಬ್ಯಾಕ್‌ಗೆ 31.50 ಕೋಟಿ ರೂ. ನಿಗದಿಪಡಿಸಿದೆ.5) ಷೇರು ಮಾರುಕಟ್ಟೆಯಲ್ಲಿ ಬೆಲೆ ಎಷ್ಟು?: ಗುರುವಾರದಂದು ಕಂಪನಿಯ ಷೇರುಗಳ ಬೆಲೆ ಎನ್‌ಎಸ್‌ಇಯಲ್ಲಿ 81.40 ರೂ. ಅಂದರೆ ಹೂಡಿಕೆದಾರರು 30 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು.
ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ ಅಂದಾಜು 8 ಪ್ರತಿಶತದಷ್ಟು ಕುಸಿದಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 109.75 ಮತ್ತು ಕನಿಷ್ಠ ಬೆಲೆ ರೂ 77.30 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 1522.42 ಕೋಟಿ ರೂ. ಇದೆ.

ಮುಂದಿನ ವಾರ ಮಾರುಕಟ್ಟೆಗೆ ಲಗ್ಗೆ ಹಾಕಲಿವೆ 7 ಐಪಿಒಗಳು: ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ
982% ಲಾಭ ನೀಡಿದ ಅದಾನಿ ಪೋರ್ಟ್ಸ್​ ಷೇರು: ಖರೀದಿಗೆ ಅನೇಕ ಬ್ರೋಕರೇಜ್​ ಸಂಸ್ಥೆಗಳ ಸಲಹೆ, ಟಾರ್ಗೆಟ್​ ಪ್ರೈಸ್​ ನಿಗದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − five =
Remember me
