|ರಾಘವ ಶರ್ಮನಿಡ್ಲೆನವದೆಹಲಿ
ಇಡೀ ದೇಶ ನಿಮ್ಮ ಸಾಧನೆಯನ್ನು ಮೆಚ್ಚಿದೆ. ಏನನಿಸುತ್ತಿದೆ?
ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಗೆದ್ದಿರುವುದು ಖುಷಿ ಕೊಟ್ಟಿದೆ. ಚಿನ್ನ ಸಿಕ್ಕಿದ್ದರೆ ಇನ್ನೂ ಹೆಚ್ಚು ಸಂಭ್ರಮ ಪಡುತ್ತಿದ್ದೆ. ಎಲ್ಲವೂ ಭಗವಂತನಿಚ್ಛೆ. ಆತ ಎಲ್ಲರಿಗೂ ಎಲ್ಲವನ್ನೂ ನೀಡುವುದಿಲ್ಲ. ಯಾವುದೇ ಕ್ರೀಡಾಪಟುವಿಗಿರಲಿ, ಒಲಿಂಪಿಕ್ಸ್-ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸುವುದೇ ದೊಡ್ಡ ಅವಕಾಶ. ಇದು ಎಲ್ಲರಿಗೂ ಸಿಗದು. ನನಗೆ ಆ ಭಾಗ್ಯ ಸಿಕ್ಕಿತು. ಕರ್ನಾಟಕದ ಜನತೆಗೆ ನನ್ನ ವಿಶೇಷ ಧನ್ಯವಾದ.
ಕ್ರೀಡಾ ಕ್ಷೇತ್ರಕ್ಕೆ ಹೋಗಬೇಕು ಎಂಬ ಕನಸನ್ನು ಬಾಲ್ಯದಲ್ಲೇ ಕಂಡಿದ್ದಿರಾ?
ಬಾಲ್ಯದಲ್ಲಿ ಹೆಚ್ಚಿನ ಶಿಕ್ಷಣ ಆಗಿದ್ದು ಶಿವಮೊಗ್ಗದಲ್ಲಿ. ಆಗ ಇಂತಹ ಕನಸುಗಳನ್ನೆಲ್ಲ ಕಂಡಿರಲಿಲ್ಲ. ಗ್ರಾಮೀಣ ಭಾಗದವನಾಗಿದ್ದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಓದಲು ಸಾಧ್ಯವಾಗಿರಲಿಲ್ಲ. ಆದರೆ, ಯಾವುದೇ ಶಾಲೆಯಲ್ಲೇ ಓದು, ಅಲ್ಲಿ ಅತ್ಯುತ್ತಮ ನಿರ್ವಹಣೆ ತೋರಬೇಕು ಎಂಬ ಅಪ್ಪನ ಮಾತುಗಳು ಸದಾ ಸ್ಪೂರ್ತಿ ತುಂಬಿದವು. ಇದರಿಂದಾಗಿ ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಐಎಎಸ್ ಅಧಿಕಾರಿಯಾಗುತ್ತೇನೆ, ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸಿ ಬೆಳ್ಳಿ ಗೆಲ್ಲುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಮ್ಮ ಜೀವನದ ದೋಣಿ ಎಲ್ಲಿ ಹೋಗುತ್ತೆ ಎನ್ನುವುದು ಕಷ್ಟ. ಎಲ್ಲರ ಬದುಕಲ್ಲೂ ತೊಂದರೆ, ಸವಾಲುಗಳು ಸಹಜ. ದೃಢ ಚಿತ್ತ, ಸ್ಪಷ್ಟ ಗುರಿಯಿಂದ ಸಾಗುತ್ತಾ ದಡ ಸೇರಲು ಯತ್ನಿಸಬೇಕು ಎನ್ನುವುದು ನನ್ನ ನಂಬಿಕೆ.
ಐಎಎಸ್ ಅಧಿಕಾರಿ ಆಗಬೇಕೆನಿಸಿದ್ದು ಏಕೆ?
ಸಾರ್ವಜನಿಕ ಸೇವೆ ಮಾಡಬೇಕೆಂಬ ಆಶಯ ಮೊದಲಿನಿಂದಲೂ ಇತ್ತು. 2005ರಲ್ಲಿ ಅಪ್ಪ ನಿಧನರಾದ ಬಳಿಕ ಐಎಎಸ್ ಪಾಸು ಮಾಡಲು ಸಾಕಷ್ಟು ಪರಿಶ್ರಮ ಹಾಕಿದೆ ಮತ್ತು ಯಶಸ್ವಿಯಾದೆ. ನಂತರ ಪ್ಯಾರಾಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಳ್ಳಲೇಬೇಕು ಎಂದು ಶ್ರಮ ಹಾಕಿದೆ. ಅದೂ ಸಾಧ್ಯವಾಗಿ, ಈಗ ಪದಕ ವಿಜೇತನಾಗಿದ್ದೇನೆ. ಚಿನ್ನ ಗೆಲ್ಲುವುದು ನನ್ನ ಮುಂದಿನ ಗುರಿ.
ಗೌತಮ್ ಬುದ್ಧ ನಗರದಂತಹ ಮಹತ್ವದ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಯ ಜತೆಗೆ ಬ್ಯಾಡ್ಮಿಂಟನ್ ಆಟ.. ಸಮತೋಲನ ಕಾಪಾಡಿಕೊಳ್ಳುವುದು ಕಷ್ಟ ಎನಿಸಿಲ್ಲವೇ?
ಏನೇ ಒಳ್ಳೆಯ ಕೆಲಸ ಮಾಡಬೇಕಿದ್ದರೂ ಹತ್ತಾರು ಅಡೆತಡೆಗಳಿರುತ್ತವೆ. ಸುಲಭದಲ್ಲಿ ದಕ್ಕುವ ವಿಷಯ/ವಸ್ತುಗಳಿಗೆ ಮೌಲ್ಯ ಕಡಿಮೆ. ನಾಗರಿಕ ಸೇವೆಯನ್ನು (ಐಎಎಸ್) ನಾನು ಮನಸ್ಸಿಟ್ಟು ಮಾಡುತ್ತೇನೆ. ಅದೇ ರೀತಿ ಬ್ಯಾಡ್ಮಿಂಟನ್ ಕೂಡ. ಈ ಆಟವನ್ನು ಆಧ್ಯಾತ್ಮಿಕ ಶಕ್ತಿಯೆಂದು ಪರಿಗಣಿಸುತ್ತೇನೆ. ಎಷ್ಟೇ ಹೊತ್ತು ಆಟವಾಡಿದರೂ ಸುಸ್ತೆನಿಸುವುದಿಲ್ಲ. ಮನಸ್ಸು/ದೇಹಕ್ಕೆ ರಿಲ್ಯಾಕ್ಸ್ ಎನಿಸುತ್ತದೆ.
ರಾತ್ರಿ 10 ಗಂಟೆ ನಂತರ ಪ್ರಾಕ್ಟೀಸ್ ಮಾಡ್ತೀರಂತೆ?
ಹೌದು. ಡಿ.ಸಿ.ಯಾಗಿರುವುದರಿಂದ ಬೆಳಗ್ಗಿನ ವೇಳೆಯೆಲ್ಲಾ ಕೆಲಸದಲ್ಲಿ ಮುಳುಗಿರುತ್ತೇನೆ. ಕೆಲವೊಮ್ಮೆ ರಾತ್ರಿ 12, 1 ಗಂಟೆಯಿಂದ 3 ಗಂಟೆವರೆಗೆ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಮಾಡುತ್ತೇನೆ. ಬೆಳಗ್ಗೆ 7 ಗಂಟೆಗೆ ಎದ್ದು ಕರ್ತವ್ಯಕ್ಕೆ ರೆಡಿಯಾಗುತ್ತೇನೆ. ಮನಸ್ಸಲ್ಲಿ ಬ್ಯಾಡ್ಮಿಂಟನ್ ಬಗ್ಗೆ ಅಷ್ಟೊಂದು ಪ್ರೀತಿಯಿದ್ದ ಕಾರಣ ಇದೆಲ್ಲಾ ಸಾಧ್ಯವಾಯ್ತು. ಬ್ಯಾಡ್ಮಿಂಟನ್ ಮಾತ್ರ ಎಂದಲ್ಲ. ಯಾವುದೇ ವಿಷಯದ ಬಗ್ಗೆ ನಮ್ಮಲ್ಲಿ ಪ್ರೀತಿ, ಆಸಕ್ತಿಯಿದ್ದಾಗ ಮಾತ್ರ ಈ ರೀತಿ ಫೋಕಸ್ ನೀಡಲು ಸಾಧ್ಯ. ಇಷ್ಟ ಪಟ್ಟು ಮಾಡಿದ ಕೆಲಸ ಯಾವತ್ತೂ ಕಷ್ಟ ಕೊಡಲ್ಲ. ಬ್ಯಾಡ್ಮಿಂಟನ್ ಆಟ ಸದೃಢ ದೇಹವನ್ನು ರೂಪಿಸುತ್ತದೆ.
ಬ್ಯಾಡ್ಮಿಂಟನ್ ಮೇಲಿನ ಆಸಕ್ತಿ ಬಂದಿದ್ದು ಹೇಗೆ?
2015ರವರೆಗೆ ಬ್ಯಾಡ್ಮಿಂಟನ್ ಹವ್ಯಾಸವಾಗಿತ್ತು. 2016ರಲ್ಲಿ ಆಜಂಗಢ ಜಿಲ್ಲಾಧಿಕಾರಿಯಾಗಿದ್ದಾಗ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟನೆಗೆ ಹೋಗಿದ್ದೆ. ಅದರಲ್ಲಿ ಕ್ರೀಡಾಪಟುವಾಗಿ ಪಾಲ್ಗೊಂಡೆ ಮತ್ತು ಅಲ್ಲಿ ಇಬ್ಬರು ರಾಜ್ಯಮಟ್ಟದ ಆಟಗಾರರನ್ನು ಸೋಲಿಸಿದೆ. ಇದು ಕೋಚ್ ಗೌರವ್ ಖನ್ನಾರ ಗಮನಸೆಳೆದಿತ್ತು. ಬ್ಯಾಡ್ಮಿಂಟನ್​ಅನ್ನು ರೆಗ್ಯುಲರ್ ಆಗಿ ಆಡಿ ಎಂದವರು ಸಲಹೆ ನೀಡಿದರೂ, ಇದೆಲ್ಲ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದೆ. ಆದರೂ, ಅವರ ಆಹ್ವಾನ ಮನಸ್ಸಿನಲ್ಲಿ ಗಿರಕಿಹೊಡೆಯುತ್ತಲಿತ್ತು. ಅವರನ್ನು ದೂರವಾಣಿಯಲ್ಲಿ ಸಂರ್ಪಸಿದೆ. 4 ತಿಂಗಳ ಬಳಿಕ ಬೀಜಿಂಗ್ ಚಾಂಪಿಯನ್​ಷಿಪ್ ನಡೆಯಲಿದೆ, ತಯಾರಿ ನಡೆಸಿ ಎಂದು ಹೇಳಿಯೇ ಬಿಟ್ಟರು. ಅಲ್ಲಿಂದ ಬ್ಯಾಡ್ಮಿಂಟನ್ ನನ್ನ ವೃತ್ತಿಪರ ಕ್ರೀಡೆಯಾಗಿ ಬದಲಾಯ್ತು.

ನಿಮ್ಮ ಊರಿನ ಜನರಿಗೆ, ಕನ್ನಡಿಗರಿಗೆ ಸಂದೇಶವೇನು?
ಕನ್ನಡಿಗರ ಪ್ರೀತಿ ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ನನಗೆ ಕನ್ನಡ ಕವನಗಳನ್ನು ಬರೆಯುವ ಹವ್ಯಾಸವಿತ್ತು. ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುತ್ತಿದ್ದೆ. 15 ವರ್ಷದಿಂದ ಕವನ ಬರೆದಿಲ್ಲ. ಕವನದ ಮೂಲಕವೇ ಕನ್ನಡಿಗರಿಗೆ ಧನ್ಯವಾದ ಅರ್ಪಿಸುತ್ತೇನೆ. ಶಿವಮೊಗ್ಗಕ್ಕೆ ಹೋದಾಗೆಲ್ಲಾ ಮೋಟರ್ ಸೈಕಲ್​ನಲ್ಲಿ ಓಡಾಡುತ್ತೇನೆ. ಪೊಲೀಸ್ ಚೌಕಿ ಬಳಿ ಪಾನಿಪುರಿ ತಿನ್ನದೇ ಇರುವುದಿಲ್ಲ. ಶಾಲೆಗೆ ಹೋಗುತ್ತೇನೆ. ಮುಂದಿನ ಬಾರಿ ಹೋದಾಗಲೂ ಅದನ್ನೇ ಮಾಡುತ್ತೇನೆ. ಜೀವನದಲ್ಲಿ ಏನೇ ಮಾಡಿದರೂ/ಎಲ್ಲೇ ಹೋದರೂ ನಮ್ಮತನ ಬಿಡಬಾರದು. ಜಮೀನಿನ ಮೇಲೆಯೇ ಕಾಲಿರಬೇಕು ಎಂಬುದನ್ನು ಗಾಢವಾಗಿ ನಂಬಿದ್ದೇನೆ.
ಹಾಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ನೀಡಿದೆಯೇ?
ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಪದಕ ಗೆಲ್ಲಲು ಸಾಮರ್ಥ್ಯುಳ್ಳ ಅರ್ಹ ಕ್ರೀಡಾಳುಗಳನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ನನಗೂ ಇದರಲ್ಲಿ ಸ್ಥಾನ ಸಿಕ್ಕಿ, ತರಬೇತಿಗಳನ್ನು ಪಡೆದುಕೊಂಡಿದ್ದೇನೆ. ಇವೆಲ್ಲವನ್ನು ಮೀರಿ, ದೇಶದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಯಬೇಕಿದೆ. ಮಕ್ಕಳು ಕ್ರೀಡೆಯಲ್ಲಿ ಯಶಸ್ಸು ಸಾಧಿಸುವ ಬಗ್ಗೆ ಹೆತ್ತವರು ಹತ್ತಾರು ಸಂಶಯಗಳನ್ನಿಟ್ಟುಕೊಂಡಿರುತ್ತಾರೆ. ಹೀಗಾಗಿ ಮಕ್ಕಳನ್ನು ಕ್ರೀಡೆಯ ಕಡೆ ಕಳುಹಿಸಲು ಹಿಂದೇಟು ಹಾಕುತ್ತಾರೆ.
ಒಂದರಿಂದ ನಾಲ್ಕನೇ ತರಗತಿವರೆಗೆ ಮಂಡ್ಯದ ದುದ್ದ ಎಂಬ ಹಳ್ಳಿಯಲ್ಲಿ ಓದಿದ್ದೆ. ನಂತರ ತಿಪಟೂರಿಗೆ ಹೋಗಬೇಕಾಯ್ತು. ಅದು ತಾಲೂಕು ಕೇಂದ್ರವಾಗಿದ್ದರಿಂದ ಗ್ರಾಮೀಣ ಹಿನ್ನೆಲೆಯ ನನ್ನನ್ನು ಇಂಗ್ಲಿಷ್ ಮೀಡಿಯಂಗೆ ಸೇರಿಸಿಕೊಳ್ಳಲಿಲ್ಲ. ಶಿವಮೊಗ್ಗದಲ್ಲಿ 6ನೇ ತರಗತಿಗೆ ಸೇರಿಕೊಂಡೆ. ನಾನು ತಾಲೂಕು ಕೇಂದ್ರದಿಂದ ಬಂದಿದ್ದೇನೆಂದು ಜಿಲ್ಲಾ ಕೇಂದ್ರದ ಇಂಗ್ಲಿಷ್ ಮೀಡಿಯಂನಲ್ಲಿ ಅವಕಾಶ ಸಿಗಲಿಲ್ಲ. 8ನೇ ಕ್ಲಾಸಿಗೆ ಕೇಳಿದ್ದಾಗ, 7ನೇ ತರಗತಿವರೆಗೆ ಕನ್ನಡ ಮೀಡಿಯಂನಲ್ಲಿ ಓದಿದ್ದೇನೆಂದು ಇಂಗ್ಲಿಷ್ ಮೀಡಿಯಂ ಬಾಗಿಲು ಮುಚ್ಚಿದ್ದರು.
ಅಜ್ಜ-ಅಜ್ಜಿಯನ್ನು ನೋಡಲು ಬೆಂಗ್ಳೂರಿಂದ ಕೊಡಗಿಗೆ ನಡೆದೇ ಹೊರಟ ಬಾಲಕಿ; 30 ಕಿ.ಮೀ. ನಡೆದು ಸುಸ್ತಾಗಿ 15 ದಿನಗಳ ಬಳಿಕ ಸಿಕ್ಕಳು..

ಇವಳು ಊರಿನವರ ನಿದ್ದೆ ಕೆಡಿಸಿದ ಮಹಿಳೆ; 40 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
