ಚೆನ್ನೈ:ತಮಿಳುನಾಡು ಸೇರಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ನಟ ಕಮಲ ಹಾಸನ್​ ಕೂಡ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರ ಪರ ಪ್ರಚಾರಕ್ಕೆ ಬಹುಭಾಷಾ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​ ಹೋಗಿದ್ದು, ರಸ್ತೆಯಲ್ಲಿ ಡ್ಯಾನ್ಸ್​ ಮಾಡಿ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ.
ಕಮಲ ಹಾಸನ್​ ಅವರು ಮಕ್ಕಲ್​ ನಿಧಿ ಮಾಯಂ (ಎಮ್‍ಎನ್‍ಎಮ್) ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಬ್ಯಾಟರಿ ಚಿನ್ನೆಯನ್ನು ಇಟ್ಟುಕೊಂಡಿರುವ ಅವರಿಗೆ ಮತ ನೀಡಿ ಎಂದು ಸುಹಾಸಿನಿ ಅವರು ಬೀದಿಗಿಳಿದು ಪ್ರಚಾರ ಮಾಡಿದ್ದಾರೆ.
ಪ್ರಚಾರದ ವೇಳೆ ತಮಟೆಯವರು ತಮಟೆ ಬಾರಿಸಿದ್ದಾರೆ. ಅದಕ್ಕೆ ತಕ್ಕಂತೆ ಸುಹಾಸಿನಿ ಹಾಗೂ ನಟಿ ಅಕ್ಷರಾ ಹಾಸನ್​ ಹೆಜ್ಜೆ ಹಾಕಿದ್ದಾರೆ. ಅವರ ಜತೆ ಪಕ್ಷದ ಕೆಲ ಬೆಂಬಲಿಗರೂ ನೃತ್ಯ ಮಾಡಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಕೈನಲ್ಲಿ ಟಾರ್ಚ್​ ಹಿಡಿದು ನೃತ್ಯ ಮಾಡಿರುವುದು ಸಕತ್​ ವೈರಲ್​ ಆಗಿದೆ. (ಏಜೆನ್ಸೀಸ್​)
ರಸ್ತೆಗಿಳಿದು ಹೆಜ್ಜೆ ಹಾಕಿದ ನಟಿ ಸುಹಾಸಿನಿ ಮತ್ತು ಅಕ್ಷರಾ ಹಾಸನ್​!ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಾಳುವಾಗಿರುವ ನಟ ಕಮಲ ಹಾಸನ್​ ಪರವಾಗಿ ನಟಿಯರು ಪ್ರಚಾರ ಆರಂಭಿಸಿದ್ದಾರೆ. ಬಹುಭಾಷಾ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​ ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್​ ಆಗಿದೆ.pic.twitter.com/TtMQYK8uAC
— Vijayavani (@VVani4U)April 4, 2021

ಕರೊನಾದಿಂದಾಗಿ ಮುಂಬೈನ ಐಪಿಎಲ್​ ಪಂದ್ಯಗಳನ್ನು ಬೇರೆಡೆ ನಡೆಸಲಾಗುತ್ತಾ ? ಇಲ್ಲಿದೆ ಉತ್ತರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 1 =
Remember me
