ನವದೆಹಲಿ:ವಿದ್ವಂಸಕ ಕೃತ್ಯ ನಡೆಸಲು ಶೇಖರಿಸಲಾಗಿದ್ದ ಹಲವು ಸ್ಫೋಟಕ ಸಾಧನಗಳು, ಸ್ಫೋಟಕಗಳಿರುವ ನಡುಪಟ್ಟಿ, ಜಾಕೆಟ್​ಅನ್ನು ಉತ್ತರಪ್ರದೇಶ ಬಲರಾಮ್​ಪುರದ ಉಗ್ರ ಮಹಮ್ಮದ್​ ಮುಷ್ತಕೀಮ್​ ಮನೆಯಿಂದ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ದೆಹಲಿಯ ಕರೊಲ್​ ಬಾಗ್​ ಪ್ರದೇಶದದಲ್ಲಿ ಗುಂಡಿನ ಚಕಮಕಿ ನಡೆಸಿ ಈತನನ್ನು ಪೊಲೀಸರು ಬಂಧಿಸಿದ್ದರು. ಮನೆಯಲ್ಲಿ ಐಸಿಸ್​ ಧ್ವಜಗಳು, ಉಗ್ರ ಸಂಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದಲ್ಲದೇ, ಸ್ಫೋಟಕವಾಗಿ ಬಳಸಲು ಇಟ್ಟಿದ್ದ ಎರಡು ಪ್ರೆಷರ್​ ಕುಕರ್​, 15 ಕೆಜಿಗಳಷ್ಟು ಸ್ಫೋಟಕ, ಪಿಸ್ತೂಲ್​, ನಾಲ್ಕು ಗುಂಡುಗಳನ್ನು ಈತನಿಂದ ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದಾಗುತ್ತಿದ್ದಂತೆ, ಪೊಲೀಸರು ಈತನ ಬಲರಾಮ್​ಪುರದಲ್ಲಿದ್ದ ಮನೆಗೆ ಧಾವಿಸಿದ್ದರು. ಗ್ರಾಮಕ್ಕೆಲ್ಲ ದಿಗ್ಬಂಧನ ವಿಧಿಸಿ ಸಂಪೂರ್ಣ ತಪಾಸಣೆ ನಡೆಸಿದ್ದರು.
ಇದನ್ನೂ ಓದಿ;ದಾವೂದ್​ ತನ್ನ ನೆಲದಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕ್​; ಆರ್ಥಿಕ ದಿಗ್ಬಂಧನದಿಂದ ಪಾರಾಗಲು ತಂತ್ರ…?

ಆತ್ಮಹತ್ಯಾ ದಾಳಿಗೆ ಬಳಸಲಾಗುವ ಸ್ಫೋಟಕವಿರಿಸುವ ಏಳು ಪಾಕೆಟ್​ಗಳಿರುವ ಎರಡು ಜಾಕೆಟ್​ಗಳು, ಮೂರು ಕೆಜಿ ಸ್ಫೋಟಕ ತುಂಬಿದ್ದ ನಡುಪಟ್ಟಿಗಳು ಪತ್ತೆಯಾಗಿದ್ದವು. ತಜ್ಞರು ಇದರಲ್ಲಿದ್ದ ಬಾಂಬ್​ಗಳನ್ನು ಸುರಕ್ಷಿತವಾಗಿ ಹೊರ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ. ಒಟ್ಟಾರೆ 9 ಕೆಜಿ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಿಕ್​ ವೈರ್​ಗಳು, ಅಂಟುಪಟ್ಟಿಗಳು, ಸಿಲಿಂಡರ್​ ಆಕಾರಾದ ವಸ್ತುಗಳು. ಲಿಥಿಯಂ ಬ್ಯಾಟರಿಗಳು, ಬಾಲ್​ ಬೇರಿಂಗ್​ ಸೇರಿ ಬಾಂಬ್​ ತಯಾರಿಸಲು ಬೇಕಿದ್ದ ವಸ್ತುಗಳನ್ನೆಲ್ಲ ಮುಷ್ತಕೀಮ್​ ಇಲ್ಲಿಟ್ಟಿದ್ದ.
ಇದನ್ನೂ ಓದಿ;ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್​ನೊಂದಿಗೆ ನೇರ ಸಂಪರ್ಕ
ಒಂದು ವೇಳೆ ಆಗಸ್ಟ್​ 15ರಂದು ವಿಧ್ವಂಸಕ ಕೃತ್ಯ ಎಸಗುವ ಈತನ ಉದ್ದೇಶ ಈಡೇರಿದ್ದೇ ಆದಲ್ಲಿ ಭಾರಿ ಪ್ರಮಾಣದ ಸಾವು-ನೋವು ಸಂಭವಿಸುತ್ತಿತ್ತು. ಏಕೆಂದರೆ ಈತ ಬಳಿ ಸಿಕ್ಕ ಕುಕರ್​ ಬಾಂಬ್​ಗಳು ಸಂಫೂರ್ಣ ಸಜ್ಜಾಗಿದ್ದು, ಅವನ್ನು ಆ್ಯಕ್ಟಿವೇಟ್​ ಮಾಡುವುದಷ್ಟೇ ಬಾಕಿಯಿತ್ತು. ಹೀಗಾಗಿ ಈತನ ಬಂಧನವಾಗುತ್ತಿದ್ದಂತೆ ದೆಹಲಿ ಪ್ರಮುಖ ಸ್ಥಳಗಳಲ್ಲಿ ಭಾರಿ ತಪಾಸಣೆ ನಡೆಸಲಾಗಿತ್ತು. ಒಂಟಿಯಾಗಿ ವಿಧ್ವಂಸಕ ಕೃತ್ಯ ನಡೆಸಲು ದೆಹಲಿಯ ಹಲವು ಪ್ರದೇಶಗಳಿಗೆ ಮುಷ್ತಕೀನ್​ ಭೇಟಿ ನೀಡಿದ್ದ. ಗ್ರಾಮದ ಸ್ಮಶಾನದಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
