ಮುಂಬೈ:200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ನಡುವೆ ಪ್ರೀತಿ ಇತ್ತು ಎನ್ನಲಾಗಿತ್ತು. ಆದರೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹೋಳಿ ಸಂದರ್ಭದಲ್ಲಿ ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ ಫರ್ನಾಂಡಿಸ್​ಗೆ ಲವ್ ಲೆಟರ್ ಬರೆದಿದ್ದಾನೆ ಎನ್ನಲಾಗಿದೆ.
ಪತ್ರದಲ್ಲಿ ಏನಿದೆ?:ಒಳ್ಳೆಯ ವ್ಯಕ್ತಿ, ನನ್ನ ಬ್ಯೂಟಿಫುಲ್ ಜಾಕ್ವೆಲಿನ್​ಗೆ ಹೋಳಿ ಶುಭಾಶಯ. ಈ ದಿನ ಬಣ್ಣಗಳ ಹಬ್ಬ. ಮರೆಯಾದ ಬಣ್ಣಗಳು 100 ಪಟ್ಟು ಹೆಚ್ಚಾಗಿ ನಿಮ್ಮ ಬಳಿ ಬರುತ್ತವೆ. ಈ ವರ್ಷ ನಿಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ರೀತಿ ಆಗುವಂತೆ ಮಾಡೋದು ನನ್ನ ಜವಾಬ್ದಾರಿ. ‘ಐ ಲವ್​ ಯೂ ಮೈ ಬೇಬಿ ಗರ್ಲ್​ಯಾವಾಗಲೂ ನಗುತ್ತಾ ಇರು. ಲವ್ ಯು ಮೈ ಪ್ರಿನ್ಸೆಸ್. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬೊಮ್ಮ ನೀನು, ನನ್ನ ಪ್ರೀತಿ’ ಎಂದು ಪತ್ರದಲ್ಲಿ ಸುಕೇಶ್ ಬರೆದುಕೊಂಡಿದ್ದಾನೆ. ಈ ಪತ್ರದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ವಿದ್ಯುತ್ ತಂತಿ ತಗುಲಿ ಪ್ರಾಣ ಬಿಟ್ಟ ಮೂರು ಆನೆಗಳು
ಜಾಕ್ವೆಲಿನ್ ಹಾಗೂ ಸುಕೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ. ಸುಕೇಶ್​ನಿಂದ ಹಲವು ದುಬಾರಿ ಗಿಫ್ಟ್ ಪಡೆದಿರುವುದರಿಂದ ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದಿಂದ ಎದುರಾಗುತ್ತಿರುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ.
Ever beautiful Jacqueline…100x folds…for you my baby girl 👉👉🤣🤣—Sukesh Chandrashekharpic.twitter.com/16dejnRIMM
— Gayathri Mani (@gayathrireports)March 6, 2023

VIDEO|ಹನುಮಂತನ ಚಿತ್ರದ ಎದುರೇ ಬಿಕಿನಿ ತೊಟ್ಟು ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
