ನವದೆಹಲಿ:ಅಕ್ರಮ ಆಸ್ತಿ ವರ್ಗಾವಣೆ, 200 ಕೋಟಿ ರೂ. ಸುಲಿಗೆ ಪ್ರಕರಣ ಸೇರಿದಂತೆ ಹಲವಾರು ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಮಹಾ ವಂಚಕ ಸುಕೇಶ್​ ಚಂದ್ರಶೇಖರ್​ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡೀಸ್​ ನಡುವಿನ ಆರೋಪ ಪ್ರತ್ಯಾರೋಪ ಮುಂದುವರಿದಿದೆ. ವಂಚಕ ಸುಕೇಶ್​ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ, ಹಣಸಹಾಯ ಪಡೆದಿದ್ದಾರೆ ಎಂಬ ಆರೋಪ ಜಾಕ್ವೆಲಿನ್ ಮೇಲಿದೆ.
ಜಾಕ್ವೆಲಿನ್​ ಹಾಗೂ ವಂಚಕ ಸುಕೇಶ್ ನಡುವಿನ ವಾಟ್ಸ್​ಆ್ಯಪ್​ ಚಾಟ್​ ಲೀಸ್ಟ್​ ಇದೀಗ ಇಂಡಿಯಾ ಟುಡೆಗೆ ಲಭ್ಯವಾಗಿದ್ದು, ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಕಪ್ಪು ಬಣ್ಣದ ಬಟ್ಟೆ ಧರಿಸಿ ಬರುವಂತೆ ಜಾಕಿಗೆ ಸುಕೇಶ್​​​ ಚಾಟ್​ ಮಾಡಿರುವುದು ಬಯಲಾಗಿದೆ.
2023ರ ಜೂನ್ 30ರಂದು ಸುಕೇಶ್‌ನಿಂದ ಜಾಕ್ವೆಲಿನ್‌ಗೆ ಬಂದ ವಾಟ್ಸ್​ಆ್ಯಪ್​ ಸಂದೇಶದಲ್ಲಿ, ಬೇಬಿ ಈ ತಿಂಗಳು 6 ರಂದು ನಮಗೆ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ನಿಮ್ಮನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಏನಾದರೂ ಹಾಜರುಪಡಿಸಿದರೆ ದಯವಿಟ್ಟು ಕಪ್ಪು ಕುರ್ತಾ ಧರಿಸಿ ಅಥವಾ ಕಪ್ಪು ಬಣ್ಣದ ಯಾವುದಾದರೂ ಬಟ್ಟೆಯನ್ನು ಧರಿಸಿ. ಇದರಿಂದ ನಾನು ನಿಮ್ಮನ್ನು ಸುಲಭವಾಗಿ ತಿಳಿಯುತ್ತೇನೆ. ನೀವು ನನ್ನ ಎಲ್ಲ ಸಂದೇಶಗಳನ್ನು ನೋಡಿದ್ದೀರಾ ಮತ್ತು ನೀವು ಪ್ರೀತಿಸುತ್ತೀರಾ ಎಂದು ಭಾವಿಸಿದ್ದೇನೆ. ಸೋ ಬೇಬಿ ಆ್ಯಂಡ್​ ಮಿಸ್ ಯೂ ಟನ್ ಐ ಲವ್ ಯೂ ಬೇಬಿ ಗರ್ಲ್, ನೀನು ಎಂದೆಂದಿಗೂ ನನ್ನವಳು ಎಂದು ಚಾಟ್​ ಮಾಡಿದ್ದಾನೆ.
ಆದಾಗ್ಯೂ ವಿಚಾರಣೆ ದಿನ ಜಾಕ್ವೆಲಿನ್​ ಕಪ್ಪು ಬಣ್ಣದ ಬಟ್ಟೆ ಧರಿಸದೇ ಆಗಮಿಸಿದ್ದಕ್ಕೆ ಸುಕೇಶ್​ ತುಂಬಾ ಬೇಸರಗೊಂಡಿದ್ದ. ಈ ಬಗ್ಗೆ ಚಾಟ್​ ಮಾಡಿರುವ ಸುಕೇಶ್​, ಬೇಬಿ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ನೀವು ಕಪ್ಪು ಬಟ್ಟೆಯನ್ನು ಧರಿಸದೇ ಬಂದಿದ್ದನ್ನು ನೋಡಿ ಬೇಸರವಾಯಿತು. ನೀವು ಏನು ಯೋಚಿಸುತ್ತಿದ್ದೀರಿ ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನನ್ನು ತಪ್ಪಿಸಿ ಓಡಿಹೋಗುವುದು ಅಥವಾ ನನ್ನನ್ನು ನಿರ್ಲಕ್ಷಿಸುವುದು ಯಾವುದೇ ರೀತಿಯಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ. ಎಲ್ಲ ರೀತಿಯಲ್ಲೂ ನಾನು ನಿಮ್ಮ ಪಕ್ಕದಲ್ಲೇ ಇರುತ್ತೇನೆ. ನಿಮಗೆ ಏನು ಬೇಕೋ ಅದನ್ನು ಯಾವುದೇ ಸಮಸ್ಯೆಗಳಿಲ್ಲದೆ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ಮತ್ತೆ ಹೇಳುತ್ತೇನೆ ಎಂದಿದ್ದಾನೆ.
ಮುಂದಿನ ವಿಚಾರಣ ವೇಳೆ ಬಹು ಬಣ್ಣದ ಕುರ್ತಾ ಅಥವಾ ಯಾವುದೇ ವಿನ್ಯಾಸವಿಲ್ಲದೆ ಸರಳವಾದ ಬಿಳಿ ಶರ್ಟ್ ಧರಿಸಿ ಬನ್ನಿ. ನೀವು ಈ ಸಂದೇಶವನ್ನು ನೋಡಿದ್ದೀರಿ ಎಂದು ನನಗೆ ತಿಳಿದಿದೆ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಸುಕೇಶ್​ ಮೆಸೇಜ್​ ಕಳುಹಿಸಿದ್ದಾನೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ಸಂಗೀತ ಬರಹಗಾರ ಲವ್ ರಂಜನ್, ಸಿನಿಮಾವೊಂದಕ್ಕೆ ನಿಮ್ಮನ್ನು ಸಂಪರ್ಕಿಸುತ್ತಾರೆ. ನಾನು ಅವನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಇದು ನಿನಗಾಗಿ ನನ್ನ ದೊಡ್ಡ ಉಡುಗೊರೆಯಾಗಿದೆ. ಲಿಲ್ಲಿಸ್ ನಾನು ನಿಮಗೆ ಸಂದೇಶ ಕಳುಹಿಸಿದ್ದೇನೆ ಮತ್ತು ನೀವು ಆ ಸಂದೇಶವನ್ನು ಇಷ್ಟಪಟ್ಟಿದ್ದೀರಿ ಮತ್ತು ನೋಡಿದ್ದೀರಿ ಎಂದು ಭಾವಿಸುತ್ತೇವೆ ಎಂದು ಸುಕೇಶ್​ ಮೆಸೇಜ್​ ಮಾಡಿದ್ದಾನೆ.
ಅಂದಹಾಗೆ ಸುಕೇಶ್‌ನಿಂದ ಹಣ ಪಡೆದಿರುವ ಕಾರಣ ಜಾಕ್‌ಲೀನ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆ ತಲೆಬಿಸಿಯ ನಡುವೆ ಸುಕೇಶ್ ಜೈಲಿನಿಂದಲೇ ಜಾಕ್‌ಲೀನ್‌ಗೆ ಪ್ರೇಮಪತ್ರಗಳನ್ನು ಬರೆಯುತ್ತಿದ್ದು, ಅದು ಮತ್ತಷ್ಟು ತಲೆನೋವು ತಂದೊಡ್ಡಿದೆ. ಹೀಗಾಗಿಯೇ ಜಾಕ್‌ಲೀನ್ ಸುಕೇಶ್ ಅವರಿಂದ ಪತ್ರಗಳನ್ನು ಕಳುಹಿಸಬೇಡಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರಂತೆ. ಇದರಿಂದ ಸಿಟ್ಟಿಗೆದ್ದಿರುವ ಸುಕೇಶ್ ಪತ್ರಮುಖೇನ ಜಾಕ್‌ಲೀನ್‌ಗೆ ಬೆದರಿಕೆ ಹಾಕಿದ್ದಾನಂತೆ. ‘ನೀವು ಯಾರನ್ನು ರಕ್ಷಣೆ ಮಾಡುತ್ತಿದ್ದೀರೋ, ಅವರೇ ನಿಮ್ಮ ಬೆನ್ನ ಹಿಂದೆ ಚಾಕು ಹಾಕುತ್ತಾರೆಂದರೆ ಹೇಗೆ? ನಾನು ಹೀಗಾಗುತ್ತೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ. ಅವರೇ ಬಲಿಪಶುವಿನಂತೆ ಬಿಂಬಿಸಿಕೊಂಡು ನನ್ನನ್ನು ಕೆಟ್ಟವನನ್ನಾಗಿ ಮಾಡುತ್ತಿದ್ದಾರೆ. ಇದರಿಂದ ನನಗೆ ಅತೀವ ನೋವಾಗಿದೆ. ಹಾಗಂತ ನಾನು ಸುಮ್ಮನೆ ಕೂರುವುದಿಲ್ಲ. ನಾನು ಅವರಿಗಾಗಿ ಹಣಸಂದಾಯ ಮಾಡಿರುವ ಮಾಹಿತಿಯನ್ನು ಬಹಿರಂಗಗೊಳಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾನೆ.
ಏನಿದು ಕೇಸ್​? ಯಾರೀ ಸುಕೇಶ್ ಚಂದ್ರಶೇಖರ್?ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಕುಟುಂಬದಿಂದ ತಾನು ಬಂದವನು ಎಂದು ಹೇಳಿಕೊಂಡಿದ್ದ ಈ ಸುಕೇಶ್‌ ಚಂದ್ರಶೇಖರ್‌ ಜಾಕ್ವೆಲಿನ್ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದ. ತನ್ನ ಹೆಸರನ್ನು ಸುರೇಶ್‌ ಎಂದು ಹೇಳಿಕೊಂಡಿದ್ದ. ಜಾಕ್ವೆಲಿನ್‌ ಜತೆ ಸ್ನೇಹ ಬೆಳೆಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಈತ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಚೇರಿ ಸಂಖ್ಯೆಯನ್ನು ನಕಲು ಮಾಡಿ ಜಾಕ್ವೆಲಿನ್‌ ಅವರನ್ನು ಸಂಪರ್ಕಿಸಿದ್ದಾನೆ. ನಂತರ ಆಕೆಯ ಸ್ನೇಹ ಬೆಳೆಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಜಾಕ್ವೆಲಿನ್ ಅವರ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕು. ಸನ್ ಟಿವಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ. ನಾನು ಜಯಲಲಿತಾ ಕುಟುಂಬಸ್ಥ, ಚೆನ್ನೈನಲ್ಲಿ ವಾಸವಾಗಿದ್ದೇನೆ’ ಎಂದು ಈತ ಜಾಕ್ವೆಲಿನ್‌ಗೆ ಹೇಳಿದ್ದಾನೆ. ನಂತರ ಆಕೆಯ ಮೇಕಪ್ ಆರ್ಟಿಸ್ಟ್‌ಗೆ ಗೃಹ ಸಚಿವ ಅಮಿತ್ ಷಾ ಅವರ ಕಚೇರಿಯಿಂದ ಕರೆ ಬಂದಂತೆ ಕರೆ ಮಾಡಿದ್ದಾನೆ. ಆ ಮೂಲಕ ಸುಕೇಶ್ ಸರ್ಕಾರದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಜಾಕ್ವೆಲಿನ್‌ ತಿಳಿದುಕೊಂಡು ಮೋಸ ಹೋಗಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಸುಕೇಶ್‌ ಚಂದ್ರಶೇಖರ್ ರೋಹಿಣಿ ಜೈಲಿನಲ್ಲಿದ್ದಾಗ, ಫೋನ್ ವಂಚನೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ದಂಧೆಯನ್ನು ನಡೆಸುತ್ತಿದ್ದ. ಈತ ವಂಚನೆಯ ಮಾಸ್ಟರ್‌ಮೈಂಡ್. 17 ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನ ಭಾಗವಾಗಿದ್ದಾರೆ. ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಇರುವಾಗಲೂ ತಂತ್ರಜ್ಞಾನದ ಸಹಾಯದಿಂದ ಜನರನ್ನು ವಂಚಿಸುತ್ತಿದ್ದ. ಕರೆ ಮಾಡಿದ ಫೋನ್ ಸಂಖ್ಯೆಯ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು ಎಂಬಂತೆ ಕರೆ ಮಾಡಿದವರಿಗೆ ನಂಬರ್‌ ಡಿಸ್​​ಪ್ಲೇ ಆಗುತ್ತಿತ್ತು. ಇದರಿಂದ ಎಲ್ಲರೂ ಮೋಸ ಹೋಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾಕ್ವೆಲಿನ್​ ಸಿನಿಮಾ ವಿಚಾರಕ್ಕೆ ಬಂದರೆ ಜಾಕ್‌ಲೀನ್ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದಲ್ಲಿ ಬಿಜಿಯಿದ್ದಾರೆ.(ಏಜೆನ್ಸೀಸ್​)
ರಾರಾ ರಕ್ಕಮ್ಮಂಗೆ ಜೈಲಿನಿಂದಲೇ ಧಮಕಿ ಹಾಕಿದ ವಂಚಕ ! ಆಗಿದ್ದೇನು ಗೊತ್ತಾ?

ಸುಕೇಶ್​​ಗೆ ಸೇರಿದ 11 ಐಷಾರಾಮಿ ವಾಹನಗಳ ಹರಾಜು! ಯಾವ್ಯಾವ ಕಾರುಗಳು? ಬೆಲೆ ಎಷ್ಟು? ಇಲ್ಲಿದೆ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
