
ಟೋಕಿಯೋ:ಕೆಲವು ದಿನಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್​ ಚೋಪ್ರ ಅವರು ಭಾರತಕ್ಕೆ ಚಿನ್ನದ ಪದಕ ಗೆದ್ದುತಂದಿದ್ದರು. ಇದೀಗ ಅಲ್ಲೇ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 2020ರಲ್ಲಿ ಇಂದಿನ ಪುರುಷರ ಜಾವೆಲಿನ್​ ಎಸೆತ ಎಫ್​64 ಅಂತಿಮ ಸ್ಪರ್ಧೆಯಲ್ಲಿ ಭಾರತದ ಸುಮಿತ್​ ಅಂತಿಲ್​ ಅಪ್ರತಿಮ ಆಟ ಪ್ರದರ್ಶಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಮೊದಲನೇ ಎಸೆತದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಸುಮಿತ್​, ನಂತರದ ಪ್ರಯತ್ನಗಳಲ್ಲಿ ತಮ್ಮ ಹಿಂದಿನ ದಾಖಲೆಗಳನ್ನು ತಾವೇ ಮುರಿದು ಗಮನ ಸೆಳೆದರು. ಮೊದಲನೇ ಪ್ರಯತ್ನದಲ್ಲಿ 66.95ಮೀಟರ್​ ದೂರ ಎಸೆತ ಸಾಧಿಸಿ ಪ್ಯಾರಾಲಿಂಪಿಕ್ಸ್​​ನಲ್ಲಿ ವಿಶ್ವದಾಖಲೆ ಮಾಡಿದರು. ನಂತರ ಎರಡನೇ ಪ್ರಯತ್ನದಲ್ಲಿ 68.08ಮೀಟರ್​ ದೂರ ಎಸೆದರು, ಐದನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆದು ದಾಖಲೆ ಸಾಧಿಸಿದರು. ಇದರೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ:ದೇಶ-ವಿದೇಶದ ಚಿತ್ರೋತ್ಸವಗಳಲ್ಲಿ ‘ಅವಲಕ್ಕಿ’ ಘಮ
ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಇಂದು ಬೆಳಿಗ್ಗೆ ಅವನಿ ಲೇಖಾರ ಅವರು ಶೂಟಿಂಗ್​ನಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದ್ದರು. ಜಾವೆಲಿನ್​ ಥ್ರೋ ಎಫ್​46 ವಿಭಾಗದಲ್ಲಿ ದೇವೇಂದ್ರ ಝಾಝರಿಯ ಎರಡನೇ ಸ್ಥಾನ ಪಡೆದು ರಜತ ಪದಕ ಗೆದ್ದಿದ್ದರು. ಇದೀಗ ಮತ್ತೊಂದು ಚಿನ್ನದ ಪದಕವನ್ನು ಸುಮಿತ್​ ಅಂತಿಲ್​ ಅವರು ಎಫ್​64 ವಿಭಾಗದ ಜಾವೆಲಿನ್​ ಥ್ರೋನಲ್ಲೇ ಪಡೆದಿರುವುದು ವಿಶೇಷವಾಗಿದೆ.(ಏಜೆನ್ಸೀಸ್)
ಪ್ಯಾರಾಲಿಂಪಿಕ್ಸ್​: ವಿನೋದ್​ಕುಮಾರ್​ ಕೈತಪ್ಪಿದ ಕಂಚಿನ ಪದಕ
ಗೂನು ಬೆನ್ನು ನಿವಾರಣೆಗೆ ಈ ಯೋಗಾಸನ ಸಹಕಾರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
